1. ಸುದ್ದಿಗಳು

ನಾಳೆ 12 ಗಂಟೆಗೆ ದೇಶದ 9 ಕೋಟಿ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ

ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಯೋಜನೆಯ 7 ನೇ ಕಂತನ್ನು ನಾಳೆ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 7ನೇ ಕಂತಿನ ಹಣವನ್ನು ಡಿಸೆಂಬರ್ 25 ರಂದು ಮಧ್ಯಾಹ್ನ 12 ಗಂಟೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ಈ ಬಾರಿ 18,000 ಕೋಟಿ ರೂಪಾಯಿ ಹಣವನ್ನು ಬಟನ್ ಒತ್ತುವ ಮೂಲಕ  ಏಕಕಾಲದಲ್ಲಿ ದೇಶದ 9 ಕೋಟಿ ರೈತರ ಖಾತೆಗೆ ಹಣ ಜಮೆ ಮಾಡಲಿದ್ದಾರೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮವನ್ನು ನೆರವೇರಿಸಿ 12 ಗಂಟೆಗೆ  2000 ರೂಪಾಯಿಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು.

9 ಕೋಟಿ ರೈತರ ಖಾತೆಗಳಲ್ಲಿ ಹಣ ಬರಲಿದೆ:

ಪ್ರಧಾನಿ ಕಚೇರಿ (ಪಿಎಂಒ) ನೀಡಿರುವ ಮಾಹಿತಿಯ ಪ್ರಕಾರ,  ಒಂದು ಗುಂಡಿಯನ್ನು ಒತ್ತುವ ಮೂಲಕ ಪಿಎಂ ಮೋದಿ ಅವರು ದೇಶದ 9 ಕೋಟಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಫಲಾನುಭವಿ ರೈತ ಕುಟುಂಬಗಳಿಗೆ 18 ಸಾವಿರ ಕೋಟಿಗೂ ಹೆಚ್ಚು ಹಣವನ್ನು ವರ್ಗಾಯಿಸಲಿದ್ದಾರೆ. ನಂತರ ಕಾರ್ಯಕ್ರಮದಲ್ಲಿ ಮೋದಿ ಆರು ರಾಜ್ಯಗಳ ರೈತರೊಂದಿಗೆ ಸಂವಹನ ನಡೆಸಲಿದ್ದಾರೆ.

Share your comments

Top Stories

View More

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.