ಕಚ್ಚಾತೈಲದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ಸಹ ಗಗನಕ್ಕೇರುತ್ತಿದೆ, ಆದರೆ ಇಂದಿನ ದಿನಮಾನದಲ್ಲಿ ವಾಹನಗಳು ನಮಗೆ ಅತ್ಯವಶ್ಯಕ, ಹಾಗಾಗಿ ನಮಗೆ ಪೆಟ್ರೋಲ್ ಹಾಗೂ ಡೀಸೆಲ್ ಕೂಡ ಅಷ್ಟೇ ಅತ್ಯವಶ್ಯಕ, ಆದರೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ.
ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು 25 ಪೈಸೆ ಹೆಚ್ಚಿಸಿವೆ, ಇದರ ಪರಿಣಾಮದಿಂದಾಗಿ ನಮ್ಮ ದೇಶದ ರಾಜಧಾನಿಯಾದ ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿವೆ,ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 85 ರೂಪಾಯಿ ಸಮೀಪಕ್ಕೆ ಬಂದಿದೆ, ಹಾಗೂ ಇನ್ನೊಂದೆಡೆ ಮುಂಬೈನಲ್ಲಿ ಡೀಸೆಲ್ ಬೆಲೆ 82 ರೂಪಾಯಿಗಳ ಸನಿಹಕ್ಕೆ ಬಂದಿದೆ.
ಇದುವರೆಗೆ ನಮ್ಮ ರಾಷ್ಟ್ರದ ರಾಜಧಾನಿಯಾದ ದೆಹಲಿಯಲ್ಲಿ ಪೆಟ್ರೋಲ್ ಸಾರ್ವಕಾಲಿಕ ದಾಖಲೆ ಬೆಲೆಯನ್ನು ಕಂಡಿದ್ದು ಪ್ರತಿ ಲೀಟರ್ ಗೆ 84.95 ರೂಪಾಯಿಗೆ ಮಾರಾಟವಾಗಿದೆ, ಹಾಗೂ ಇನ್ನೊಂದೆಡೆ ಡೀಸೆಲ್ ಬೆಲೆಯನ್ನು ನೋಡಿದಾಗ ಅಲ್ಲಿ ಸ್ವಲ್ಪ ಕಡಿಮೆ ಇದೆ ಅಂದರೆ 75.13 ರೂಪಾಯಿಗಳಷ್ಟು ಇದೆ.
ಇನ್ನು ಇನ್ನೊಂದೆಡೆ ನಮ್ಮ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಕಡೆ ನಾವು ಗಮನ ಹರಿಸಿದಾಗ ಪೆಟ್ರೋಲ್ ಬೆಲೆ 87.82 ರಷ್ಟಿದೆ ಹಾಗೂ ಡೀಸೆಲ್ ಬೆಲೆ 79.67 ರೂಪಾಯಿಗಳನ್ನು ತಲುಪಿದೆ.
Share your comments