ದೇಶದಲ್ಲಿ ಸತತ 19ನೇ ದಿನವೂ ತೈಲ ಬೆಲೆಯಲ್ಲಿ ಹೆಚ್ಚಳವಾಗಿದೆ. ನಿರಂತರವಾಗಿ ಏರಿಕೆಯಾಗುತ್ತಿರುವ ಇಂಧನ ದರದಲ್ಲಿ ಗುರುವಾರ ಮತ್ತೆ ಹೆಚ್ಚಳವಾಗಿದ್ದು, ಪೆಟ್ರೋಲ್ 16 ಪೈಸೆ, ಡೀಸೆಲ್ 14 ಪೈಸೆ ಏರಿಕೆಯಾಗಿದೆ.
ಇನ್ನೂ ದರ ಹೆಚ್ಚಳದಿಂದಾಗಿ ವಾಹನ ಸವಾರರಿಗೆ ತಲೆಬಿಸಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 0.14 ರಷ್ಟು ಹಾಗೂ ಪೆಟ್ರೋಲ್ 0.16 ರಷ್ಟು ಹೆಚ್ಚಳವಾಗಿದೆ. ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್ 82.35 ಹಾಗೂ ಡೀಸೆಲ್ ಬೆಲೆ 75.96 ತಲುಪಿದೆ.
ದೆಹಲಿಯಲ್ಲಿ ಡೀಸೆಲ್ ದರ 80.02 ಮತ್ತು ಪೆಟ್ರೋಲ್ ದರ 79.92 ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 86.54 ಹಾಗೂ ಡಿಸೆಲ್ ದರ 77.76, ಹೆಚ್ಚಳವಾಗಿದೆ. ಈ ತಿಂಗಳ ಜೂನ್ 7 ರಿಂದ ಆರಂಭವಾದ ಇಂಧನಗಳ ಬೆಳ ಸತತವಾಗಿ 19 ನೇ ದಿನವೂ ಏರಿಕೆಯಾಗಿದೆ. ಇದರಿಂದಾಗಿ ಡೀಸೆಲ್ ಪ್ರತಿ ಲೀಟರ್‌ಗೆ 10.63 ಮತ್ತು ಪೆಟ್ರೋಲ್ 8.21 ರಷ್ಟು ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಅಗ್ಗ, ಡೀಸೆಲ್ ತುಟ್ಟಿ:
ಪೆಟ್ರೋಲ್‌ನ ಬೆಲೆ ದೆಹಲಿಯಲ್ಲಿ ಲೀಟರ್‌ಗೆ 79.92 ರೂ. ಹಾಗೂ ಡೀಸೆಲ್‌ಗೆ 80.02 ರೂ.ರಷ್ಟಿದೆ. ಮುಂದಿನ ದಿನಗಳಲ್ಲೂ ಕೂಡಾ ಇಂಧನ ಬೆಲೆ ಏರುಗತಿಯಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಗೋಚರ ಆಗುತ್ತಿವೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಅಲ್ಲಿ ಇಳಿಯುತ್ತಿದ್ದರೂ ಇಲ್ಲಿ ಏರುತ್ತಿದೆ ಇಂಧನ ದರ:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿತ ಕಾಣುತ್ತಿದ್ದೂ ಭಾರತದಲ್ಲಿ ಮಾತ್ರ ಇಂಧನ ದರ ದಿನೇ ದಿನೇ ಏರುತ್ತಲೇ ಇದೆ. ಇದಕ್ಕೆ ಪ್ರಮುಖವಾಗಿ ಕೋವಿಡ್-19 ಸಂಬಂಧಿತ ಲಾಕ್ ಡೌನ್ ಪರಿಸ್ಥಿತಿ ತಂದಿಟ್ಟ ಸಂಕಷ್ಟವೇ ಕಾರಣವಾಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
Share your comments