1. ಸುದ್ದಿಗಳು

ಕಬ್ಬು ಬೆಳಗಾರರಿಗೆ 21 ಕೋಟಿ ರೂ.ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Hitesh
Hitesh
Payment of Rs. 21 Crore to Sugarcane Belgar: Chief Minister Basavaraja Bommai

ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್‌ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ. 

1. ಕನಿಷ್ಠ ಬೆಂಬಲ ಬೆಲೆ ಜಾರಿ ಸಂಬಂಧ ಲೋಕಸಭೆಯಲ್ಲಿ ಚರ್ಚೆ: ವಾದ- ವಿವಾದ
2. ಕುರ್‌ ಕುರೇ ಪ್ಯಾಕೇಟ್‌ನಲ್ಲಿ ಸಿಕ್ತು 500 ರೂ. ಗರಿಗರಿ ನೋಟು!
3. ಆರ್‌ಬಿಐ ಚಿನ್ನದ ಬಾಂಡ್‌:  ಡಿಸೆಂಬರ್‌ 19ರಿಂದ ಮೂರನೇ ಕಂತು
4. ನೇಕಾರ ಸಮ್ಮಾನ್‌ ಯೋಜನೆ: 5 ಸಾವಿರ ಸಹಾಯಧನಕ್ಕೆ ಚಾಲನೆ
5. ಗೋಧಿ ಕಳ್ಳತನ: ಟ್ರಕ್‌ಗೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ ಚಾಲಕ!
6. ಬೆಂಗಳೂರು- ಚೆನ್ನೈ ಹೈಸ್ಪೀಡ್‌ ರೈಲು ಯೋಜನೆಗೆ ಡಿಪಿಆರ್‌!
7. ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಲು ಆಗ್ರಹ: ಅರಸೀಕೆರೆ ಬಂದ್‌
8. ಅಖಿಲ ಭಾರತ ಕಿಸಾನ್ ಸಭಾದ 35ನೇ ರಾಷ್ಟ್ರೀಯ ಸಮಾವೇಶ 
9. ಅಬ್ ಕಿ ಬಾರ್, ಕಿಸಾನ್ ಸರ್ಕಾರ್ ಎಂದ ಚಂದ್ರಶೇಖರರಾವ್‌
10. ಕೃಷಿ ಜಾಗರಣಗೆ ಟಿಫ್ಲಾ ಗ್ಲೋಬಾಯಿಲ್‌ ಇಂಡಿಯಾ ಪ್ರಶಸ್ತಿಯ ಗರಿ
11. ಕಬ್ಬು ಬೆಳಗಾರರಿಗೆ 21 ಕೋಟಿ ರೂ.ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

---------  
1. ದೇಶದಲ್ಲಿ ರೈತರ ಸರಣಿ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಕೃಷಿ ಕಾಯ್ದೆಗಳ ಕುರಿತು ಶುಕ್ರವಾರ ಲೋಕಸಭೆಯಲ್ಲಿ ಚರ್ಚೆ ನಡೆಯಿತು. ಕಳೆದ ವರ್ಷ, ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದ  ಕೃಷಿ ಕಾನೂನುಗಳ ವಿರುದ್ಧ ವಿವಿಧ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಒಂದು ವರ್ಷದ ಆಂದೋಲನವನ್ನು ನಡೆಸಿದ್ದವು. ಅಂತಿಮವಾಗಿ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸುವುದಾಗಿ ರೈತರಿಗೆ ಭರವಸೆ ನೀಡಿತ್ತು. ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ದೀಪೇಂದ್ರ ಸಿಂಗ್ ಹೂಡಾ ಈ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ಸರ್ಕಾರವು ಎಂಎಸ್‌ಪಿ ಒದಗಿಸುವ ಕೆಲಸ ಮಾಡುತ್ತಿದೆ. ಮೂಲ ಬೆಲೆಗಳ ಹಿನ್ನೆಲೆಯಲ್ಲಿ ಸಮಿತಿಯನ್ನು ಸಹ ರಚಿಸಲಾಗಿದೆ. ಈ ಸಮಿತಿಯಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ಇರಬೇಕು ಎಂದರು. ರಾಜ್ಯಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
--------- 

--------- 
2. 5ರೂಪಾಯಿಯ ಕುರ್‌ಕುರೇ ಪ್ಯಾಕೇಟ್‌ನಲ್ಲಿ 500 ರೂಪಾಯಿಯ ಗರಿಗರಿ ನೋಟು ಸಿಕ್ಕಿರುವ ಅಚ್ಚರಿಯ ಘಟನೆ ರಾಯಚೂರಿನಲ್ಲಿ ನಡೆದಿದೆ. ಇಲ್ಲಿನ ಲಿಂಗಸೂಗೂರು ತಾಲ್ಲೂಕಿನ ಹುನೂರು ಗ್ರಾಮದಲ್ಲಿ ಜನರಿಗೆ ಕುರ್‌ಕುರೇಯಲ್ಲಿ 500ರೂಪಾಯಿ ನೋಟುಗಳು ಸಿಕ್ಕಿವೆ. ಒಬ್ಬ ಗ್ರಾಹಕನಿಗೆ 5-6 ಮತ್ತೊಬ್ಬನಿಗೆ 2-3 ನೋಟುಗಳು ಸಿಕ್ಕಿವೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಜನ ಮುಗಿಬಿದ್ದು ಕುರ್‌ಕುರೇ ಖರೀದಿಸಿದ್ದಾರೆ. ಇದರಿಂದ ಅಂಗಡಿಯಲ್ಲಿ ಸ್ಟಾಕ್ ಖಾಲಿಯಾಗಿ, ಮಾಲೀಕ ಪುನಃ ಕುರ್‌ಕುರೇ ತರಿಸಿದ್ದಾರೆ. ಆದರೆ, ಅವುಗಳಲ್ಲಿ ನೋಟು ಸಿಕ್ಕಿಲ್ಲ.  
---------

Debate in Lok Sabha on implementation of Minimum Support Price: Controversy

---------
3. ಭಾರತೀಯ ರಿಸರ್ವ್ ಬ್ಯಾಂಕ್‌ ಎರಡು ಕಂತುಗಳಲ್ಲಿ ಚಿನ್ನದ ಬಾಂಡ್‌ ಯೋಜನೆಯನ್ನು ಪರಿಚಯಿಸಿದ್ದು, ಮೂರನೇ ಕಂತು ಡಿಸೆಂಬರ್‌ 19ರಿಂದ ಜಾರಿಯಾಗಲಿದೆ. 2022–23ನೇ ಸಾಲಿನ ಚಿನ್ನದ ಬ್ಯಾಂಡ್‌ ಯೋಜನೆಯ ಮೂರನೇ ಕಂತು ಇದಾಗಿದೆ. ಡಿಸೆಂಬರ್‌ ಮತ್ತು ಮಾರ್ಚ್‌ ತಿಂಗಳಿನಲ್ಲಿ ಸಾರ್ವಜನಿಕರು ಬಾಂಡ್‌ ಖರೀದಿಸಬಹುದಾಗಿದೆ. ಖರೀದಿ ಪ್ರಕ್ರಿಯೆ ಸೋಮವಾರ ಪ್ರಾರಂಭವಾಗಿ ಶುಕ್ರವಾರ ಮುಗಿಯಲಿದೆ. ನಾಲ್ಕನೇ ಕಂತು ಮಾರ್ಚ್‌ 6 ರಿಂದ 10ರವರೆಗೆ ಇರಲಿದೆ. ಬಾಂಡ್‌ ಅವಧಿಯು 8 ವರ್ಷ ಇದ್ದು, ಅವಧಿ ಮುಗಿಯುವುದಕ್ಕೂ ಮುನ್ನ ಅಂದರೆ 5 ವರ್ಷಗಳ ಬಳಿಕ ನಗದೀಕರಿಸಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. 
---------
4. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ನೇಕಾರ ಸಮ್ಮಾನ್ ಯೋಜನೆಯಡಿ ಕೈಮಗ್ಗ ನೇಕಾರ ಸಹಾಯಧನ ವಿತರಣೆ ಯೋಜನೆಗೆ ಚಾಲನೆ ನೀಡಿದರು. ಕೈಮಗ್ಗ ನೇಕಾರರಿಗೆ ತಲಾ ಐದು ಸಾವಿರ ರೂಪಾಯಿ ನೀಡುವ ಯೋಜನೆ ಇದಾಗಿದೆ. ಕೈಮಗ್ಗ ನೇಕಾರರ ಪಾರಂಪರಿಕ ಕಲೆ ಮತ್ತು ಅವರ ಶ್ರಮ, ಕೊರೊನಾ ಸೋಂಕಿನಿಂದ ಉಂಟಾದ ಸಂಕಷ್ಟ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ 2020-21ನೇ ಸಾಲಿನಿಂದ ಅನ್ವಯವಾಗುವಂತೆ ‘ನೇಕಾರ ಸಮ್ಮಾನ್‌’ ಎಂಬ ಹೊಸ ಯೋಜನೆಯನ್ನು ಪರಿಚಯಿಸಲಾಗಿದೆ. ಇದು ಕೈಮಗ್ಗ ನೇಕಾರರಿಗೆ ಸಹಾಯಕವಾಗಲಿದೆ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ್‌ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ. ನೇರ ನಗದು ವರ್ಗಾವಣೆ ಮೂಲಕ ಪ್ರತಿ ಕೈಮಗ್ಗ ನೇಕಾರರಿಗೆ ವಾರ್ಷಿಕ ಆರ್ಥಿಕ ನೆರವು ಐದು ಸಾವಿರ ರೂಪಾಯಿಯಂತೆ 23.43 ಕೋಟಿ ಮೊತ್ತವನ್ನು ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡುವುದಕ್ಕೆ ಚಾಲನೆ ನೀಡಲಾಗಿದೆ.  
---------
5. ಟ್ರಕ್‌ನಿಂದ ಎರಡು ಮೂಟೆ ಗೋಧಿ ಕಳವು ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಟ್ರಕ್ ಮುಂದೆ ಕಟ್ಟಿಹಾಕಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಪಂಜಾಬ್‌ನ ಮುಕ್ತಸರ್ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು ಟ್ರಕ್ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಟ್ರಕ್ ಚಾಲಕ ಮಾಲೋಟ್‌ನಿಂದ ಗೋಧಿಯೊಂದಿಗೆ ಮುಕ್ತಸರಕ್ಕೆ ಬರುತ್ತಿದ್ದ. ಅಷ್ಟರಲ್ಲಿ ದಾರಿಯಲ್ಲಿದ್ದ ಕೆಲವು ಹುಡುಗರು ಅವನ ಟ್ರಕ್‌ನ ಮೇಲೆ ಹತ್ತಿ ಗೋಧಿ ಮೂಟೆಗಳನ್ನು ರಸ್ತೆಗೆ ಎಸೆದಿದ್ದಾರೆ. ವಿಷಯ ತಿಳಿದ ಟ್ರಕ್ ಚಾಲಕ ಲಾರಿ ನಿಲ್ಲಿಸಿ ಅವರನ್ನು ಹಿಡಿಯಲು ಯತ್ನಿಸಿದ್ದಾನೆ. ಈ ವೇಳೆ ಎಲ್ಲರೂ ತಪ್ಪಿಸಿಕೊಂಡಿದ್ದು, ಟ್ರಕ್‌ನಲ್ಲಿದ್ದ ಯುವಕನೊಬ್ಬ ಸಿಕ್ಕಿಹಾಕಿಕೊಂಡಿದ್ದಾನೆ. ಚಾಲಕ ಆ ಯುವಕನನ್ನು ಟ್ರಕ್‌ನ ಮುಂಭಾಗಕ್ಕೆ ಕಟ್ಟಿಹಾಕಿ ನಗರದ ತುಂಬಾ ವಾಹನ ಚಲಾಯಿಸಿ ಪೊಲೀಸರಿಗೆ ಒಪ್ಪಿಸಿದ್ದಾನೆ. 
---------

ಕಬ್ಬು ಬೆಳೆಗಾರರಿಗೆ ವಂಚನೆ: 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ! 

RBI Gold Bond: Third tranche from December 19

---------
6. ಚೆನ್ನೈ–ಬೆಂಗಳೂರು–ಮೈಸೂರು ಸೇರಿದಂತೆ ದೇಶದ ಆರು ಮಾರ್ಗಗಳಲ್ಲಿ ಹೈ ಸ್ಪೀಡ್‌ ರೈಲು ಯೋಜನೆ ಆರಂಭಿಸುವ ನಿಟ್ಟಿನಲ್ಲಿ ಸರ್ವೆ ಹಾಗೂ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ಮುಂಬೈ–ಅಹಮದಾಬಾದ್‌ ಹೈ ಸ್ಪೀಡ್‌ ರೈಲು ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಹಣಕಾಸಿನ ನೆರವನ್ನು  ಜಪಾನ್‌ ಸರ್ಕಾರ ನೀಡುತ್ತಿದೆ ಎಂದಿದ್ದಾರೆ.
---------
7. ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ನಡೆದ ಅರಸೀಕೆರೆ ಬಂದ್‌ ಯಶಸ್ವಿಯಾಗಿದೆ. ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ರೈತರು ಬಂದ್‌ಗೆ ಕರೆ ನೀಡಿದ್ದರು. ಹಳ್ಳಿಗಳಿಂದ ಬಂದ ಸಾವಿರಾರು ರೈತರು ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು. ಅರಸೀಕೆರೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ ರೈತರು ಕೊಬ್ಬರಿಗೆ ಶೀಘ್ರವೇ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು. ಅರಸೀಕೆರೆ ಪ್ರವಾಸಿಮಂದಿರದಿಂದ ಸಾವಿರಾರು ರೈತರು ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಎಪಿಎಂಸಿ ಮಾರುಕಟ್ಟೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆ ಮೆರವಣಿಗೆ ವೇಳೆ ಸಾರ್ವಜನಿಕರಿಗೆ ಉಚಿತ ತೆಂಗಿನ ಕಾಯಿಗಳನ್ನು ವಿತರಿಸಲಾಯಿತು.
---------  
8. ಅಖಿಲ ಭಾರತ ಕಿಸಾನ್ ಸಭಾ 35ನೇ ರಾಷ್ಟ್ರೀಯ ಸಮಾವೇಶನ ನಾಲ್ಕು ದಿನಗಳ ಕಾಲ ಕೇರಳದ ತ್ರಿಶೂರಿನಲ್ಲಿ ನಡೆಯಿತು. ಸಮಾವೇಶದಲ್ಲಿ  26 ರಾಜ್ಯಗಳಿಂದ ರೈತ ಸದಸ್ಯರನ್ನು ಪ್ರತಿನಿಧಿಸುವ 700ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಈ ರಾಷ್ಟ್ರೀಯ ಸಮಾವೇಶದ ಮೂಲಕ ರೈತರಿಗಾಗಿ ನಾನಾ ಬೇಡಿಕೆಗಳನ್ನು ಮುಂಡಿಸಲಾಯಿತು. ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಮೂಲ ಬೆಲೆಯನ್ನು ರಕ್ಷಿಸಲು ಕಿಸಾನ್ ಸಭಾದ ಸದಸ್ಯರು ಆಗ್ರಹಿಸಿದರು.   ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಕೃಷಿ ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗುತ್ತಿದೆ ಎಂದು ರೈತ ಪ್ರತಿನಿಧಿಗಳು ಆರೋಪಿಸಿದರು.  
---------  
9. ಬಿಆರ್‌ಎಸ್ ಅಧ್ಯಕ್ಷ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಸಂಕ್ರಾಂತಿ ನಂತರ ಮಹಾರಾಷ್ಟ್ರದಲ್ಲಿ ಪಕ್ಷದ ಮೊದಲ ರೈತ ಸಮಾವೇಶ ಸಾರ್ವಜನಿಕ ಸಭೆ ನಡೆಸಲು ಮುಂದಾಗಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಎಸ್.ಚಂದ್ರಶೇಖರ ರಾವ್ ಅವರು ಇತ್ತೀಚೆಗೆ ದೆಹಲಿಯಲ್ಲಿ ರಾಷ್ಟ್ರೀಯ ಕಚೇರಿಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದೇಶಾದ್ಯಂತ ರೈತ ಸಂಘಟನೆಗಳ ಮುಖಂಡರನ್ನು ಭೇಟಿ ಮಾಡುವುದಾಗಿ ತಿಳಿಸಿದರು. ಮೂಲಗಳ ಪ್ರಕಾರ, BRS ಹೊಸದಾಗಿ ಪ್ರಾರಂಭಿಸಿರುವ ಭಾರತ್ ರಾಷ್ಟ್ರ ಕಿಸಾನ್ ಸಮಿತಿಯ ಮೂಲಕ ಮಹಾರಾಷ್ಟ್ರದಲ್ಲಿ ಮೇಳವನ್ನು ಆಯೋಜಿಸಲಾಗುತ್ತಿದೆ. ಬಿಆರ್‌ಎಸ್‌ನ ಪ್ರಮುಖ ಘೋಷಣೆ “ಅಬ್ ಕಿ ಬಾರ್, ಕಿಸಾನ್ ಸರ್ಕಾರ್” ಆಗಿರಲಿದೆ ಎಂದು ಚಂದ್ರಶೇಖರ ರಾವ್ ತಿಳಿಸಿದ್ದಾರೆ.  ಮಹಾರಾಷ್ಟ್ರ, ತೆಲಂಗಾಣ ಹಾಗೂ ಕರ್ನಾಟಕದಲ್ಲಿಯೂ ರೈತರ ಸಮಾವೇಶ  ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

 ---------  
10. ಕೃಷಿಜಾಗರಣಕ್ಕೆ ಈಗ ಮತ್ತೊಂದು ಪ್ರಶಸ್ತಿಯ ಗರಿ ಸಿಕ್ಕಿದೆ. ಗೋವಾದಲ್ಲಿ ಡಿಸೆಂಬರ್ 16 ರಂದು ನಡೆದ ಮೊದಲ ಅಗ್ರಿ ಇಂಡಿಯಾ ಸ್ಟಾರ್ಟ್ಅಪ್ ಅಸೆಂಬ್ಲಿ ಮತ್ತು ಪ್ರಶಸ್ತಿಗಳ ಸಂದರ್ಭದಲ್ಲಿ ಟಿಫ್ಲಾ ಗ್ಲೋಬಾಯಿಲ್‌ ಇಂಡಿಯಾವು ಕೃಷಿ ಉದ್ಯಮಕ್ಕೆ ನಿರಂತರ ಕೊಡುಗೆ ನೀಡುತ್ತಿರುವುದನ್ನು ಗುರುತಿಸಿ ಕೃಷಿ ಜಾಗರಣ ಅನ್ನು ಗೌರವಿಸಿದೆ. ಮುಖ್ಯ ಅತಿಥಿಗಳಾಗಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಜಂಟಿ ನಿರ್ದೇಶಕ ಜಿತೇಂದ್ರ ಜುಯಲ್ ಅವರು ಕೃಷಿ ಜಾಗರಣದ ಪ್ರಧಾನ ಸಂಪಾದಕ ಎಂ.ಸಿ.ಡೊಮಿನಿಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅಗ್ರಿ ಇಂಡಿಯಾ ಸ್ಟಾರ್ಟ್ಅಪ್ ಅಸೆಂಬ್ಲಿ ಮತ್ತು ಪ್ರಶಸ್ತಿಗಳ ಅಡಿಯಲ್ಲಿ, ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಕಂಪನಿಗಳನ್ನು ಈ ವರ್ಷ ಗೌರವಿಸಲಾಗಿದೆ. ಅಲ್ಲದೇ ಯುಕೆ ಮೂಲದ ಎಪಿಎಸಿ ಇನ್‌ಸೈಡರ್ ಮ್ಯಾಗಜೀನ್ 2022, ಎಪಿಎಸಿ ಬಿಸಿನೆಸ್ ಅವಾರ್ಡ್ಸ್‌ ವಿಜೇತರನ್ನೂ ಘೋಷಿಸಲಾಗಿದೆ. ಇದರಲ್ಲಿಯೂ ಕೃಷಿ ಜಾಗರಣಅನ್ನು “ಅತ್ಯುತ್ತಮ ಕೃಷಿ ಸುದ್ದಿ ವೇದಿಕೆ 2022” ಎಂದು ಗುರುತಿಸಲಾಗಿದೆ.  
---------  
11. ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 21 ಕೋಟಿ ರೂ. ಮೊತ್ತದ ಕಬ್ಬಿನ ಬಿಲ್ಲ ಮೊದಲನೇ  ಕಂತನ್ನು ರೈತರಿಗೆ ಪಾವತಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶನಿವಾರ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಗೆ ಎಥನಾಲ್ ಪ್ಲಾಂಟ್ ಸ್ಥಾಪಿಸಿ, ಈ ಭಾಗದ ರೈತರ ಕಬ್ಬನ್ನು ಅರೆಸಲಾಗುವುದು. ಪಾಂಡವಪುರದ ಶ್ರೀರಾಂಪುರ ಸಕ್ಕರೆ ಕಾರ್ಖಾನೆಯಲ್ಲಿ ಮಂಡ್ಯ ಜಿಲ್ಲೆಯ ಕಬ್ಬನ್ನು ಅರೆಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದಿದ್ದಾರೆ. 
---------   

Published On: 17 December 2022, 02:29 PM English Summary: Payment of Rs. 21 Crore to Sugarcane Belgar: Chief Minister Basavaraja Bommai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.