1. ಸುದ್ದಿಗಳು

ರಾಷ್ಟ್ರೀಯ ಯುವ ಸಂಸತ್ತಿನ ಉತ್ಸವ ಸ್ಪರ್ಧೆಗೆ ಅರ್ಜಿ ಆಹ್ವಾನ-ಪ್ರಥಮ ಸ್ಥಾನ ಪಡೆದ ವಿಜೇತರಿಗೆ 2 ಲಕ್ಷ ಬಹುಮಾನ

youth festival

ನೆಹರು ಯುವ ಕೇಂದ್ರ ಹಾಗೂ ಎನ್.ಎಸ್.ಎಸ್. ಕಲಬುರಗಿ ಸಂಯುಕ್ತಾಶ್ರಯದಲ್ಲಿ ಇದೇ ಡಿಸೆಂಬರ್ 28 ರಂದು ಬೆಳಿಗ್ಗೆ 11 ಗಂಟೆಯಿಂದ ವರ್ಚುವಲ್ ಮಾಧ್ಯಮದ ಮೂಲಕ ರಾಷ್ಟ್ರೀಯ ಯುವ ಸಂಸತ್ತಿನ ಉತ್ಸವ-2021 (ನ್ಯಾಷನಲ್ ಯೂಥ್ ಪಾರ್ಲಿಮೆಂಟ್ ಫೆಸ್ಟಿವಲ್) ಸ್ಪರ್ಧೆಯನ್ನು ವಲಯ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಕಲಬುರಗಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ರಾಷ್ಟ್ರಮಟ್ಟದಲ್ಲಿ ನಗದು ಬಹುಮಾನ ಪ್ರಥಮ ಬಹುಮಾನ 2,00,000ರೂ., ಎರಡನೇ ಬಹುಮಾನ 1,50,000 ರೂ. ಹಾಗೂ ಮೂರನೇ ಬಹುಮಾನ 1,00,000 ರೂ. ನೀಡಲಾಗುವುದು ಮತ್ತು ವಿಜೇತರಿಗೆ ದೆಹಲಿಯ ಸಂಸತ್ ಭವನಕ್ಕೆ ಭೇಟಿ ನೀಡುವ ಅವಕಾಶ ನೀಡಲಾಗುತ್ತದೆ.

  ಈ ವಲಯ ಮಟ್ಟದ ಸ್ಪರ್ಧೆಯನ್ನು ಕಲಬುರಗಿ, ಬೀದರ, ವಿಜಯಪುರ, ಬಳ್ಳಾರಿ, ರಾಯಚೂರು, ಬಾಗಲಕೋಟೆ  ಹಾಗೂ ಕೊಪ್ಪಳ ಜಿಲ್ಲೆಗಳೊಂದಿಗೆ ಸಂಯೋಜಿಸಲಾಗಿದೆ. ಸ್ಪರ್ಧಾಳುಗಳ ವಯೋಮಿತಿ ದಿನಾಂಕ 30/11/2020ಕ್ಕೆ 18 ವರ್ಷ ಮೇಲ್ಪಟ್ಟಿರಬೇಕು. ವಯೋಮಿತಿ 25 ವರ್ಷದೊಳಗಿರಬೇಕು. 4 ನಿಮಿಷಗಳ ಕಾಲ ಮಾತನಾಡಲು  ಯಾವುದಾದರು ನಾಲ್ಕು ವಿಷಯದಲ್ಲಿ ಒಂದು ವಿಷಯ  ಆಯ್ಕೆ ಮಾಡಿಕೊಳ್ಳಬೇಕು.

ಹೆಸರು ನೋಂದಣಿ ಮತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ನಗರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳು ಕಚೇರಿ, ನೆಹರು ಯುವ ಕೇಂದ್ರ, ಭಗವತಿ ನಗರ, ಸಂಗಮೇಶ್ವರ ಆಸ್ಪತ್ರೆ ಹಿಂದುಗಡೆ, ಎಂ.ಎಸ್.ಕೆ. ಮಿಲ್ ರೋಡ್, ಕಲಬುರಗಿ, ಕಚೇರಿ ಖುದ್ದಾಗಿ ಅಥವಾ ದೇವಪ್ಪ ಇವರ ಮೊಬೈಲ್ ಸಂಖ್ಯೆ 9008050048,  ಭೀಮರಾಯ ಇವರ ಮೊಬೈಲ್ ಸಂಖ್ಯೆ 9980785290, 8446506063 ಹಾಗೂ 9845789547 ಇವರನ್ನು ಸಂಪರ್ಕಿಸಲು ಕೋರಲಾಗಿದೆ.   

Published On: 24 December 2020, 08:50 PM English Summary: Participate in National Youth Parliament Festival and win 2 lakh prize

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.