1. ಸುದ್ದಿಗಳು

Parle-G ಕವರ್‌ ಮೇಲಿನ ಫೋಟೋ ಚೇಂಜ್‌! ಈ ಹೊಸ ಚಿತ್ರ ಯಾರದ್ದು ಗೊತ್ತಾ?

Maltesh
Maltesh
Parle-G cover photo change!

ಪಾರ್ಲೆ ಜಿ (Parle-G) 70 -80 ರ ದಶಕದಲ್ಲಿನ ಒಂದು ಎಮೋಷನ್‌. ಆ ಕಾಲದಿಂದಲೂ ಇಲ್ಲಿಯವರೆಗೆ ಪಾರ್ಲೆ ಜಿ ಬಗ್ಗೆ ಗೊತ್ತಿಲ್ಲದವರು ಯಾರಿದ್ದಾರೆ ಹೇಳಿ.

ಗರಂ ಚಾಯ್‌ ಜೊತೆ ಪಾರ್ಲೆ ಜಿ ಇಲ್ಲ ಅಂದ್ರೆ ಅದನ್ನು ಊಹಿಸಿಕೊಳ್ಳುವುದು ಕಷ್ಟ ಕಷ್ಟ ಎಂಬ ಮಾತುಗಳು 80 ರ ದಶಕದಲ್ಲಿ ಕೇಳುತ್ತಿದ್ದವು. ಪ್ರತಿ ಮನೆಯಲ್ಲಿ ಕೂಡ ಪಾರ್ಲೆ ಜಿಯ ಹಳದಿ ರಾಪರ್‌ ರಾರಾಜಿಸುತ್ತಿತ್ತು. ಪಾರ್ಲೆ ಜಿ ಪ್ರತಿ ಭಾರತೀಯರ ಅಡುಗೆ ಮನೆಯ ಹಾರ್ಟ್‌ ಬೀಟ್‌.

ಪಾರ್ಲೆ ಜಿಯ ಜೊತೆ ದಿನ ಆರಂಭ ಪಾರ್ಲೆ ಜಿಯ ಜೊತೆ ದಿನ ಮುಕ್ತಾಯ ಅಷ್ಟರ ಮಟ್ಟಿ ಪಾರ್ಲೆ ಜಿ ಭಾರತೀಯರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ತನ್ನು ಗುಣಮಟ್ಟದ ಬಿಸ್ಕೆಟ್‌ ನ ಜೊತೆ ಜೊತೆಗೆ ಪಾರ್ಲೆ ಜಿ ಕವರ್‌ ಮೇಲಿರುವ ಮುದ್ದಾದ ಮಗುವಿನ ಫೋಟೋ ಕೂಡ ಅಷ್ಟೇ ಫೇಮಸ್‌!

ಸದ್ಯ ಪಾರ್ಲೆ ಜಿ ಕವರ್‌ ಮೇಲಿನ ಮುದ್ದಾದ ಮಗುವಿನ ಫೋಟೋ ಕಾಣೆಯಾಗಿ ಬೇರೆ ಯಾರದ್ದೋ ಫೋಟೋ ಅದರಲ್ಲಿ ಪ್ರಿಂಟ್‌ ಆಗಿರುವ ಕುರಿತು ಸುದ್ದಿಯಾಗುತ್ತಿದೆ. ಪಾರ್ಲೆ ಜಿಯ ಹಳದಿ ರ್ಯಾಪರ್‌ ಮೇಲೆ ಬೇರೆ ಒಬ್ಬ ಹುಡುಗನ ಪೋಟೋ ಇರುವ ರ್ಯಾಪರ್‌ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು ಪಾರ್ಲೆ ಜಿ ಕಂಪನಿಯು ಸದ್ದಿಲ್ಲದೆ ತನ್ನ ಬಿಸ್ಕೆಟ್‌ನ ಕವರ್ ಅನ್ನು ಚೇಂಜ್‌ ಮಾಡಿತೇ ಎಂಬ ಸಂಶಯಗಳು ಹುಟ್ಟಿಕೊಂಡಿವೆ ಹಾಗಾದ್ರೆ ನಿಜವಾಗಿಯೂ ಪಾರ್ಲೆ ಕಂಪನಿಯು ಮಗುವಿನ ಫೋಟೋ ಬದಲಿಸಿತೇ ಅಥವಾ ಇದು ಸೋಷಿಯಲ್‌ ಮೀಡಿಯಾ ಗಿಮಿಕ್ಕೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪಾರ್ಲೆ ಜಿ ಕವರ್‌ ಮೇಲಿರುವ ಫೋಟೋ ಯಾರದ್ದು?
ಪಾರ್ಲೆ ಜಿಯ ಕವರ್‌ ಮೇಲಿನ ಐಕಾನಿಕ್‌ ಮಗುವಿನ ಫೋಟೋದಲ್ಲಿ ಜಾಗದಲ್ಲಿ ಇನ್‌ಸ್ಟಾಗ್ರಾಂ ಇನ್‌ಫ್ಲ್ಯೂಯನ್ಸರ್‌ ಒಬ್ಬರ ಫೋಟೋ ಮುದ್ರಿವಾಗಿದ್ದು ಆ ಇನ್‌ಫ್ಲ್ಯೂಯನ್ಸರ್‌ ಅದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದನ್ನು ಕಂಡ ಸೋಷಿಯಲ್‌ ಮೀಡಿಯಾ ಮಂದಿ ಪಾರ್ಲೆ ಜಿಯ ಈ ನಿರ್ಧಾರ ಸರಿ ಅಲ್ಲ, ಇದು ನಮ್ಮ ಎಮೋಷನ್‌ಗೆ ಮಾಡಿದ ಧಕ್ಕೆ ಎಂದು ತರಹೇವಾರಿ ಕಾಮೆಂಟುಗಳನ್ನು ಮಾಡುತ್ತಿದ್ದಾರೆ.

ಫೋಟೋ ಬದಲಾವಣೆ ಅಸಲಿಯತ್ತೇನು..?

ಆದರೆ ವಾಸ್ತವದಲ್ಲಿ, ಕಂಪೆನಿ ತನ್ನ ಬಿಸ್ಕೆಟ್‌ ಮೇಲಿರುವ ಐಕಾನಿಕ್‌ ಮಗುವಿನ ಫೋಟೋವನ್ನು ಚೇಂಜ್‌ ಮಾಡಿಲ್ಲ. ಇದು ತಮಾಷೆಗಾಗಿ ಮಾಡಿರುವ ವಿಡಿಯೋ ಇದಾಗಿದೆ. ಅಷ್ಟೇ ಅಲ್ಲದೆ ಫೋಟೋ ಚೇಂಜ್‌ ಜೊತೆಗೆ ಕವರ್‌ ಮೇಲೆನ ಹೆಸರನ್ನು ಕೂಡ ಬದಲಾಯಿಸಲಾಗಿದ್ದು ಜಸ್ಟ್‌ ತಮಾಷೆಗೆಂದೆ ಹೇಳಲಾಗುತ್ತಿದೆ. ಸದ್ಯ ಪಾರ್ಲೆ ಜಿಯ ಈ ತಮಾಷೆಯ ವಿಡಿಯೋ ಮಾತ್ರ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಬಿಸ್ಕೆಟ್ ಕವರ್‌ನಿಂದ ಮಗುವಿನ ಫೋಟೋವನ್ನು ಬದಲಾಯಿಸಿಲ್ಲ. ಬದಲಿಗೆ ಇದು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ತಮಾಷೆಗೆ ಮಾಡಿರುವ ವೀಡಿಯೋ ಆಗಿದೆ.

Published On: 29 December 2023, 12:36 PM English Summary: Parle-G cover photo change!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.