1. ಸುದ್ದಿಗಳು

ಪ್ಯಾನ್‌ ಕಾರ್ಡ್‌- ಆಧಾರ್‌ ಕಾರ್ಡ್‌ ಲಿಂಕ್‌ ಐದು ನಿಮಿಷದಲ್ಲಿ ಮಾಡಬಹುದು!

Hitesh
Hitesh
PAN Card- Aadhaar Card Link can be done in 5 Minutes! PAN Card Aadhaar Card

ಇಂದು ಅಂದರೆ ಜೂನ್‌ 30 ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆಗೆ ಅಂತಿಮ ದಿನವಾಗಿದೆ. ಆದರೆ, ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದು ಕೆಲವೇ ನಿಮಿಷಗಳ ಕೆಲಸವಾಗಿದೆ.

ಆನ್‌ಲೈನ್‌ನಲ್ಲಿ ಪ್ಯಾನ್-ಆಧಾರ್ ಲಿಂಕ್ ಮಾಡುವ ಸುಲಭವಾದ ವಿಧಾನವನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. 

ಇದಕ್ಕೆ ನೀವು ಮೊದಲು ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್‌ಗೆ  ಹೋಗಬೇಕು. 

ಈ ಪೋರ್ಟ್‌ ತಲುಪಲು ನೀವು https://incometaxindiaefiling.gov.in/ ಲಿಂಕ್ ಬಳಸಬಹುದಾಗಿದೆ.

ನಂತರ ಪ್ಯಾನ್ ಸಂಖ್ಯೆ (PAN) ನಿಮ್ಮ ಬಳಕೆದಾರ ID ಎಂದು ಪರಿಗಣಿಸಿ

ಮುಂದಿನ ಹಂತದಲ್ಲಿ ಬಳಕೆದಾರ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿದ ಲಾಗಿನ್ ಮಾಡಿಕೊಳ್ಳಬೇಕು  

PANನಲ್ಲಿ ಹುಟ್ಟಿದ ದಿನಾಂಕ ಮತ್ತು ಲಿಂಗ ವಿವರಗಳನ್ನು ದಾಖಲಿಸಬೇಕು

ಈ ಪ್ರಕ್ರಿಯೆಗಳು ಮುಗಿದ ನಂತರದಲ್ಲಿ ಈ ವಿವರಗಳನ್ನು ನಿಮ್ಮ ಆಧಾರ್ ವಿವರಗಳೊಂದಿಗೆ ಹೊಂದಿಕೆ ಮಾಡಿ. 

ಈ ಎಲ್ಲ ಪ್ರಕ್ರಿಯೆಗಳನ್ನು ನೀವು ಮಾಡುವ ಸಂದರ್ಭದಲ್ಲಿ ನಿಖರವಾದ ಮಾಹಿತಿಯನ್ನೇ ದಾಖಲಿಸಬೇಕು. 

ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಂಪರ್ಕಿಸಿ ಎನ್ನುವ ನಿರ್ದಿಷ್ಟ ಆಯ್ಕೆಯ ಮೇಲೆ ಮೇಲೆ ಕ್ಲಿಕ್ ಮಾಡಬೇಕು.

ಪ್ಯಾನ್‌ ಕಾರ್ಡ್‌ - ಆಧಾರ್‌ ಕಾರ್ಡ್‌ ಜೋಡಣೆ ಪರಿಶೀಲಿಸುವುದು ಹೇಗೆ?

ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವ ಪ್ರಕ್ರಿಯೆಯು ಪೂರ್ಣಗೊಂಡಿದೆ ಎನ್ನುವ  ನಿರ್ದಿಷ್ಟ ಸಂದೇಶ ಬರುತ್ತದೆ.

ಪ್ಯಾನ್ ಕಾರ್ಡ್‌ ಆಧಾರ್‌ನೊಂದಿಗೆ ಲಿಂಕ್ ಮಾಡಲು 

https://www.utiitsl.com/ ಅಥವಾ https://www.egov-nsdl.co.in/ ಗೆ ಭೇಟಿ ನೀಡಬೇಡ ಬಹುದಾಗಿದೆ.

ನಿಮ್ಮ ಪ್ಯಾನ್‌ ಕಾರ್ಡ್‌ ನಿಷ್ಕ್ರೀಯವಾಗಲಿದೆ. ಅಲ್ಲದೇ ಜುಲೈ 1ರಿಂದ ನೀವು ಆಧಾರ್‌ ಕಾರ್ಡ್‌ ಹಾಗೂ  ಪ್ಯಾನ್‌ ಕಾರ್ಡ್‌ ಜೋಡಣೆ ಮಾಡಬೇಕಾದರೆ,

ಬರೋಬ್ಬರಿ 10,000 ಸಾವಿರ ರೂಪಾಯಿ ದಂಡ ಪಾವತಿ ಮಾಡಬೇಕಾಗುತ್ತದೆ.  

 ಪ್ಯಾನ್‌ ಕಾರ್ಡ್‌ - ಆಧಾರ್‌ ಕಾರ್ಡ್‌ ಜೋಡಣೆ ಪರಿಶೀಲಿಸುವುದು ಹೇಗೆ?

 ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಆಗಿದೆಯೇ ಅಥವಾ ಇನ್ನೂ ಆಗಿಲ್ಲವೇ ಎನ್ನುವುದನ್ನು ನೀವು ಸರಳವಾಗಿ ಪರಿಶೀಲನೆ ಮಾಡಬಹುದಾಗಿದೆ. 

UIDAIಯ ಅಧಿಕೃತ ವೆಬ್‌ಸೈಟ್‌ https://uidai.gov.in ಗೆ ಹೋಗಿ

ಆಧಾರ್ ಸೇವೆಗಳ ಪಟ್ಟಿಯಿಂದ ಆಧಾರ್ ಲಿಂಕ್ ಮಾಡುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.

ಎರಡನೇಯದಾಗಿ  12 ಅಂಕಿಗಳ ಆಧಾರ್ ಸಂಖ್ಯೆಯನ್ನು ಅಲ್ಲಿ ಹಾಕಿ ಮತ್ತು ಗೆಟ್ ಸ್ಟೇಟಸ್ ಬಟನ್ನ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.  

PAN-Aadhaar linkage ಆಧಾರ್‌- ಪ್ಯಾನ್‌ ಕಾರ್ಡ್‌ ಜೋಡಣೆಗೆ ಇಂದೇ ಕೊನೆ; ನಾಳೆಯಿಂದ ಬರೋಬ್ಬರಿ 10,000 ಸಾವಿರ ದಂಡ!

Aadhaar-PAN linking ಆಧಾರ್-‌ ಪ್ಯಾನ್‌ ಜೋಡಣೆಗೆ ಕೊನೆಯ ಗಡುವು; ಆದಾಯ ತೆರಿಗೆ ಇಲಾಖೆ ಕೊನೆಯ ಎಚ್ಚರಿಕೆ ಏನು ? 

ಇದಾದ ನಂತರ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ (ಪರಿಶೀಲನಾ ಅಂಕಿ- ಅಂಶ)ವನ್ನು ನಮೂದಿಸಬೇಕು.

ನಿಮ್ಮ ಪ್ಯಾನ್-ಆಧಾರ್ ಲಿಂಕ್ ಮಾಡುವ  ಅಂಶವನ್ನು ಪರಿಶೀಲಿಸಲು, ಗೇಟ್ ಲಿಂಕ್ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು.

ನಿಮ್ಮ ಆಧಾರ್ ಕಾರ್ಡ್‌ ಪ್ಯಾನ್ ಸಂಖ್ಯೆಯೊಂದಿಗೆ ಲಿಂಕ್ ಆಗಿದೆ ಅಥವಾ ಇಲ್ಲ ಎನ್ನುವುದನ್ನು ಕಂಪ್ಯೂಟರ್ ಅಥವಾ  ಲ್ಯಾಪ್‌ಟಾಪ್ ಪರದೆಯ ಮೇಲೆ ಕಾಣಿಸಲಿದೆ.

ಇದೆಲ್ಲವನ್ನೂ ನೀವು ಸುಲಭವಾಗಿ ನಿಮ್ಮ ಮೊಬೈಲ್‌ನಲ್ಲಿಯೂ ಪರಿಶೀಲಿಸಬಹುದು.   

Heavy Rain ರಾಜ್ಯದ ವಿವಿಧ ಭಾಗದಲ್ಲಿ ಇನ್ನು ಎರಡು ದಿನ ಧಾರಾಕಾರ ಮಳೆ; ಎಚ್ಚರ!

Published On: 30 June 2023, 01:55 PM English Summary: PAN Card- Aadhaar Card Link can be done in 5 Minutes! PAN Card Aadhaar Card

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.