Krishi Jagran Kannada
Menu Close Menu

ಕರಾಚಿ-ಲಾಹೋರ್ ಪಿಐಎ ವಿಮಾನ ಪತನ; ಪ್ರಯಾಣಿಕರು ಸೇರಿದಂತೆ 107 ಮಂದಿ ಪ್ರಯಾಣಿಕರು ಸಾವು?

Friday, 22 May 2020 08:53 PM
ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನವೊಂದು ಕರಾಚಿ ವಿಮಾನ ನಿಲ್ದಾಣ ಸಮೀಪ ಪತನಕ್ಕೀಡಾಗಿದ್ದು, ವಿಮಾನದಲ್ಲಿ 91 ಪ್ರಯಾಣಿಕರು ಸೇರಿದಂತೆ 107 ಜನ ಬದುಕುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎ-320 ವಿಮಾನ ಇಳಿಯುವದಕ್ಕೂ ಕೆಲವೇ ಕ್ಷಣಗಳ ಮುಂಚೆ ವಿಮಾನ ಅಪಘಾತಕ್ಕಿಡಾಗಿದ್ದು, ಅಪಘಾತಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.
ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಈ ಘಟನೆ ನಡೆದಿದೆ. ಆದರೆ ಸಾವು-ನೋವಿನ ಬಗ್ಗೆ ಇನ್ನೂ ಖಚಿತ ಮಾಹಿತಿ ತಿಳಿದುಬಂದಿಲ್ಲ. ವಿಮಾನದಲ್ಲಿರುವ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಇನ್ನೈದು ನಿಮಿಷದಲ್ಲಿ ಇಳಿಯಬೇಕಾಗಿದ್ದ ವಿಮಾನ ದುರಂತ ಅಂತ್ಯ ಕಂಡಾಗ:
ಕರಾಚಿಗೆ ವಿಮಾನ ನಿಲ್ದಾಣದಿಂದಸ್ವಲ್ಪ ದೂರದಲ್ಲಿರುವ ಮಾಲಿರ್‌ನ ಮಾಡೆಲ್ ಕಾಲೋನಿ ಬಳಿಯ ಜಿನ್ನಾ ಗಾರ್ಡ್‌ನ್ ವಸತಿ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದರಿಂದ ಮನೆಗಳಿಗೆ ಬೆಂಕಿ ಹತ್ತಿಕೊಂಡಿದೆ. ಜನವಸತಿ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿರುವುದಿಂದ ಸಾವು-ನೋವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಸದ್ಯ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಸಿಬ್ಬಂದಿಯೂ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 107 ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
Pakistan Pakistan Air crash

Share your comments

Krishi Jagran Kannada Subscription

CopyRight - 2020 Krishi Jagran Media Group. All Rights Reserved.