1. ಸುದ್ದಿಗಳು

ನಮ್ಮದು ನುಡಿದಂತೆ ನಡೆವ ಸರ್ಕಾರ; ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?

Hitesh
Hitesh
Ours is a government that walks the talk; What did Chief Minister Siddaramaiah say?

ನಮ್ಮದು ನುಡಿದಂತೆ ನಡೆವ ಸರ್ಕಾರ. ಮಾತು ಕೊಟ್ಟಂತೆ ನಡೆದುಕೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ಪೂರ್ಣವಾಗಿ ಇದೀಗ ಸಂಪುಟವೂ ರಚನೆ ಆಗಿದೆ.

ಈ ನಡುವೆ ಕಾಂಗ್ರೆಸ್‌ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಗ್ಯಾರಂಟಿಗಳ ಬಗ್ಗೆ ತೀವ್ರವಾದ ಚರ್ಚೆಗಳು ನಡೆಯುತ್ತಿವೆ.

ಅಲ್ಲದೇ ಬಸ್‌ಗಳಲ್ಲಿ ಬಸ್‌ ಕಂಡೆಕ್ಟರ್‌ಗಳೊಂದಿಗೆ ಹಾಗೂ ಲೈನ್‌ಮ್ಯಾನ್‌ಗಳೊಂದಿಗೆ ಜನ ಜಗಳವಾಡುತ್ತಿದ್ದಾರೆ.

ಈಚೆಗೆ ಸಿದ್ದರಾಮಯ್ಯ ಅವರು ನೀಡಿರುವ ಪ್ರಕಟಣೆಯ ವಿವರ ಈ ರೀತಿ ಇದೆ. “

ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳಿಗೆ

ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ Siddaramaiah ತಿಳಿಸಿದ್ದಾರೆ.

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ಗಳನ್ನು ಉಚಿತವಾಗಿ ನೀಡಲು ಮಾಹೆಯಾನ 1200 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ.

ಪ್ರತಿ ಮನೆಯ ಒಡತಿಗೆ ಮಾಸಿಕ 2000 ರೂ., ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ,

ಈ ವರ್ಷ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳವರೆಗೆ 3,000 ರೂ.ಗಳನ್ನು ಹಾಗೂ ಡಿಪ್ಲೊಮಾ

ಪಾಸಾದವರಿಗೆ 1500 ರೂ.ಗಳನ್ನು ಯುವನಿಧಿಯಡಿ ನೀಡಲಾಗುವುದು.

ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು.

ಇವುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಸ್ತೃತ  ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳ  ಮಾಹಿತಿಯನ್ನೂ ಪಡೆಯಲಾಗುತ್ತಿದ್ದು, ಇವುಗಳನ್ನು ಪುನರಾಂಭಿಸಲಾಗುವುದು ಎಂದರು.

*ಅಧಿವೇಶನ:*

ಜುಲೈ ತಿಂಗಳಿನಲ್ಲಿ ಆಯವ್ಯಯ ಮಂಡಿಸಲಾಗುವುದು ಎಂದು ತಿಳಿಸಿದರು.

*165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಕೆ*

ನಮ್ಮ ಹಿಂದಿನ ಅವಧಿಯಲ್ಲಿ ನಮ್ಮ ಸರ್ಕಾರ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿತ್ತು.

ನಾವು ಕೊಟ್ಟ ಮಾತಿನಂತೆಯೇ ನಡೆದಿದ್ದೇವೆ. ನಾವು ನೀಡಿದ ಭರವಸೆಗಳನ್ನು ಈಡೇರಿಸುವ ಜೊತೆಗೆ ಇಂದಿರಾ ಕ್ಯಾಟೀನ್,

ಸಾಲಮನ್ನಾ, ವಿದ್ಯಾಸಿರಿ, ಶೂ ಭಾಗ್ಯ, ಪಶು ಭಾಗ್ಯ ಸೇರಿದಂತೆ ಹೊಸ 30 ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಇನ್ನು ಗ್ಯಾರಂಟಿಗಳ ಈಡೇರಿಕೆಗೆ 50 ಸಾವಿರ ಕೋಟಿ ರೂ.ಅಗತ್ಯವಿದೆ.

ನಾವು ಈಗ ನೀಡಿರುವ ಗ್ಯಾರಂಟಿ ಭರವಸೆಗಳು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತದೆ ಎಂದು ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ.

ರಾಜ್ಯದ ಆರ್ಥಿಕ ದಿವಾಳಿ, ರಾಜ್ಯವನ್ನು ಸಾಲಗಾರ ಮಾಡಲಾಗುವುದೆಂದು ಪ್ರಧಾನ ಮಂತ್ರಿಗಳು ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ.

ಗ್ಯಾರೆಂಟಿಗಳನ್ನು ಈಡೇರಿಸಲು ತಕ್ಷಣದ ಲೆಕ್ಕಾಚಾರದ ಪ್ರಕಾರ 50 ಸಾವಿರ ಕೋಟಿ ಬೇಕಾಗುತ್ತದೆ ಎಂದರು.

ಕಟ್ಟುನಿಟ್ಟಾಗಿ ತೆರಿಗೆಯ ವಸೂಲಾತಿ

ನಮ್ಮ ರಾಜ್ಯದ ಆಯವ್ಯಯದ ಒಟ್ಟು ಗಾತ್ರ 3.10 ಲಕ್ಷ ಕೋಟಿ ರೂ. ಪ್ರತಿ ವರ್ಷ ಇದರ ಗಾತ್ರ ಶೇ. 10 ರಷ್ಟು ಹೆಚ್ಚುತ್ತದೆ.

ತೆರಿಗೆಯ ವಸೂಲಾತಿಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಜಿಎಸ್‌ಟಿ ಮೊತ್ತ ರಾಜ್ಯಕ್ಕೆ ನೀಡುವುದು ಕೇಂದ್ರ ಸರ್ಕಾರದ ತೀರ್ಮಾನ.

ರಾಜ್ಯಕ್ಕೆ ಪೆಟ್ರೋಲ್ ಡೀಸೆಲ್, ಅಬಕಾರಿ, ಮೋಟರು ವಾಹನಗಳ ತೆರಿಗೆ, ಸ್ಟ್ಯಾಂಪ್ ಮತ್ತು ರಿಜಿಸ್ಟ್ರೇಷನ್ ಗಳಿಂದ ರಾಜ್ಯಕ್ಕೆ

ಪ್ರಮುಖವಾಗಿ ಆದಾಯ ಸಂಗ್ರಹವಾಗುತ್ತದೆ. ಈ ಸಾಲಿನ ಬಜೆಟ್ ನಲ್ಲಿ ರಾಜ್ಯಕ್ಕೆ 15ನೇ ಹಣಕಾಸು ಆಯೋಗದಿಂದ ಕೇವಲ 50 ಸಾವಿರ ಕೋಟಿ ಬರುವುದಾಗಿ ಹೇಳಲಾಗಿದೆ.

ಕರ್ನಾಟಕಕ್ಕೆ 1 ಲಕ್ಷ ಕೋಟಿ ರೂ.ಗಳು ಬರಬೇಕಿತ್ತು. ಕೇಂದ್ರದಿಂದ ರಾಜ್ಯಕ್ಕೆ ಬರುವ ಪಾಲನ್ನು ದೊರಕಿಸಿಕೊಳ್ಳುವಲ್ಲಿ

ಹಿಂದಿನ ಸರ್ಕಾರ ಬೇಜವಾಬ್ದಾರಿತನ ತೋರಿದೆ. ಕರ್ನಾಟಕದಿಂದ ಸುಮಾರು 4 ಲಕ್ಷ ಕೋಟಿ ರೂ. ತೆರಿಗೆಸಂಗ್ರಹವಾಗುತ್ತದೆ ಎಂದು ವಿವರಿಸಿದರು.

15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಂತೆ ಕರ್ನಾಟಕಕ್ಕೆ 5495 ಕೋಟಿ ರೂ. ವಿಶೇಷ ಸಹಾಯಧನ ಬರಬೇಕಾಗಿತ್ತು.

ಅದನ್ನು ಪಡೆದುಕೊಳ್ಳಲು ರಾಜ್ಯದ ಸಂಸದರು, ಹಿಂದಿನ ಸರ್ಕಾರ ವಿಫಲವಾಗಿದೆ ಎಂದರು.

ಆರ್ಥಿಕವಾಗಿ ದಿವಾಳಿಯಾಗದೇ  ಜನರಿಗೆ ನೀಡಿರುವ ಗ್ಯಾರೆಂಟಿಗಳ ಈಡೇರಿಕೆ:

ಮನ್ ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಭಾರತದ ಮೇಲಿನ ಸಾಲ 52,11,000 ಕೋಟಿ ರೂ. ಇತ್ತು.

ಈಗ ದೇಶದ ಮೇಲಿನ ಸಾಲ 155 ಲಕ್ಷ ಕೋಟಿ ರೂ.ಆಗಿದೆ.

ಕಳೆದ 9 ವರ್ಷದಲ್ಲಿ 102 ಲಕ್ಷ ಕೋಟಿ ಸಾಲ ಮಾಡಲಾಗಿದೆ. 2018ರ ನಮ್ಮ ಸರ್ಕಾರದ ಅವಧಿಯವರೆಗೆ

ರಾಜ್ಯದ ಮೇಲೆ 2,42,000 ಕೋಟಿ ಸಾಲ ಇತ್ತು. ಈಗ 2023-24ರಲ್ಲಿ ತಿಳಿಸಿರುವಂತೆ 5,64,000 ಕೋಟಿ ಸಾಲ ರಾಜ್ಯದ ಮೇಲಿದೆ.

ಅಂದರೆ ಅವರ ಅವಧಿಯಲ್ಲಿ 3,22,000 ಕೋಟಿ ಸಾಲ ಪಡೆದಿದ್ದಾರೆ. ಈ ರೀತಿಯ ಆರ್ಥಿಕ ಪರಿಸ್ಥಿತಿ ರಾಜ್ಯದಲ್ಲಿದೆ.

ನಮ್ಮ ಸರ್ಕಾರ ಆರ್ಥಿಕ ದಿವಾಳಿಯಾಗಲು ಬಿಡದಂತೆ, ಜನರಿಗೆ ನೀಡಿರುವ ಗ್ಯಾರೆಂಟಿಗಳನ್ನು ಈಡೇರಿಸುತ್ತೇವೆ ಎಂದರು.

ಕಟ್ಟುನಿಟ್ಟಿನ ಕ್ರಮ

2023-24ರಲ್ಲಿ ಸಾಲದ ಮೇಲಿನ ಬಡ್ಡಿ ಹಾಗೂ ಅಸಲು ತೀರಿಸಲು  56 ಸಾವಿರ ಕೋಟಿ ರೂ.ಗಳ ಅಗತ್ಯವಿದೆ.

ತೆರಿಗೆ ಸಂಗ್ರಹ, ಅನಗತ್ಯ ವೆಚ್ಚಗಳ ನಿಯಂತ್ರಣ, ಬಡ್ಡಿಯನ್ನು ಕಡಿಮೆ ಮಾಡುವುದು, ಸಾಲ ತೆಗೆದುಕೊಳ್ಳದೇ ಇರುವುದು,

ಇನ್ನೂ ಹೆಚ್ಚಿನ ಕ್ರಮಗಳ ಮೂಲಕ ವರ್ಷಕ್ಕೆ 15,000 ಕೋಟಿ ರೂ.ಗಳನ್ನು ಗಳಿಸಬಹುದು ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

photo and details credit: CMofKarnataka

Published On: 27 May 2023, 04:15 PM English Summary: Ours is a government that walks the talk; What did Chief Minister Siddaramaiah say?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.