1. ಸುದ್ದಿಗಳು

ರೈತರು ಮತ್ತು ವಿಜ್ಞಾನಿಗಳ ಆನ್ಲೈನ್ ಸಂವಾದ ಜೂನ್ 18ರಂದು

ಭಾರತದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆ ನಗರದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜೂನ್ 18ರಂದು ಬೆಳಗ್ಗೆ 11 ಗಂಟೆಗೆ ರೈತರು ಮತ್ತು ವಿಜ್ಞಾನಿಗಳ ಆನ್‌ಲೈನ್ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ವೇಳೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಇತರೆ ಕೃಷಿ ವಿಷಯಗಳ ಬಗ್ಗೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ಹಾಗೂ ಮೀನುಗಾರಿಕೆ ತಜ್ಞರಾಗಿರುವ ಡಾ.ದೇವರಾಜ ಟಿ.ಎನ್., ನಿವೃತ್ತ ಜಂಟಿ ಕೃಷಿ ನಿರ್ದೇಶಕರಾಗಿರುವ ಡಾ.ಆರ್.ಜಿ.ಗೊಲ್ಲರ್, ಬೇಸಾಯ ಶಾಸ್ತç ವಿಷಯ ತಜ್ಞರಾಗಿರುವ ಡಾ.ಮಲ್ಲಿಕಾರ್ಜುನ ಬಿ.ಒ, ತೋಟಗಾರಿಕೆ ವಿಷಯ ತಜ್ಞರಾಗಿರುವ ಡಾ. ಬಸವನಗೌಡ ಎಂ.ಜಿ., ಪಶು ವಿಜ್ಞಾನ ವಿಷಯ ತಜ್ಞರಾದ ಡಾ.ಜಯದೇವಪ್ಪ ಜಿ.ಕೆ., ಕೃಷಿ ವಿಸ್ತರಣೆ ವಿಷಯ ತಜ್ಞರಾಗಿರುವ ಡಾ. ರಘುರಾಜ ಜೆ., ಮಣ್ಣು ಸಂರಕ್ಷಣೆ ವಿಷಯ ತಜ್ಞರಾದ ಡಾ.ಸಣ್ಣಗೌಡರ್ ಅವರು ಭಾಗವಹಿಸಲಿದ್ದಾರೆ.

ಕೃಷಿ ಚಟುವಟಿಕೆ ನಡೆಸುವಾಗ ರೈತರಿಗೆ ಪ್ರತಿ ನಿತ್ಯ ಒಂದಿಲ್ಲೊAದು ಸಮಸ್ಯೆಗಳು ಎದುರಾಗುತ್ತವೆ. ಬೆಳೆಗೆ ತಗುಲುವ ರೋಗವಾಗಬಹುದು, ಜಾನುವಾರುಗಳಿಗೆ ಬರುವ ಕಾಯಿಲೆಗಳಾಗಬಹುದು, ಕಳೆ, ಗೊಬ್ಬರ, ಕೀಟ ಹೀಗೆ ಒಂದೊಂದು ಬಾರಿಯೂ ಒಂದೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆಗೆಲ್ಲಾ ರೈತರು ತಜ್ಞರನ್ನು ಹುಡುಕಿಕೊಂಡು ಹೋಗಲು ಆಗುವುದಿಲ್ಲ. ಹೀಗಾಗಿ ರೈತರು ಇರುವಲ್ಲಿಯೇ ಕುಳಿತು, ಆಯಾ ವಿಷಯಗಳಿಗೆ ಸಂಬAಧಪಟ್ಟ ವಿಷಯ ತಜ್ಞರಿಂದ ಮಾಹಿತಿ ಪಡೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಜ್ಯದ ಯಾವುದೇ ಭಾಗದ ರೈತರು ಈ ಸಂವಾದ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು, ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಜ್ಞರಿಗೆ ಪ್ರಶ್ನೆ ಕೇಳಿ ಸ್ಥಳದಲ್ಲಿಯೇ ಪರಿಹಾರ ಪಡೆದುಕೊಳ್ಳಬಹುದು. ಹೀಗಾಗಿ ಹೆಚ್ಚಿನ ಸಂಖ್ಯೆಯ ರೈತರು ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕೃಷಿ ವಿಸ್ತರಣೆ ವಿಷಯ ತಜ್ಞರಾಗಿರುವ ಡಾ.ರಘುರಾಜ ಜೆ. ಅವರು ಕೋರಿದ್ದಾರೆ.

ಗೂಗಲ್ ಮೀಟ್ ವೇದಿಕೆಯಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ರೈತ ಬಾಂಧವರು https://meet.google.com/vma-ieha-iam ಈ ಲಿಂಕ್ ಬಳಸಿಕೊಂಡು ಸಂವಾದದಲ್ಲಿ ಭಾಗವಹಿಸಬಹುದು.

ಸಮತೋಲನ ರಸಗೊಬ್ಬರ ಬಳಕೆ ಕುರಿತು ತರಬೇತಿ

ಹಾವೇರಿ ಜಿಲ್ಲೆ ಹನುಮನಮಟ್ಟಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜೂನ್ 18ರಂದು ಬೆಳಗ್ಗೆ 10.30 ಗಂಟೆಗೆ ‘ಸಮತೋಲನ ರಸಗೊಬ್ಬರ ಬಳಕೆ’ ಕುರಿತು ಆನ್‌ಲೈನ್ ಆಂದೋಲನ/ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.

ಹಾವೇರಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾಗಿರುವ ಡಾ.ಮಂಜುನಾಥ ಬಿ. ಅವರು ಪ್ರಸ್ತಾವಿಕವಾಗಿ ಮಾತನಾಡಿಲಿದ್ದು, ಹನುಮನಮಟ್ಟಿಯ ಐಸಿಎಂಆರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾಗಿರುವ ಡಾ.ಅಶೋಕ ಪಿ. ಹಾಗೂ ಹನುಮನಮಟ್ಟಿಯ ಐಸಿಎಂಆರ್ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ಶಾಸ್ತ್ರ ವಿಷಯ ತಜ್ಞರಾಗಿರುವ ಡಾ.ಶಾಂತವೀರಯ್ಯ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.

ಗೂಗಲ್ ಮೀಟ್ ವೇದಿಕೆಯಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದ್ದು, ಆಸಕ್ತ ರೈತರು https://meet.google.com/mib-nswp-abs ಈ ಲಿಂಕ್ ಬಳಸಿಕೊಂಡು ಭಾಗವಹಿಸಬಹುದು.

Published On: 17 June 2021, 10:55 PM English Summary: online conversation between farmers and scientists

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.