ಒಂದು ರಾಷ್ಟ್ರ, ಒಂದು ಎಂಎಸ್ಬಿ -ಒಂದು ಡಿಬಿಟಿ ಯೋಜನೆಯಡಿ ಪಂಜಾಬ್ ಮತ್ತು ಹರಿಯಾಣ ರಾಜ್ಯದ ರೈತರ ಖಾತೆಗೆ ಶೀಘ್ರ ಹಣ ಜಮೆಯಾಗುತ್ತಿದೆ. ಮುಂದೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಈ ಯೋಜನೆ ಜಾರಿಗೆ ಬರಲಿದೆ.
ಒಂದು ರಾಷ್ಟ್ರ, ಒಂದು ಎಂಎಸ್ಬಿ -ಒಂದು ಡಿಬಿಟಿ ಯೋಜನೆಯಡಿ ಈಗ ತಿಂಗಳುಗಟ್ಟಲೇ ಕಾಯಬೇಕಾಗಿಲ್ಲ. ಅತಿ ಕಡಿಮೆ ದಿನಗಳಲ್ಲಿ ಬೆಳೆ ಬೆಲೆ ರೈತರ ಖಾತೆಗಳಿಗೆ ವರ್ಗಾವಣೆಮಾಡಲಾಗುತ್ತಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರು ‘ಒಂದು ರಾಷ್ಟ್ರ, ಒಂದು ಎಂಎಸ್ ಪಿ ಒಂದು ಡಿಬಿಟಿ ದೇಶಾದ್ಯಂತ ರೈತರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿದ್ದಾರೆ. ಪ್ರಸಕ್ತ ಹಿಂಗಾರು ಮಾರುಕಟ್ಟೆ ಋತುವಿನಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಗೋಧಿ ಖರೀದಿಗೆ ರೈತರಿಗೆ ನೇರ ಪಾವತಿ ವ್ಯವಸ್ಥೆ ಮಾಡಲಾಗಿದೆ.
ದೇಶದ ಇತರ ರಾಜ್ಯಗಳಲ್ಲಿ ಎಂಎಸ್ ಪಿಯಲ್ಲಿ ಬೆಳೆಗಳ ಖರೀದಿಯನ್ನು ಆನ್ ಲೈನ್ ಮೂಲಕ ಪಾವತಿಸುವ ಪ್ರಕ್ರಿಯೆ ಈಗಾಗಲೇ ಜಾರಿಗೆ ಬಂದಿತ್ತು. ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಿದ ಉತ್ಪನ್ನಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ನೀಡಲಾಗುವುದು ಎಂದು ಅವರು ಹೇಳಿದರು.
2021-22ರಲ್ಲಿ ಏಪ್ರಿಲ್ 10ರಂದು ಪಂಜಾಬ್ ನಲ್ಲಿ ಗೋಧಿ ಖರೀದಿ ಪ್ರಾರಂಭವಾದ ನಂತರ ಏಪ್ರಿಲ್ 14ರವರೆಗೆ ಸರ್ಕಾರಿ ಸಂಸ್ಥೆಗಳು ರೈತರಿಂದ 10.56 ಲಕ್ಷ ಟನ್ ಗೂ ಹೆಚ್ಚು ಗೋಧಿಯನ್ನು ರೈತರಿಂದ ಖರೀದಿಸಿವೆ. ಹರಿಯಾಣದಲ್ಲಿ ಏಪ್ರಿಲ್ 1 ರಿಂದ ಗೋಧಿ ಖರೀದಿ ಪ್ರಾರಂಭವಾಯಿತು ಮತ್ತು ಏಪ್ರಿಲ್ 14 ರೊಳಗೆ 30 ಲಕ್ಷ ಟನ್ ಗಳಿಗಿಂತ ಹೆಚ್ಚು ಖರೀದಿಸಲಾಗಿದೆ
ಪ್ರಸಕ್ತ ಋತುವಿನಲ್ಲಿ ಏಪ್ರಿಲ್ 14 ರವರೆಗೆ ದೇಶಾದ್ಯಂತ 64.7 ಲಕ್ಷ ರು.ಟನ್ ಗೋಧಿಯನ್ನು ಖರೀದಿಸಲಾಗಿದೆ ಮತ್ತು ದೇಶದ 11 ರಾಜ್ಯಗಳ 6,6೦,593 ರೈತರು ಕನಿಷ್ಠ ಬೆಂಬಲ ಬೆಲೆಯ ಪ್ರಯೋಜನ ಪಡೆದಿದ್ದಾರೆ, ಇಲ್ಲಿಯವರೆಗೆ ಒಟ್ಟು ಮೌಲ್ಯ 12,8೦೦ ಕೋಟಿ ರೂಪಾಯಿ ಗೋಯಿ ಸಂಗ್ರಹಿಸಲಾಗಿದೆ. . ಒನ್ ನೇಷನ್ ಒನ್ ಎಂಎಸ್ ಪಿ ಒನ್ ಡಿಬಿಟಿ ಯೋಜನೆಯಡಿ, ಕೇಂದ್ರ ಸರ್ಕಾರ ಪಂಜಾಬ್ ನ 1.6 ಲಕ್ಷ ರೈತರ ಖಾತೆಗಳಿಗೆ 13.71 ಕೋಟಿ ರೂ.ಗಳನ್ನು ವರ್ಗಾಯಿಸಿದೆ.
ಒಂದು ರಾಷ್ಟ್ರ ಒಂದು ಎಂಎಸ್ ಪಿ ಒಂದು ಡಿಬಿಟಿ ಯೋಜನೆ ಎಂದರೇನು?
ಈ ಯೋಜನೆಯ ಮೂಲಕ ಅತಿ ಕಡಿಮೆ ದಿನಗಳಲ್ಲಿ ಬೆಳೆಗಳ ಬೆಲೆಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತಿದೆ. ಈಗ ರೈತರು ತಮ್ಮ ಹಣಕ್ಕಾಗಿ ಉದ್ಯಮಿಗಳ ಸುತ್ತ ಬೇಕಾಗಿಲ್ಲ. ಪಂಜಾಬ್ ಹೊರತುಪಡಿಸಿ ಇತರ ರಾಜ್ಯಗಳ ರೈತರು ಸಹ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಅನೇಕ ರಾಜ್ಯಗಳಲ್ಲಿ ಯೋಜನೆ ಜಾರಿಗೆ ತರಲಾಗಿದೆ
ಪಂಜಾಬ್ ಹೊರತುಪಡಿಸಿ ಇತರ ಕೆಲವು ರಾಜ್ಯಗಳಲ್ಲಿ ಒನ್ ನೇಷನ್ ಒನ್ ಎಂಎಸ್ ಪಿ ಒನ್ ಡಿಬಿಟಿ ಯೋಜನೆ (ಒಂದು ರಾಷ್ಟ್ರ-ಒಂದು ಎಂಎಸ್ ಪಿ-ಒಂದು ಡಿಬಿಟಿ ಯೋಜನೆ) ಸಹ ಜಾರಿಗೆ ಬಂದಿದೆ. ಇದರಿಂದ ರೈತರಿಗೆ ಖಾತೆಯಲ್ಲಿ ಹಣ ಸಿಗುವಂತಹ ಕೆಲಸ ನಡೆಯುತ್ತಿದೆ.
Share your comments