1. ಸುದ್ದಿಗಳು

ರಾಜ್ಯದಲ್ಲಿ 'ಒಂದು ಜಿಲ್ಲೆ ಒಂದು ಉತ್ಪನ್ನ' ಕಾರ್ಯಕ್ರಮದಡಿ ವಿಶೇಷ ಪ್ರೋತ್ಸಾಹ

One Product one district program

ಆತ್ಮ ನಿರ್ಭರ ಭಾರತಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ  ಯೋಜನೆಯನ್ನು ರಾಜ್ಯ ಸರಕಾರ ರೂಪಿಸಿದೆ. ಇದರಡಿ 30 ಜಿಲ್ಲೆಗಳ ಸ್ಥಳೀಯ ಸಾಂಪ್ರದಾಯಿಕ ಉತ್ಪನ್ನಗಳಿಗೆ ಪ್ರೋತ್ಸಾಹಿಸಲಾಗುವುದು.

ಹೌದು  ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಒತ್ತು ನೀಡುವಂತೆ ರಾಜ್ಯದಲ್ಲಿ 'ಒಂದು ಜಿಲ್ಲೆ-ಒಂದು ಉತ್ಪನ್ನ' ಕಾರ್ಯಕ್ರಮದಡಿ 30 ಜಿಲ್ಲೆಗಳ ಸ್ಥಳೀಯ ಉತ್ಪನ್ನಗಳಿಗೆ ಒತ್ತು ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ.

ಈ ಕಾರ್ಯಕ್ರಮದಡಿಯಲ್ಲಿ ಹಣಕಾಸು ನೆರವು, ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆತು ಉದ್ಯೋಗಾವಕಾಶ ದೊರೆಯಲಿದೆ ಎಂದು ಮುಖ್ಯಮಂತ್ರಿ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

ಬಾಗಲಕೋಟೆ: ಈರುಳ್ಳಿ

ಬೆಳಗಾವಿ: ಬೆಲ್ಲ

ಬಳ್ಳಾರಿ: ಅಂಜೂರ

ಬೆಂಗಳೂರು ಗ್ರಾಮಾಂತರ: ಕೋಳಿ ಸಾಕಣೆ ಉತ್ಪನ್ನ

ಬೆಂಗಳೂರು ನಗರ: ಬೇಕರಿ ಉತ್ಪನ್ನ

ಬೀದರ್‌: ಶುಂಠಿ

ಚಾಮರಾಜನಗರ: ಅರಿಶಿನ

ಚಿಕ್ಕಬಳ್ಳಾಪುರ: ಟೊಮೆಟೊ

ಚಿಕ್ಕಮಗಳೂರು: ಸಾಂಬಾರು ಪದಾರ್ಥ

ಚಿತ್ರದುರ್ಗ: ಶೇಂಗಾ

ದಕ್ಷಿಣ ಕನ್ನಡ: ಸಾಗರೋತ್ಪನ್ನ

ದಾವಣಗೆರೆ: ಕಿರು ಧಾನ್ಯ

ಧಾರವಾಡ: ಮಾವು

ಗದಗ: ಬ್ಯಾಡಗಿ ಮೆಣಸು

ಹಾಸನ: ತೆಂಗು ಉತ್ಪನ್ನ

ಹಾವೇರಿ: ಮಾವು

ಕಲಬುರ್ಗಿ: ತೊಗರಿ

ಕೊಡಗು: ಕಾಫಿ

ಕೋಲಾರ: ಟೊಮೆಟೊ

ಕೊಪ್ಪಳ: ಸೀಬೆ

ಮಂಡ್ಯ: ಬೆಲ್ಲ

ಮೈಸೂರು: ಬಾಳೆ ಉತ್ಪನ್ನ

ರಾಯಚೂರು: ಮೆಣಸು

ರಾಮನಗರ: ತೆಂಗು

ಶಿವಮೊಗ್ಗ: ಅನಾನಸ್‌

ತುಮಕೂರು: ತೆಂಗು

ಉಡುಪಿ: ಸಾಗರೋತ್ಪನ್ನ

ಉತ್ತರ ಕನ್ನಡ: ಸಾಂಬಾರು ಪದಾರ್ಥ

ವಿಜಯಪುರ: ಲಿಂಬೆ

ಯಾದಗಿರಿ: ಶೇಂಗಾ

Published On: 06 January 2021, 01:30 PM English Summary: one district one product

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.