1. ಸುದ್ದಿಗಳು

ICL ಕಂಪನಿಯ ರಸಗೊಬ್ಬರ ತರಕಾರಿ ಬೆಳೆಗಳ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ- ಭಾರ್ಗವ ರೆಡ್ಡಿ

ICL ರಸಗೊಬ್ಬರ ಉತ್ಪಾದನಾ ಕಂಪನಿಯ ಡೆಪ್ಯುಟಿ ಸೇಲ್ಸ್ ಮ್ಯಾನೇಜರ್ ಹಾಗೂ ಐಸಿಎಲ್ ನ ಕ್ರಾಪ್ ಮ್ಯಾನೇಜರ್ ಡಾ. ಯೋಗೇಶ ಕದಮ್ ರವರು ದಾಳಿಂಬೆ ತೋಟದಲ್ಲಿ ಹಣ್ಣುಗಳನ್ನು ಪರಿಶೀಲಿಸುತ್ತಿರುವುದು.

ಜಗತ್ತಿನ ಪ್ರಸಿದ್ಧ ಬಹುರಾಷ್ಟ್ರೀಯ ICL ರಸಗೊಬ್ಬರ ಉತ್ಪಾದನಾ ಕಂಪನಿಯ ಡೆಪ್ಯುಟಿ ಸೇಲ್ಸ್ ಮ್ಯಾನೇಜರ್ ಭಾರ್ಗವ ರೆಡ್ಡಿಯವರೊಂದಿಗೆ ಕೃಷಿ ಜಾಗರಣವು ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಸಂವಾದ ಹಮ್ಮಿಕೊಂಡಿತ್ತು.

ಕೃಷಿ ಜಾಗರಣ ಹಮ್ಮಿಕೊಂಡ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ರೈತಬಾಂಧವರಿಗೆ ತರಕಾರಿಗಳಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ಮಾಡಬೇಕು. ಈ ಪೋಷಕಾಂಶದಿಂದಾಗಿ ಬೆಳಗಳಿಗೆ ಆಗುವ ಉಪಯೋಗಗಳ ಕುರಿತು ಭಾರ್ಗವರೆಡ್ಡಿಯವರು ಸಮಗ್ರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಂದುವರೆದು ಭಾರ್ಗವರೆಡ್ಡಿಯವರು ಮಾತನಾಡುತ್ತಾ, ICL ಉತ್ಪನ್ನಗಳು ಕಡಿಮೆ pH ನೊಂದಿಗೆ ವಿನ್ಯಾಸಗೊಳೊಸಿಲಾಗಿದೆ ಮತ್ತು ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಈ ಉತ್ಪನ್ನಗಳಲ್ಲಿನ ವಿಶೇಷ ತಂತ್ರಜ್ಞಾನದಿಂದಾಗಿ ಅವು ಕ್ಷಾರೀಯ ಮಣ್ಣಿರುವ  ಮತ್ತು ಗಡಸು ನೀರಿನೊಂದಿಗೆ ಬೆಳೆಸುವ ಮಣ್ಣಿನಲ್ಲಿರುವ ಸಸ್ಯಗಳಿಂದ ಸುಲಭವಾಗಿ ಹೀರಲ್ಪಡುತ್ತವೆ. ಈ ಉತ್ಪನ್ನಗಳು ಲವಣಗಳು ಮತ್ತು ಭಾರ ಲೋಹಗಳಿಂದ ಮುಕ್ತವಾಗಿವೆ. ಇದು ಹನಿ ನೀರಾವರಿ ವ್ಯವಸ್ಥೆಯಲ್ಲಿ ಕಾರ್ಬೋನೇಟ್ಗಳನ್ನೂ ತಟಸ್ಥಗೊಳಿಸುತ್ತದೆ ಮತ್ತು ಆಗುವ ಅಡಚಣೆಯನ್ನು ತಡೆಯುತ್ತದೆ ಎಂದರು.

ಐಸಿಎಲ್ ನ ರಸಗೊಬ್ಬರವು ಗಡಸು ನೀರಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಹನಿ ನೀರಾವರಿ ವ್ಯವಸ್ಥೆಯಲ್ಲಿ ಉಂಟಾಗುವ ಅಡಚಣೆಗಳನ್ನು ತಡೆಯುತ್ತದೆ. ಪೋಷಕಾಂಶಗಳ ಲಭ್ಯತೆ ಹೆಚ್ಚಳ ಮಾಡುತ್ತದೆ. ನೀರಿನಲ್ಲಿ ಕರಗುವ ಸಾಮಥ್ಯ ಹೆಚ್ಚಿದೆ. ಹಾಗೂ ಪರಿಸರ ಸ್ನೇಹಿಯಾಗಿದೆ ಎಂದರು.

ಈ ರಸಗೊಬ್ಬರವು ಬೇರಿನ ಅಭಿವೃದ್ಧಿ ಹಾಗು ಬೆಳವಣಿಗೆಯನ್ನು ಪ್ರೋಚೋದಿಸುತ್ತದೆ. ಹೂವುಗಳು , ಬೀಜ /ಕಾಯಿಗಳ ರಚನೆಯನ್ನು ಪ್ರೋಚೋದಿಸುತ್ತದೆ . ಸಸ್ಯ ಉಸಿರಾಟ ರೂಪಾಂತರ ಗೊಳ್ಳುವದಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಕೋಶ ವಿಭಜನೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಸಿಗಳ ಹುರುಪು ಹೆಚ್ಚಳ ಮಾಡುವುದಲ್ಲದೆ ರೋಗ ಪ್ರತಿರೋಧ ಶಕ್ತಿಯನ್ನು ಹೊಂದಿದೆ. ಹಣ್ಣಿನ ಗಾತ್ರ ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ. ಬೇರಿನ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಹಕಾರಿಯಾಗಿದೆ. ಸಸ್ಯಗಳಲ್ಲಿ ಬೆಳೆಯುತ್ತಿರುವ ಬೇರಿನ ತುದಿಗಳನ್ನು ಸಕ್ರಿಯಗೊಳಿಸಲು ಅಗತ್ಯವಾಗಿದೆ ಎಂದರು.

ಸಿಂಪರಣೆ ವಿಧಾನ

ಟೊಮ್ಯಾಟೋ ತರಕಾರಿಗೆ ಸಿಂಪರಣೆ ಮಾಡುವಾಗ ಗೊಬ್ಬರವನ್ನು ಕಡ್ಡಾಯವಾಗಿ ಪ್ರತಿ ಲೀಟರ್ ನೀರಿಗೆ 4-5 ಗ್ರಾಂ ಬೆರಸಬೇಕು.  ಕ್ಯಾಪ್ಸಿಕಂ ತರಕಾರಿಗೆ ಸಹ ಪ್ರತಿ ಲೀಟರ್ ನೀರಿಗೆ 4-5 ಗ್ರಾಂ ಬೆರೆಸಿ ಸಿಂಪರಣೆ ಮಾಡಬೇಕು. ಹಣ್ಣುಗಳ ವಿಷಯಕ್ಕೆ ಬಂದಾಗ ಕಲ್ಲಂಗಡಿ ಮತ್ತು ಖರಬೂಜ ಬೆಳೆಯಲ್ಲಿ ಪ್ರತಿ ಲೀಟರ್ ನೀರಿಗೆ 4-5 ಗ್ರಾಂ ಬೆರೆಸೆ ಬೆಳೆಯ ಮೇಲೆ ಸಿಂಪರಣೆ ಮಾಡಬೇಕು.

ಐಸಿಎಲ್ ಹತ್ತಿರ ನೀರಿನಲ್ಲಿ ಕರಗುವ ರಸಗೊಬ್ಬರವವಲ್ಲದೆ ಮಣ್ನಿನಲ್ಲಿ ಬೆರೆಸುವ ಗೊಬ್ಬರ ಸಹ ಇದೆ. ಅದರ ಹೆಸರು ಪಾಲಿಸಲ್ಫೇಟ್.

ಬೆಳೆಗಳಲ್ಲಿ ಈ ರಸಗೊಬ್ಬರದ ಶಿಫಾರಸ್ಸು ಪ್ರಮಾಣ

ಮೆಣಸಿನ ಕಾಯಿ, ಬೀನ್ಸ್ ಗೆ ಪ್ರತಿ ಎಕರೆಗೆ 50-75 ಕೆಜಿ ಗೊಬ್ಬರ ಸಾಕಾಗುತ್ತದೆ. ಟೊಮ್ಯಾಟೋ, ಈರುಳ್ಳಿ, ಶೇಂಗಾ (ನೆಲಗಡಲೆ)  ಬಳ್ಳೊಳ್ಳಿ, ಆಲೂಗಡ್ಡೆ, ಕಲ್ಲಂಗಡಿ, ಹತ್ತಿ ಹಾಗೂ ಹೂವಿನ ಬೆಳೆಗಳಿಗೆ 75 ರಿಂದ 100 ಕೆಜಿ ಪ್ರತಿ ಎಕರೆಗೆ ಬೇಕಾಗುತ್ತದೆ.

ಬಾಳೆ ಹಣ್ಣು ಪ್ರತಿ ಗಿಡಕ್ಕೆ 0-20-0.25 ಕೆಜಿ, ದಾಳೆಂಬೆಗೆ 0.5-1 ಕೆಜಿ ಪ್ರತಿ ಗಿಡಕ್ಕೆ, ಮಾವಿನ ಹಣ್ಣಿನ ಗಿಡಕ್ಕೆ 1 ರಿಂದ 1.50 ಕೆಜಿ, ಬೇಕಾಗುತ್ತದೆ. ರೈತರಿಗೆ ಭಾರವಾಗದಂತೆ 25 ಕೆಜಿಯ ಚೀಲಗಳನ್ನು ಮಾಡಲಾಗಿದೆ. ಸುಲಭವಾಗಿ ಸಾಗಾಟ ಮಾಡಬಹುದು ಎಂದರು.

ಈ ಪಾಲಿಸಲ್ಫೇಟ್ ನ್ನು ಮುಂದುವರೆದ ದೇಶಗಳಾದ ಅಮೇರಿಕಾ, ಕೆನಾಡಾ, ಬ್ರಿಟನ್, ಇಸ್ರೇಲ್, ಮತ್ತು ಯುರೋಪ ದೇಶಗಳಲ್ಲಿ ಸಾವಯವ ಬೇಸಾಯದಲ್ಲಿ ಬಳಸಲು ಅನುಮೋದಿಸಲಾಗಿದೆ.

ಉತ್ಪಾದನಾ ಘಟಕಗಳು

ಹಾಲ್ಯಾಂಡ್, ಯುಎಸ್ಎ, ಸ್ಪೇನ್, ಇಸ್ರೇಲ್, ಬೆಲ್ಜಿಯಂ ಹಾಗೂ ಯುಕೆಯಲ್ಲಿ ಐಸಿಎಲ್ ಕಪಂನಿಯ ಉತ್ಪಾದನಾ ಘಟಕಗಳಿವೆ. ಅತೀ ಶೀಘ್ರದಲ್ಲಿ ಭಾರತದ ಮಹಾರಾಷ್ಟ್ರದಲ್ಲಿಯೂ ಆರಂಭಿಸಲಾಗುವುದು. ರೈತರಿಗೆ ಅತೀ ಸುಲಭವಾಗಿ ಸಿಗಬೇಕೆಂಬ ಉದ್ದೇಶದಿಂದ ಮಹಾರಾಷ್ಟ್ರದಲ್ಲಿ ಉತ್ಪಾದನಾ ಘಟಕ ಆರಂಭಿಸಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಐಸಿಎಲ್ ನ ಕ್ರಾಪ್ ಮ್ಯಾನೇಜರ್ ಡಾ. ಯೋಗೇಶ ಕದಮ್ ಉಪಸ್ಥಿತರಿದ್ದರು.

Published On: 19 June 2021, 09:54 AM English Summary: Nutrient disposal in vegetable crops

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.