ಜಗತ್ತಿನ ಯಾವುದೇ ಶಕ್ತಿ ಬಂದರೂ ಜನರಿಗೆ ಕುಡಿಯುವ ನೀರು ಕೊಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ದೇಶದ ರೈತರ ಅನುಕೂಲಕ್ಕಾಗಿ ಕೃಷಿ ಹವಾಮಾನ ಸಲಹಾ ಸೇವೆ
ರೋಣ ತಾಲ್ಲೂಕಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಮತ್ತು ರೋಣ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ. ನೆರವೇರಿಸಿ ಮಾತನಾಡಿದರು.
ಗದಗ ಜಿಲ್ಲೆಯ ಮೂರು ಪ್ರಮುಖ ನಗರಗಳಾದ ರೋಣ, ಗಜೇಂದ್ರಗಡ ಹಾಗೂ ನರೇಗಲ್ ಗೆ ಫ್ಲೋರೈಡ್ ಮುಕ್ತ ನೀರಿನ ಸೌಲಭ್ಯ ಕಲ್ಪಿಸಲಾಗಿದೆ .
ರೋಣದಲ್ಲಿ 46 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯಾಗಿದೆ. ನರೆಗಲ್ ಮತ್ತು ಗಜೇಂದ್ರ ಗಡಕ್ಕೆ 69 ಕೋಟಿ ರೂ.ಗಳ ವೆಚ್ಚದಲ್ಲಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.
ಸರ್ಕಾರಿ ನೌಕರರೇ ಗಮನಿಸಿ; ಶೀಘ್ರದಲ್ಲೇ 4% ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆ!
ಮೂರೂ ನಗರಗಳಿಗೆ ಶುದ್ಧವಾದ ಸಂಸ್ಕರಿಸಿದ ನೀರು ಒದಗಿಸುವ ಯೋಜನೆಯನ್ನು ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು.
ಸಂತೋಷದೊಂದಿಗೆ ಕಳವಳವೂ ಆಗಿದೆ ಎಂದ ಮುಖ್ಯಮಂತ್ರಿಗಳು, ಈ ಯೋಜನೆ 2009 ರಲ್ಲಿ ಪ್ರಾರಂಭವಾದರೂ, ಮುಂದುವರೆಯಲಿಲ್ಲ.
ಮಲಪ್ರಭ ನದಿ ನೀರನ್ನು ಶುದ್ದೀಕರಿಸಿ ಫ್ಲೋರೈಡ್ ಮುಕ್ತ ನೀರನ್ನು ಸರಬರಾಜು ಮಾಡಲು ಇಂದಿನಿಂದ ಪ್ರಾರಂಭಿಸಲಾಗಿದೆ ಎಂದರು.
ಡಬಲ್ ಇಂಜಿನ್ ಸರ್ಕಾರದ ಬದ್ಧತೆ
ಮೂರು ವರ್ಷದ ಹಿಂದೆ ಕೆಂಪುಕೋಟೆಯ ಮೇಲೆ ಪ್ರತಿ ಮನೆಗೆ ಕುಡಿಯುವ ನೀರು ಕೊಡುವುದಾಗಿ ಘೋಷಿಸಿದ್ದರು. ಈ ಮೂರು ವರ್ಷದಲ್ಲಿ ,12 ಕೋಟಿ ಮನೆಗಳಿಗೆ ಹೊಸದಾಗಿ ನೀರು ಕೊಟ್ಡಿದ್ದಾರೆ.
ನಮ್ಮ ರಾಜ್ಯದಲ್ಲಿ 72 ವರ್ಷಗಳವರೆಗೂ ಕೇವಲ 7 ಕೋಟಿ ಮನೆಗಳಿಗೆ ನೀರಿನ ಸೌಲಭ್ಯವಿತ್ತು. ಮೂರು ವರ್ಷಗಳಲ್ಲಿ 12 ಕೋಟಿ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಿದವರು ಪ್ರಧಾನಿ ನರೇಂದ್ರ ಮೋದಿ.
ರಾಜ್ಯದಲ್ಲಿ ಕೇವಲ 25 ಲಕ್ಷ ಮನೆಗಳಿಗೆ 75 ವರ್ಷಗಳಲ್ಲಿ ನೀರಿನ ಸಂಪರ್ಕ ನೀಡಿದ್ದರು. ನಮ್ಮ ಸರ್ಕಾರ ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ಸಂಪರ್ಕ ಕಲ್ಪಿಸಿದೆ.
ಇದು ಡಬಲ್ ಇಂಜಿನ್ ಸರ್ಕಾರದ ಬದ್ಧತೆ. ಜಲ್ ಜೀವನ್ ಮಿಷನ್, ಅಮೃತ್ ಯೋಜನೆ ಹಾಗೂ ಬಹು ಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಇದನ್ನು ಕೈಗೊಳ್ಳಲಾಗಿದೆ ಎಂದರು.
Share your comments