1. ಸುದ್ದಿಗಳು

ಭಾನುವಾರದ ಲಾಕ್‌ಡೌನ್‌ ರದ್ದು

ರಾಜ್ಯದಲ್ಲಿ ಇನ್ನುಮುಂದೆ ಭಾನುವಾರ ಸಂಪೂರ್ಣ ಲಾಕ್​ಡೌನ್(No Sunday lockdown) ಇರಲ್ಲ. ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ವಿಧಿಸಲಾಗುತ್ತಿದ್ದ ಕರ್ಫ್ಯೂ ರದ್ದುಪಡಿಸಲಾಗಿದ್ದು, ಸರ್ಕಾರಿ ನೌಕರರಿಗೆ ಹೆಚ್ಚುವರಿಯಾಗಿ ನೀಡಿದ್ದ ಶನಿವಾರದ ರಜೆಗಳನ್ನು ಕೈಬಿಡಲಾಗಿದೆ.

ರಾಜ್ಯ ಸರ್ಕಾರ ಅನ್‌ಲಾಕ್‌–3 ಮಾರ್ಗಸೂಚಿ ಪ್ರಕಟಿಸಿ ದೆ. ಆ.1 ರಿಂದಲೇ (ಶನಿವಾರ) ಇದು ಜಾರಿಗೆ ಬರಲಿದ್ದು, ಶುಕ್ರವಾರವೇ (ಜು.31) ರಾತ್ರಿ ಕರ್ಫ್ಯೂ ಮುಕ್ತಾಯವಾಗಲಿದೆ. ಭಾನುವಾರದಂದು ಲಾಕ್‌ ಡೌನ್‌ ಇರುವುದಿಲ್ಲ. ನಿರ್ಬಂಧಿತ ವಲಯ (ಕಂಟೇನ್ಮೆಂಟ್)ಗಳಲ್ಲಿ ಲಾಕ್​ಡೌನ್ ಮುಂದುವರಿಯಲಿದೆ.

ಅಂತರರಾಜ್ಯ ಪ್ರಯಾಣಿಕರ ಓಡಾಟದ ಮೇಲೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಯಾವುದೇ ರೀತಿಯ ಅನುಮತಿ ಪಡೆಯಬೇಕಾಗಿಲ್ಲ. ಕರ್ನಾಟಕಕ್ಕೆ ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರು ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆಗಸ್ಟ್ ಅಂತ್ಯದವರೆಗೆ ಶಾಲೆ-ಕಾಲೇಜುಗಳನ್ನು ತೆರೆಯಲ್ಲ(school-college) . ಆದರೆ ದೂರ ಅಂತರ ಹಾಗೂ ಆನ್ ಲೈನ್ (online) ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಗಿದೆ. ಹೆಚ್ಚು ಜನ ಗುಂಪು ಸೇರುವಂತಹ ಚಟುವಟಿಕೆಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ. ಇದರಿಂದಾಗಿ ಮೆಟ್ರೋ ರೈಲು, ಈಜುಗೊಳ, ಸಿನಿಮಾ ಟಾಕೀಸ್, ಸಭಾಂಗಣ ಮತ್ತು ಬಾರ್ ಗಳನ್ನು ತೆರೆಯಲು ಅನುಮತಿ ನೀಡಲಾಗಿಲ್ಲ. ಹಾಗೆಯೇ ಧಾರ್ವಿುಕ, ಸಾಂಸ್ಕೃತಿಕ, ರಾಜಕೀಯ ಸಭೆ- ಸಮಾರಂಭಗಳಿಗೆ ನಿರ್ಬಂಧವಿದೆ.

ಸರ್ಕಾರಿ ನೌಕರರಿಗೆ ನೀಡಲಾಗಿದ್ದ ವಾರದಲ್ಲಿ 5 ದಿನಗಳ ಕೆಲಸ ರದ್ದಾಗಿದ್ದು, ಆ.1ರಿಂದಲೇ ಜಾರಿಗೆ ಬರುವ ಕಾರಣ ಮುಂದಿನ ಶನಿವಾರ ಕರ್ತವ್ಯಕ್ಕೆ ಹಾಜರಾಗಬೇಕು. ಮನೆಯಿಂದಲೇ ಕೆಲಸ ಮುಂದುವರಿಸುವ ಬಗ್ಗೆ ಆಯಾ ಇಲಾಖೆಗಳು ನಿರ್ಧಾರ ಕೈಗೊಳ್ಳುತ್ತವೆಂದು ಮೂಲಗಳು ತಿಳಿಸಿವೆ.

Published On: 31 July 2020, 11:04 AM English Summary: No lock down on sunday

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.