ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಆಗುವುದಿಲ್ಲ. ವಿದ್ಯುತ್ ಖಾಸಗೀಕರಣದ ಚಿಂತನೆ ಸಹ ಸರ್ಕಾರದ ಮುಂದಿಲ್ಲ. ಒಂದು ವೇಳೆ ಈ ತರಹ ಬಂದರೆ ನಾನು ಕೂಡ ಸರ್ಕಾರದಲ್ಲಿ ಇರುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿರಿ: ರಾಜ್ಯದಲ್ಲಿ ಮುಂದಿನ 3 ದಿನ ಗುಡುಗು-ಮಿಂಚು ಸಮೇತ ಭಾರೀ ಮಳೆ ಸಾಧ್ಯತೆ, ನಿಮ್ಮ ಜಿಲ್ಲೆಯ ಬಗ್ಗೆ ತಿಳಿಯಿರಿ
ಹಾವೇರಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವೇಳೆ ರೈತರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.
ವಿದ್ಯುತ್ ಖಾಸಗೀಕರಣದ ಚಿಂತನೆ ಸಹ ಸರ್ಕಾರದ ಮುಂದಿಲ್ಲ. ಒಂದು ವೇಳೆ ಈ ತರಹ ಬಂದರೆ ನಾವು ಕೂಡ ಸರ್ಕಾರದಲ್ಲಿ ಇರುವುದಿಲ್ಲ. ನಾವು ರೈತರ ಪರವಾಗಿದ್ದೇವೆ. ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡುವ ಚಿಂತನೆ ಇಲ್ಲ ಅದು ಬಹಳ ಸ್ಪಷ್ಟ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಖಡಕ್ ಆಗಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವೇಳೆ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, ನಾವು ರೈತರ ಪರವಾಗಿದ್ದೇವೆ. ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡುವ ಚಿಂತನೆ ಇಲ್ಲ ಅದು ಬಹಳ ಸ್ಪಷ್ಟ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಸಾಲ ಮರುಪಾವತಿ ಮಾಡದ ರೈತರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ; ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ!
ಮೆಕ್ಕೆಜೋಳಕ್ಕೆ ಮಾತ್ರ ಮಧ್ಯಂತರ ಬೆಳೆ ಪರಿಹಾರದ ವಿಚಾರವಾಗಿ ಮಾತನಾಡಿದ ರೈತ ಮುಖಂಡ, ಮೆಕ್ಕೆಜೋಳಕ್ಕೆ ಮಾತ್ರ ಮಳೆ ಆಗುತ್ತಾ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್‌ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಬಿ.ಸಿ ಪಾಟೀಲ್, ರೈತ ಮುಖಂಡನಿಗೆ ನಿಧಾನವಾಗಿ ಮಾತನಾಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ರೈತರು ವಿವಿಧ ಸಮಸ್ಯೆಗಳನ್ನು ಸಚಿವ ಬಿ.ಸಿ ಪಾಟೀಲ್ ಮುಂದೆ ಹೇಳಿಕೊಂಡರು. ಅವರ ಸಮಸ್ಯೆಗಳನ್ನು ಆಲಿಸಿದ ಬಿ.ಸಿ. ಪಾಟೀಲ್ ತಮಗೆ ಸಾಧ್ಯವಾದಷ್ಟು ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಅಲ್ಲದೆ ಕೆಲವೊಂದು ಬೇಡಿಕೆಗಳ ಈಡೇರಿಕೆಗೆ ಬೆಂಗಳೂರಿಗೆ ಬರುವಂತೆ ರೈತ ನಾಯಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಬಳ್ಳಾರಿ, ಸರ್ಕಾರ 18 ವರ್ಷ ಮೇಲ್ಪಟ್ಟ ರೈತರು ಹಾವು ಕಡಿದು ಮೃತಪಟ್ಟರೆ ಪರಿಹಾರ ನೀಡುತ್ತೆ. ಅದರೆ ರೈತರ ಮಕ್ಕಳು ಹಾವು ಕಡಿದು ಮೃತಪಟ್ಟರೆ ಪರಿಹಾರ ಸಿಗುವದಿಲ್ಲ.
ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಆಹ್ವಾನ, ₹ 3.50ಲಕ್ಷ ಸಹಾಯಧನ!
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೈತ ಮಕ್ಕಳು ಹಾವು ಕಡಿದು ಮೃತಪಟ್ಟರೆ ಅವರಿಗೆ ಸಹ ಪರಿಹಾರ ಸಿಗುವಂತೆ ಕಾನೂನಿನಲ್ಲಿ ಮಾರ್ಪಾಡು ಮಾಡುವಂತೆ ತಿಳಿಸಿದರು.
ಈ ಕುರಿತಂತೆ ಚರ್ಚಿಸುವುದಾಗಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದರು. ತಾವು ಸಹ ರೈತನ ಮಗನಾಗಿದ್ದು ರೈತರ ಸಮಸ್ಯೆಗಳು ಗೊತ್ತಿವೆ. ನಮ್ಮ ಸರ್ಕಾರ ರೈತಪರವಾಗಿದ್ದು ರೈತರ ಸಂಕಷ್ಟಗಳಿಗೆ ಶೀಘ್ರ ಸ್ಪಂದಿಸುತ್ತಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
Share your comments