1. ಸುದ್ದಿಗಳು

NMMSS Scholarship: ಶಾಲಾ-ಕಾಲೇಜು ಮಕ್ಕಳಿಗೆ ಇಲ್ಲಿದೆ ₹12,000 ಸ್ಕಾಲರ್‌ಶಿಪ್ ! ಅ.15ರೊಳಗೆ ಅರ್ಜಿ ಸಲ್ಲಿಸಲು ಸೂಚನೆ

Kalmesh T
Kalmesh T
NMMSS Scholarship: Here is ₹12,000 Scholarship for School-College Children!

ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಅಕ್ಟೋಬರ್‌ 15 ಕೊನೆ ದಿನ. ಇಲ್ಲಿದೆ ಈ ಕುರಿತಾದ ಸಂಪೂರ್ಣ ಮಾಹಿತಿ

ಇದನ್ನೂ ಓದಿರಿ: ರೈತರೇ ಗಮನಿಸಿ: ಗಂಗಾ ಕಲ್ಯಾಣ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಕೆಗೆ ಅ.20 ಕೊನೆ ದಿನ..

'ರಾಷ್ಟ್ರೀಯ ಮಟ್ಟದ ಮೆರಿಟ್ ಸ್ಕಾಲರ್‌ಶಿಪ್ ಯೋಜನೆ'ಯಡಿ ಆರ್ಥಿಕವಾಗಿ ದುರ್ಬಲ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳು 8ನೇ ತರಗತಿ ಹಂತದಲ್ಲಿ ಕೌಟುಂಬಿಕ ಸಮಸ್ಯೆಗಳಿಂದ ಶಾಲೆ ತೊರೆಯುವುದನ್ನು ತಡೆಯಲು ಮತ್ತು ಪ್ರೌಢಶಾಲೆ ಹಂತದಲ್ಲಿ ಅವರು ಶಿಕ್ಷಣ ಮುಂದುವರಿಸುವುದನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

ಪ್ರತಿ ವರ್ಷ 9ನೇ ತರಗತಿಯಿಂದ ಆಯ್ದ 1 ಲಕ್ಷ ಹೊಸ  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

ರಾಜ್ಯ ಸರ್ಕಾರಿ, ಸರ್ಕಾರಿ-ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 10ನೇ ತರಗತಿಯಿಂದ 12ನೇ ತರಗತಿವರೆಗೆ ಶಿಕ್ಷಣ ಮುಂದುವರಿಸಲು, ನವೀಕರಿಸಲು ಈ ಸ್ಕಾಲರ್ ಶಿಪ್ ನೀಡಲಾಗುತ್ತದೆ.

ಕರ್ನಾಟಕದಲ್ಲಿ ಇನ್ನೂ 2 ದಿನ ಮಳೆ ಸಾಧ್ಯತೆ! ಯಾವ ಜಿಲ್ಲೆಯಲ್ಲಿ ಏನೇನಾಗಲಿದೆ ಗೊತ್ತೆ?

ವಿದ್ಯಾರ್ಥಿವೇತನ ಮೊತ್ತ ವರ್ಷಕ್ಕೆ 12,000 ರೂ. ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಮಟ್ಟದ ಮೆರಿಟ್ ಸ್ಕಾಲರ್‌ಶಿಪ್ ಯೋಜನೆ (NMMSS)ಯನ್ನು National Means cum Merit Scholarship scheme ಪೋರ್ಟಲ್‌ನಲ್ಲಿ ಅಳವಡಿಸಲಾಗಿದೆ.

ಆರ್ಥಿಕವಾಗಿ ದುರ್ಬಲ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ಕಾಲರ್‌ಶಿಪ್ ಯೋಜನೆಗಳಿಗೆ ಈ ಪೋರ್ಟಲ್ ಸೂಕ್ತ ವೇದಿಕೆಯಾಗಿದೆ.

ಎನ್ಎಂಎಂಎಸ್ಎಸ್ ವಿದ್ಯಾರ್ಥಿವೇತನವನ್ನು ಡಿಬಿಟಿ ವಿಧಾನ ಅನುಸರಿಸಿ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಫ್ಎಂಎಸ್) ಮೂಲಕ ವಿದ್ಯುನ್ಮಾನ ವರ್ಗಾವಣೆಯ ಮೂಲಕ ಆಯ್ದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವಿತರಿಸಲಾಗುತ್ತದೆ. ಇದು 100% ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ.

ಸಿಹಿಸುದ್ದಿ: ರೈತರಿಗೆ 5 ತಾಸಿನ ಬದಲು 7 ತಾಸು ವಿದ್ಯುತ್‌ ಪೂರೈಕೆ ಸಿಎಂ ಬೊಮ್ಮಾಯಿ!

ಎಲ್ಲಾ ಮೂಲಗಳನ್ನು ಪರಿಗಣಿಸಿದ ಪೋಷಕರ ಆದಾಯ  3,50,000 ರೂ.ಗಿಂತ ಒಳಗಿದ್ದರೆ, ಅಂತಹ ಪೋಷಕರ ಪ್ರತಿಭಾವಂತ ಮಕ್ಕಳು ವಾರ್ಷಿಕ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ.  
ಸ್ಕಾಲರ್‌ಶಿಪ್‌ ನೀಡಲು ಆಯೋಜಿಸುವ ಆಯ್ಕೆ ಪರೀಕ್ಷೆಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳು 7ನೇ ತರಗತಿಯ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳನ್ನು ಗಳಿಸಿರಬೇಕು ಅಥವಾ ತತ್ಸಮಾನ ದರ್ಜೆ ಹೊಂದಿರಬೇಕು(ಎಸ್ ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 5% ಸಡಿಲಿಕೆ ಇದೆ).
Published On: 03 October 2022, 04:54 PM English Summary: NMMSS Scholarship: Here is ₹12,000 Scholarship for School-College Children!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.