1. ಸುದ್ದಿಗಳು

BREAKING ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತೀಶ್‌ ಕುಮಾರ್‌..BJPಯೊಂದಿಗಿನ ಮೈತ್ರಿ ಖತಂ

Maltesh
Maltesh
Nitish Kumar resigns as Bihar Chief Minister

ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್  ರಾಜೀನಾಮೆ ನೀಡಿದ್ದು, ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದಾರೆ. ಇದಕ್ಕೂ ಮೊದಲು, ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್

ರಾಜೀನಾಮೆ ನೀಡಿದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲು ಅವರು ತಮ್ಮ ನಿವಾಸದಲ್ಲಿ ಪಕ್ಷದ ಸಂಸದರು ಮತ್ತು ಶಾಸಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು.  ಬಳಿಕ ಮದ್ಯಾಹ್ನ ರಾಜ್ಯಪಾಲರನ್ನ ಭೇಟಿ ಮಾಡಿದ ನಂತರ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ಇದನ್ನೂ ಓದಿ:

12ನೇ ವಯಸ್ಸಿಗೆ ಗಿನ್ನೆಸ್‌ ದಾಖಲೆ ಮಾಡಿದ ರೈತನ ಮಗ..ಈ ಪ್ರಚಂಡ ಪೋರನ ಸಾಧನೆಯೇನು ಗೊತ್ತಾ..?

ಈ ಮೂಲಕ ಅವರು ಇಷ್ಟು ದಿನ ಬಿಜೆಪಿಯೊಂದಿಗಿದ್ದ ಸಂಬಂಧವನ್ನು ಖತಂಗೊಳಿಸಿದ್ದಾರೆ. ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡರೆ ಹೊಸ ಸರ್ಕಾರದ ರಚನೆಗೆ ಬೆಂಬಲ ನೀಡಲು ಕಾಂಗ್ರೆಸ್ ಈಗಾಗಲೇ ನಿರ್ಧರಿಸಿದೆ.

ಮಹಾಮೈತ್ರಿಕೂಟಕ್ಕೆ ನಿತೀಶ್ ಮುಖ್ಯಮಂತ್ರಿಯಾಗಲಿದ್ದಾರೆ 

ಮಹಾಮೈತ್ರಿಕೂಟದ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಂದು ಕಾಂಗ್ರೆಸ್ ಶಾಸಕ ಶಕೀಲ್ ಅಹಮದ್ ಖಾನ್ ಹೇಳಿದ್ದಾರೆ. ಎಲ್ಲವೂ ಇತ್ಯರ್ಥಗೊಂಡಿದೆ. ಮೂಲಗಳ ಪ್ರಕಾರ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಕಾಂಗ್ರೆಸ್‌ಗೆ ಸ್ಪೀಕರ್‌ ಸ್ಥಾನ ಸಿಗಬಹುದು.

ನಿತೀಶ್ ಕುಮಾರ್ ಅವರ ವಿಶ್ವಾಸಾರ್ಹತೆ ಶೂನ್ಯವಾಗಿದೆ -ಚಿರಾಗ್ ಪಾಸ್ವಾನ್ 
ಇಂದು ನಿತೀಶ್ ಕುಮಾರ್ ಅವರ ವಿಶ್ವಾಸಾರ್ಹತೆ ಶೂನ್ಯವಾಗಿದೆ. ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು ಮತ್ತು ರಾಜ್ಯಕ್ಕೆ ಹೊಸ ಜನಾದೇಶ ನೀಡಬೇಕು ಎಂದು ನಾವು ಬಯಸುತ್ತೇವೆ. ಅವರು ಯಾವುದೇ ಸಿದ್ಧಾಂತವನ್ನು ಹೊಂದಿಲ್ಲ.. ಮುಂದಿನ ಚುನಾವಣೆಯಲ್ಲಿ ಜೆಡಿಯು ಶೂನ್ಯ ಸ್ಥಾನ ಪಡೆಯಲಿದೆ ಎಂದು ಪಾಸ್ವಾನ್‌ ಹೇಳಿದಾರೆ..

Published On: 09 August 2022, 04:30 PM English Summary: Nitish Kumar resigns as Bihar Chief Minister

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.