ಇಂದಿನಿಂದ ಹೊಸ ವರ್ಷ ಆರಂಭವಾಗಲಿದೆ. ಈ ದಿನ ಕ್ಯಾಲೆಂಡರ್ ಅಷ್ಟೇ ಅಲ್ಲ, ದೈನಂದಿನ ಜೀವನದಲ್ಲಿ ಕೆಲವು ಬದಲಾವಣೆಯಾಗಲಿದೆ. ಆ ಬದಲಾವಣೆ ಯ್ಯಾವಾವು ಎಂಬುದನ್ನು ತಿಳಿಯಲು ಇಲ್ಲಿದೆ ಮಾಹಿತಿ. ನಮ್ಮ ಜೀವನದಲ್ಲಿ ಪರಿಣಾಮ ಬೀರುವ ಹಲವಾರು ನಿಯಮಗಳು ಜನವರಿ 1 ರಿಂದಲೇ ಬದಲಾಗಲಿದೆ.
ಲ್ಯಾಂಡ್ಲೈನ್ ಟು ಮೊಬೈಲ್ ಕರೆ ಮಾಡಲು 0 ಒತ್ತಿ:
ಲ್ಯಾಂಡ್ ಲೈನ್ ಫೋನಿನಿಂದ ಮೊಬೈಲ್ ಕರೆ ಮಾಡಲು ಇನ್ನೂ ಮುಂದೆ 0 ಒತ್ತಬೇಕು. ಹೌದು ಸ್ಥಿರ ದೂರವಾಣಿಯಿಂದ ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮುನ್ನು 0 ಒತ್ತುವ ಕ್ರಮ ಇಂದಿನಿಂದ ಜಾರಿ ಆಗಲಿದೆ.
ಚೆಕ್ ಮಾಹಿತಿ ಬ್ಯಾಂಕಿಗೆ ನೀಡಬೇಕು:
ಚೆಕ್ ಮೂಲಕ ಹಣ ಪಾವತಿಗೆ ಆರ್.ಬಿ.ಐ ಜನವರಿ 1 ರಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. 50 ಸಾವಿರಕ್ಕಿಂತ ಹೆಚ್ಚು ಹಣದ ಚೆಕ್ ನೀಡುವವರು ತಮ್ಮ ಬ್ಯಾಂಕಿಗೆ ಮಾಹಿತಿ ನೀಡಬೇಕು.
ಎಲ್ಪಿಜಿ ಸಿಲಿಂಡರ್ ಬೆಲೆಗಳು:
ತೈಲ ಮಾರುಕಟ್ಟೆ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾದರವನ್ನು ಅವಲಂಬಿಸಿ ಪ್ರತಿತಿಂಗಳ ಮೊದಲ ದಿನ ಎಲ್ಪಿಜಿ ಬೆಲೆಯನ್ನು ಪರಿಷ್ಕರಿಸಲಿವೆ.
ಟಿ.ವಿ ಪ್ರಿಜ್ ಬೆಲೆ ಹೆಚ್ಚಳ:
ಟಿ.ವಿ ಫ್ರಿಜ್ ಬೆಲೆ ಶೇ., 10 ರಷ್ಟು ಹೆಚ್ಚಾಗಲಿದೆ. ಹೀಗಾಗಿ ಹೊಸದಾಗಿ ಖರೀದಿ ಮಾಡುವವರು ಹೆಚ್ಚಿನ ಬೆಲೆ ಪಾವತಿಸಬೇಗಕು.
ಕೆಲವು ಮೊಬೈಲ್ಗಳ ವ್ಯಾಟ್ಸ್ ಅಪ್ ಕೆಲಸ ಮಾಡಲ್ಲ:
ಜ. 1ರಿಂದ ಕೆಲವೊಂದು ಮೊಬೈಲ್ ಫೋನ್ ಘಲ್ಲಲಿ ಸೇವೆ ಸ್ಥಗಿತಗೊಳಿಸಲಿದೆ. ಅಂಡ್ರ್ಯಾಯx… ಚಾಲನೆಯಲ್ಲಿರುವ ಒಎಸ್ 4.0.3 ಮತ್ತದರ ಬಳಿಕದ ಆವೃತ್ತಿಗಳು, ಐಫೋನ್ ಚಾಲನೆಯಲ್ಲಿರುವ ಐಒಎಸ್ 9 ಮತತ್ ಅದರ ಅನಂತರದ ಆವೃತ್ತಿಗಲಲ್ಲಿ ಮಾತ್ರ ಕಾರ್ಯ ನಿರ್ವಹಿಸಲಿದೆ. ಇದಕ್ಕಿಂತ ಹಳೆಯ ಅಥವಾ ಆರಂಭದ ಆವೃತ್ತಿಗಳಲ್ಲಿ ವ್ಯಾಟ್ಸ್ ಅಪ್ ರದ್ದಾಗಲಿದೆ.
ಬೈಕ್ ಕಾರುಗಳ ಬೆಲೆ ಹೆಚ್ಚು
ಹೊಸ ವರ್ಷಕ್ಕೆ ಬೈಕ್ ಹಾಗೂ ಕಾರು ಖರೀದಿಸುವ ಯೋಜನೆ ಇದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ.ಮಾರುತಿ, ಸುಝುಕಿ, ಮಹಿಂದ್ರಾ ಕಂಪನಿಗಳು ದರ ಏರಿಕೆ ಮಾಡಲಿದೆ. ಬೈಕ್ ದರವೂ ಹೆಚ್ಚಾಗಲಿದೆ
Share your comments