1. ಸುದ್ದಿಗಳು

ನಾಳೆ ನೂತನ ಸಚಿವರ ಪ್ರಮಾಣ ವಚನ: ಇಲ್ಲಿದೆ ಸಂಭವನೀಯ ಸಚಿವರ ಲಿಸ್ಟ್‌

Maltesh
Maltesh
New ministers to take oath tomorrow: Here is the list of possible ministers

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕನಿಷ್ಠ 20 ರಿಂದ 24 ಹೊಸ ಸಚಿವರು ಸಂಪುಟ ಸೇರ್ಪಡೆ ಬಹುತೇಕ ಕನ್ಫರ್ಮ್‌ ಎಂದು ಹೇಳಲಾಗುತ್ತಿದೆ. ಗುರುವಾರ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದರು.

ನಾಲ್ವರು ನಾಯಕರ ಸಭೆಯ ಮೇಲೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವ ಸ್ಥಾನಕ್ಕಾಗಿ ಹಲವಾರು ಶಾಸಕರ ಹೆಸರುಗಳನ್ನು ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಸದ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂಭವನೀಯರ ಲಿಸ್ಟ್‌ ಇಲ್ಲಿದೆ.

ಸಿದ್ದರಾಮಯ್ಯ ಸರ್ಕಾರದಲ್ಲಿನ ಸಂಭವನೀಯ ಸಚಿವರು ಯಾರು..?

ಸಂಭವನೀಯ ಸಚಿವರು

ವಿಧಾನಸಭಾ ಕ್ಷೇತ್ರ––

ಡಾ. M C ಸುಧಾಕರ್

ಚಿಂತಾಮಣಿ

ಕೃಷ್ಣಭೈರೇಗೌಡ

ಬ್ಯಾಟರಾಯಪುರ

ಪುಟ್ಟರಂಗಶೆಟ್ಟಿ

ಚಾಮರಾಜನಗರ

ನರೇಂದ್ರಸ್ವಾಮಿ

ಮಳವಳ್ಳಿ

R B ತಿಮ್ಮಾಪುರ

ಮುಧೋಳ

ಅಜಯ್ ಧರ್ಮಸಿಂಗ್

ಜೇವರ್ಗಿ

D.ಸುಧಾಕರ್

ಹಿರಿಯೂರು

ಲಕ್ಷ್ಮೀ ಹೆಬ್ಬಾಳ್ಳರ್

 ಬೆಳಗಾವಿ ಗ್ರಾಮೀಣ

ಮಂಕಾಳು ವೈದ್ಯ

ಭಟ್ಕಳ

H K ಪಾಟೀಲ್

ಗದಗ

ಶಿವಾನಂದ್ ಪಾಟೀಲ್

ಬಸವನಬಾಗೇವಾಡಿ

ಚಲುವರಾಯಸ್ವಾಮಿ

ನಾಗಮಂಗಲ

ಮಧು ಬಂಗಾರಪ್ಪ

ಸೊರಬ

ಶಿವರಾಜ್ ತಂಗಡಗಿ

ಕನಕಗಿರಿ

ಈಶ್ವರ್ ಖಂಡ್ರ

ಭಾಲ್ಕಿ

S S ಮಲ್ಲಿಕಾರ್ಜುನ್-

ದಾವಣಗೆರೆ ಉತ್ತರ

ಶರಣ ಬಸಪ್ಪಗೌಡ ದರ್ಶನಾಪೂರ್

ಶಹಾಪುರ

ಬಸವರಾಜ್ ರಾಯರೆಡ್ಡಿ

ಯಲಬುರ್ಗಾ

H C ಮಹದೇವಪ್ಪ

ಟಿ ನರಸೀಪುರ

K ವೆಂಕಟೇಶ್

ಪಿರಿಯಾಪಟ್ಟಣ

ಬೈರತಿ ಸುರೇಶ್

ಹೆಬ್ಬಾಳ

ರಹೀಂ ಖಾನ್

ಬೀದರ್

 

ಸದ್ಯ ನೂತನ ಸಚಿವರ ಪ್ರಮಾಣ ವಚನಕ್ಕೆ ಕೂಡ ಡೇಟ್‌ ಫಿಕ್ಸ್‌ ಮಾಡಲಾಗಿದ್ದು, ಸದ್ಯದ ಮಾಹಿತಿಯ ಪ್ರಕಾರ ನಾಳೆ ಅಂದ್ರೆ ಶನಿವಾರ ಸಚವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ಬೆಳಿಗ್ಗೆ 11:45 ಕ್ಕೆ ನೂತನ ಸಚಿವರು ಪದಗ್ರಹಣ ಕೈಗೊಳ್ಳಲಿದ್ದು, ಈ ಕಾರ್ಯಕ್ರಮ ರಾಜಭವನದಲ್ಲಿ ನಡೆಯಲಿದೆ. ಇನ್ನು ಈ ಸಮಾರಂಭಕ್ಕೆ ರಾಜ್ಯಪಾಲರು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಅಷ್ಟೇ ಅಲ್ಲದೆ ಇಂದು ರಾಜ್ಯ ಕಾಂಗ್ರೆಸ್‌ನಿಂದ ನೂತನ ಸಚಿವರ ಫೈನಲ್‌ ಲಿಸ್ಟ್‌ ಹೊರಬರುವ ಸಾಧ್ಯತೆ ಇದೆ.

Published On: 26 May 2023, 10:59 AM English Summary: New ministers to take oath tomorrow: Here is the list of possible ministers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.