1. ಸುದ್ದಿಗಳು

ಜನವರಿ 2 ರಿಂದ 4ರವರೆಗೆ ಬಾಗಲಕೋಟೆಯಲ್ಲಿ ಮೂರು ದಿನಗಳ ಕಾಲ ತೋಟಗಾರಿಕೆ ಮೇಳ-2021

National Horticulture Fair -2021

ರೈತ ಬಾಂಧವರಿಗೆ ಸಂತಸದ ಸುದ್ದಿ. ಕೃಷಿ ಮೇಳದಂತೆ ಜನವರಿ ತಿಂಗಳಲ್ಲಿ ತೋಟಗಾರಿಕೆ ಮೇಳವೂ  ಹಮ್ಮಿಕೊಳ್ಳಲಾಗುತ್ತಿದೆ. ಹೌದು ಜನವರಿ ತಿಂಗಳಲ್ಲಿ 02, 03, ಮತ್ತು 04 ರಂದು ಮೂರು ದಿನಗಳ ಕಾಲ ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆಯಲ್ಲಿ ತೋಟಗಾರಿಕಾ ಮೇಳ ಹಮ್ಮಿಕೊಳ್ಳಲಾಗಿದೆ.

ಮೇಳದಲ್ಲಿ  ಹೊಸ ಸಂಶೋಧನೆ, .ಹೊಸ ಹೊಸ ತಳಿ ಮತ್ತು ತಂತ್ರಜ್ಞಾನಗ ಮಾಹಿತಿಯನ್ನು ರೈತರಿಗೆ ನೀಡುವ ಸಲುವಾಗಿ,ಕೃಷಿ ಮೇಳ ಮತ್ತು ತೋಟಗಾರಿಕಾ ಮೇಳ ಹಮ್ಮಿಕೊಳ್ಳಲಾಗುತ್ತಿದೆ, ,ಆಸಕ್ತ ರೈತರು ಈ ಮೇಳದಲ್ಲಿ ಪಾಲ್ಗೊಂಡು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.2021 ಅಂತರರಾಷ್ಟ್ರೀಯ ಹಣ್ಣು ಮತ್ತು ತರಕಾರಿಗಳ ವರ್ಷ, ಈ ತೋಟಗಾರಿಕೆ ಮೇಳ 9ನೇದಾಗಿದ್ದು, ಕೋವಿಡ್ 19 ಸಲುವಾಗಿ ತಕ್ಕಮಟ್ಟಿಗೆ ಆಫ್ಲೈನ್ ಮತ್ತು ಆನ್ಲೈನ್ ನಲ್ಲಿ ನಡೆಯಲಿದೆ.

ಕೃಷಿ ಮೇಳ ನಡೆಯುವ ಸ್ಥಳ:  ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಉದ್ಯಾನಗಿರಿ,ನವನಗರ,ಬಾಗಲಕೋಟೆ-587 104

ತೋಟಗಾರಿಕಾ ಮೇಳ ವಿಶೇಷತೆಗಳು:

* ಲಾಭದಾಯಕ ಪದ್ಧತಿ ಪ್ರಾತ್ಯಕ್ಷಿಕೆಗಳು: ವಾಣಿಜ್ಯ ಮತ್ತು ಅಪರೂಪದ ತರಕಾರಿಗಳು, ಹೂ,ಹಣ್ಣು,  ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳು,

* ಜಲವಿಜ್ಞಾನ ತೋಟಗಳ ಪ್ರಾತ್ಯಕ್ಷಿಕೆ,:ಲಂಬ,ತಾರಸಿ,ವಿವಿಧ ಮೇಲ್ಚಾವಣಿ, ವಿದೇಶಿ ತರಕಾರಿಗಳು ತೋಟಗಳು.

* ಬಾಗಲಕೋಟೆಯ ವಿಜ್ಞಾನಗಳ ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿದ ಹೊಸ ಮತ್ತು ಅಭಿವೃದ್ಧಿಪಡಿಸಿದ ಹಣ್ಣು, ತರಕಾರಿ, ಹೂವು, ತೋಟಪಟ್ಟಿ,ಮಸಾಲೆ, ಔಷಧಿ ಮತ್ತು ಸುಗಂಧ ದ್ರವ್ಯ ಸಸ್ಯಗಳು.ಕೊಯ್ಲೋತ್ತರ ತಂತ್ರಜ್ಞಾನ,ಕೀಟಶಾಸ್ತ್ರ,  ಸಸ್ಯ ರೋಗಶಾಸ್ತ್ರ,ಮಣ್ಣು ವಿಜ್ಞಾನ, ಸಾಮಾಜಿಕ ವಿಜ್ಞಾನ ವಿಭಾಗಗಳ ಪ್ರದರ್ಶನಗಳು.

* ಮೀನುಗಾರಿಕೆಯ ಅಕ್ವೇರಿಯಂ,ಮುಧೋಳ ಶ್ವಾನ ತಳಿಗಳ ಪ್ರಾತ್ಯಕ್ಷಿಕೆ.

* ತೋಟಗಾರಿಕೆ ವಿಶ್ವವಿದ್ಯಾಲಯ ಗಳಿಂದ ಬಿಡುಗಡೆಗೊಂಡ ಬೀಜಗಳು,ಸಸ್ಯ ಪರಿಕರಗಳು, ಸೂಕ್ಷ್ಮಾಣು ಜೀವಿಯ ಉತ್ಪಾದನೆಗಳು, ಮಾರಾಟ

* ಶ್ರೇಷ್ಠ ತೋಟಗಾರಿಕೆ ರೈತ/ ರೈತ ಮಹಿಳೆ ಪ್ರಶಸ್ತಿ ಮತ್ತು ಗೌರವ ಧನ ವಿತರಣೆ,ಸನ್ಮಾನ ಮತ್ತು ಇತರ ರೈತರೊಂದಿಗೆ ಯಶೋಧಗಾಥೆಗಳ ವಿನಿಮಯ.

ಹೆಚ್ಚಿನ ಮಾಹಿತಿಗೆ  ಮೊಬೈಲ್ ಸಂಖ್ಯೆ : 9480696381ಗೆ ಸಂಪರ್ಕಿಸಬಹುದು.

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ

Published On: 29 December 2020, 03:34 PM English Summary: National Horticulture Fair -2021

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.