1. ಸುದ್ದಿಗಳು

Nano Urea : 1 ಬಾಟಲ್ ನ್ಯಾನೊ ಯೂರಿಯಾ; 1 ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮ!

Kalmesh T
Kalmesh T
Nano Urea : 1 bottle Nano Urea; Equal to 1 bag of Urea Fertilizer!

Nano Urea | ಧಾರವಾಡ : ನ್ಯಾನೋ ಯೂರಿಯಾ ದ್ರಾವಣವು ಪ್ರತಿಶತ 4 ರಷ್ಟು ನ್ಯಾನೋ ಸಾರಜನಕ ಕಣಗಳನ್ನು ಹೊಂದಿರುತ್ತದೆ. ಒಂದು ಬಾಟಲ್ (500 ಮಿ.ಲೀ) ನ್ಯಾನೊ ಯೂರಿಯಾ ಒಂದು ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮಾನಾಗಿದೆ. ರೈತರು ತಮ್ಮ ಬೆಳೆಗಳಿಗೆ ಯೂರಿಯಾ ರಸಗೊಬ್ಬರಕ್ಕಾಗಿ ಹೆಚ್ಚು ಅಲೆಯದೆ ನ್ಯಾನೊ ಯೂರಿಯಾ ದ್ರಾವಣವನ್ನು ಬಳಸಬೇಕು. ಇದರಿಂದ ಉತ್ತಮ ಈಳುವರಿ ಬರುತ್ತದೆ ಎಂದು ಕೃಷಿ ಇಲಾಖೆಯ ಜಂಟಿನಿರ್ದೇಶಕ ಡಾ.ಕಿರಣಕುಮಾರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳೆಯ ಬೆಳವಣಿಗೆಯಲ್ಲಿ ಸಾರಜನಕವು ಪ್ರಮುಖ ಪಾತ್ರ ವಹಿಸುತ್ತದೆ. ಸಾರಜನಕ ಬೇಡಿಕೆಯನ್ನು ಪೂರೈಸಲು ರೈತರು 2 ರಿಂದ 3 ಹಂತದಲ್ಲಿ ಯೂರಿಯಾ ಗೊಬ್ಬರವನ್ನು ತಳ ಗೊಬ್ಬರ ಹಾಗೂ ಮೇಲೂ ಗೊಬ್ಬರವಾಗಿ ನೀಡುತ್ತಾರೆ. ಇದರಲ್ಲಿ ಶೇ.30-50 ರಷ್ಟು ಯೂರಿಯಾ ಮಾತ್ರ ಬೆಳೆಗಳಿಗೆ ದೊರೆಯುತ್ತದೆ.

ಸಾರಜನಕವು ಅಮೋನಿಯಾ ಹಾಗೂ ನೈಟ್ರಸ್‍ಆಕ್ಸೈಡ್ ರೂಪದಲ್ಲಿ ಮಣ್ಣು, ಗಾಳಿ ಮತ್ತು ನೀರನ್ನು ಮಲೀನಗೊಳಿಸುತ್ತದೆ. ಆದರೆ ನ್ಯಾನೊ ಯೂರಿಯಾದಿಂದ ಪರಿಸರ ಮಾಲಿನ್ಯವಾಗುವುದಿಲ್ಲ. ಮತ್ತು ಬೆಳೆಗಳಿಗೂ ಉತ್ತಮವಾಗಿದೆ.

ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ 12,156 ಲೀ.ನಷ್ಟು ನ್ಯಾನೋ ಯೂರಿಯಾವನ್ನು ಎಲ್ಲ ತಾಲ್ಲೂಕುಗಳಿಗೆ ಇಪ್ಕೊ ಸಂಸ್ಥೆಯಿಂದ ಪೂರೈಸಲಾಗಿದ್ದು, ರೈತರು ಸುರಕ್ಷತಾ ನಿಯಮಗಳನ್ನು ಪಾಲಿಸಿ ಸಿಂಪಡಿಸುವ ಮೂಲಕ ನ್ಯಾನೊ ಯೂರಿಯಾ ರಸಗೊಬ್ಬರದ ಸದುಪಯೋಗ ಪಡಿಸಿಕೊಳ್ಳಲು ಅವರು ಸಲಹೆ ನೀಡಿದ್ದಾರೆ.

ನ್ಯಾನೊ ಯೂರಿಯಾ ಉಪಯೋಗಗಳು :

ನ್ಯಾನೋ ಕಣಗಳು ಅತೀ ಸೂಕ್ಷ್ಮವಾಗಿದ್ದು (20-50 ಟಿm) ಇವುಗಳನ್ನು ಸಸ್ಯವು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ. ಇದು ಪ್ರತಿಶತ 80 ರಷ್ಟು ಬೆಳೆಗೆ ದೊರೆಯುತ್ತದೆ. ಮತ್ತು ನಿಧಾನವಾಗಿ ಸಸ್ಯಗಳಲ್ಲಿ ಬಿಡುಗಡೆ ಹೊಂದುತ್ತದೆ.

ನ್ಯಾನೋ ಯೂರಿಯಾ ಬಳಸುವುದರಿಂದ ಶೇ.50 ರಷ್ಟು ಸಾಂಪ್ರದಾಯಿಕ ಯೂರಿಯಾ ಕಡಿಮೆ ಮಾಡಲು ಸಾಧ್ಯವಿದೆ. ಆಹಾರ ಮತ್ತು ಪರಿಸರಕ್ಕೆ ಸುರಕ್ಷಿತವಾಗಿದೆ. ರೈತರಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವಾಗುತ್ತದೆ. ಮತ್ತು ನ್ಯಾನೋ ಯೂರಿಯಾವನ್ನು ಸುಲಭವಾಗಿ ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡಬಹುದಾಗಿದೆ.

ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ವಿಷಕಾರಿಯಲ್ಲ. ನ್ಯಾನೋ ಯೂರಿಯಾ ಬಳಕೆಯು ಶೇ.8 ರಷ್ಟು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಪ್ರತಿ ಅರ್ದ ಲೀಟರ್‍ಗೆ 225/-ರೂಪಾಯಿ ದರ ಇದೆ ಎಂದು ಅವರು ತಿಳಿಸಿದ್ದಾರೆ.

ಬಳಕೆಯ ವಿಧಾನಗಳು:

ಒಂದು ಲೀಟರ್ ನೀರಿನಲ್ಲಿ 2 ರಿಂದ 4 ಮಿ.ಲೀ ನ್ಯಾನೋ ಯೂರಿಯಾ ದ್ರಾವಣವನ್ನು ಬೆರೆಸಿ ಬೆಳೆಗಳ ಬೆಳವಣಿಗೆ ಹಂತದಲ್ಲಿ ಎಲೆಗಳ ಮೇಲೆ ಸಿಂಪಡಿಸಿ. ಒಂದನೇ ಸಿಂಪಡನೆ- ಬೀಜ ಮೊಳಕೆಯೊಡೆದ 30 ದಿನಗಳ ನಂತರ.

ಎರಡನೇ ಸಿಂಪಡನೆ- 2-3 ವಾರಗಳ ನಂತರ ಅಥವಾ ಹೂ ಬಿಡುವ ಮೊದಲು ಒಂದು ವಾರ ನ್ಯಾನೋ ಯೂರಿಯಾ ರಸಗೊಬ್ಬರವನ್ನು ಮೇಲೂ ಗೊಬ್ಬರವಾಗಿ ಸಿಂಪಡನೆ ಮಾಡಬೇಕು. ಬೆಳೆಯ ಅಗತ್ಯಕ್ಕೆ ಅನುಗುನವಾಗಿ ಸಿಂಪರಣೆಗಳ ಸಂಖ್ಯೆಯನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಸೂಚನೆಗಳು:

ಬಳಕೆಗೆ ಮುನ್ನ ಬಾಟಲ್‍ನ್ನು ಚೆನ್ನಾಗಿ ಅಲುಗಾಡಿಸಿ. ಸಿಂಪರಣೆಗೆ ಪ್ಲ್ಯಾಟ್‍ಕೋನ್ ನಾಜಲ್ ಅಥವಾ ಕಟ್ ನಾಜಲ್ ಬಳಕೆ ಮಾಡಿ, ಬೆಳಿಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಬೆಳೆಗಳಿಗೆ ಸಿಂಪಡಿಸಬೇಕು. ಮತ್ತು ಮಂಜು ಅಥವಾ ಅಧಿಕ ಗಾಳಿ ಇರುವಾಗ ಇದನ್ನು ಸಿಂಪರಣೆ ಮಾಡಬಾರದು.

ಸಿಂಪರಣೆ ಮಾಡಿದ 12 ಗಂಟೆಗಳಲ್ಲಿ ಮಳೆಯಾದಲ್ಲಿ ಮರು ಸಿಂಪರಣೆ ಮಾಡಬೇಕು. ನ್ಯಾನೋ ಯೂರಿಯಾವನ್ನು ಬಯೋ ಸ್ಟಿಮ್ಯುಲಂಟ್, ಪ್ರತಿಶತ 100 ರಷ್ಟು ನೀರಿನಲ್ಲಿ ಕರಗುವ ರಸಗೊಬ್ಬರ ಹಾಗೂ ಕೀಟ ನಾಶಕಗಳ ಜೊತೆ ಮಿಶ್ರಣ ಮಾಡಿ ಸಿಂಪಡಿಸಬಹುದಾಗಿದೆ. ನ್ಯಾನೊ ಯೂರಿಯಾ ದ್ರಾವಣವನ್ನು ಉತ್ಪಾದನೆಯಾದ ಎರಡು ವರ್ಷಗಳ ಒಳಗೆ ಬಳಸುವುದು ಉತ್ತಮವಾಗಿದೆ ಎಂದು ಜಂಟಿನಿರ್ದೇಶಕರು ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮಗಳು:

ನ್ಯಾನೋ ಯೂರಿಯಾವು ಬಳಕೆದಾರನಿಗೆ ಸುರಕ್ಷಿತವಾಗಿದೆ ಆದರೂ ಸಹಿತ ಬಳಕೆ ಸಮಯದಲ್ಲಿ ಕೈ ಮತ್ತು ಮುಖ ಗವಸಗಳನ್ನು ಧರಿಸಲು ಸೂಚಿಸಿದೆ. ಒಣ ಪ್ರದೇಶದಲ್ಲಿ ಶೇಖರಣೆ ಮಾಡಬೇಕು ಹಾಗೂ ಹೆಚ್ಚು ಉಷ್ಣಾಂಶವಿರುವ ಪ್ರದೇಶದಿಂದ ದೂರವಿಡಬೇಕು. ಮಕ್ಕಳು ಮತ್ತು ಸಾಕು ಪ್ರಾಣಿಗಳಿಂದ ಇದನ್ನು ದೂರವಿಡಬೇಕೆಂದು ಜಂಟಿ ಕೃಷಿ ನಿರ್ದೇಶಕ ಡಾ.ಕಿರಣಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Chandrayaan 3: ISRO ಚಂದ್ರಯಾನ ಸಕ್ಸಸ್‌..ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ವಿಕ್ರಂ!

Published On: 24 August 2023, 12:08 PM English Summary: Nano Urea : 1 bottle Nano Urea; Equal to 1 bag of Urea Fertilizer!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.