1. ಸುದ್ದಿಗಳು

ಮುಖೇಶ್‌ ಅಂಬಾನಿ ಜಗತ್ತಿನ ಒಂಬತ್ತನೇ ಶ್ರೀಮಂತ ವ್ಯಕ್ತಿ

mukesh-ambani

ಕೊರೋನಾ ಬಿಕ್ಕಟ್ಟಿನಿಂದಾಗಿ ವಿಶ್ವದ ಅನೇಕ ಅಗ್ರಗಣ್ಯ ಶ್ರೀಮಂತರು ನಷ್ಟದ ಸುಳಿಗೆ ಸಿಲುಕಿರುವ ನಡುವೆಯೇ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಜಗತ್ತಿನ ಶ್ರೀಮಂತ ವ್ಯಕ್ತಿಗಳ ಪೈಕಿ 9ನೇ ಸ್ಥಾನಕ್ಕೇರಿದ್ದಾರೆ.

ಆರ್‌ಐಎಲ್‌ ಷೇರುಗಳ ಬೆಲೆ ಇದೇ ಮೊದಲ ಬಾರಿ 1,800 ರೂ. ತಲುಪಿದ ಹಿನ್ನೆಲೆಯಲ್ಲಿ ಮುಖೇಶ್‌ ಜಗತ್ತಿನ 10 ಶ್ರೀಮಂತರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಕಳೆದ ಎರಡು ತಿಂಗಳಿನಲ್ಲಿ ತಮ್ಮ ಸಂಪತ್ತನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಇದರಿಂದಾಗಿ ವಿಶ್ವದ 10 ಅಗ್ರಗಣ್ಯ ಶ್ರೀಮಂತರ ಪಟ್ಟಿಗೆ ಅವರು ಸೇಪಡೆಯಾಗಿದ್ದಾರೆ ಎಂದು ಬ್ಲೂಮ್​ಗ್ ಬಿಲೇನಿಯರ್ ಸೂಚ್ಯಂಕ ತಿಳಿಸಿದೆ. ಬ್ಲೂಮ್‌ಬರ್ಗ್‌ ಬಿಲೆನಿಯರ್ ಇಂಡೆಕ್ಸ್‌ ಪ್ರಕಾರ ಮುಖೇಶ್‌ ಅಂಬಾನಿ ಅವರು ಪ್ರಸ್ತುತ 4.9 ಲಕ್ಷ ಕೋಟಿ ರೂ.ಗಳ ಒಡೆಯರಾಗಿದ್ದಾರೆ.

ಈ ಮೂಲಕ ಜಗತ್ತಿನ ಶ್ರೀಮಂತ‌ರ ಪಟ್ಟಿಯಲ್ಲಿ ಈವರೆಗೆ 9ನೇ ಸ್ಥಾನದಲ್ಲಿದ್ದ ಒರ್ಯಾಕಲ್‌ ಕಾರ್ಪ್‌ನ ಲ್ಯಾರಿ ಎಲ್ಲಿಸನ್‌ ಅವರನ್ನು ಮುಖೇಶ್‌ ಹಿಂದಿಕ್ಕಿದ್ದಾರೆ.

ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್‌ ನಲ್ಲಿ 1,759 ರೂ. ಇದ್ದ ಆರ್‌ಐಎಲ್‌ ಷೇರುಗಳ ಬೆಲೆ, ಸೋಮವಾರ 1804 ರೂ. ತಲುಪಿತು. ಇದರೊಂದಿಗೆ ಬಿಎಸ್‌ಇಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮಾರುಕಟ್ಟೆ ಬಂಡವಾಳವು 11.22 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

ವಿಶ್ವದ ಟಾಪ್ 10 ಶ್ರೀಮಂತರು

* ಜೆಫ್ ಬಿಜೋಸ್ – 160 ಬಿಲಿಯನ್ ಡಾಲರ್

*ಬಿಲ್ ಗೇಟ್ಸ್ – 120 ಬಿಲಿಯನ್ ಡಾಲರ್

* ಮಾರ್ಕ್ ಜುಕರ್​ಬರ್ಗ್ – 90 ಬಿಲಿಯನ್ ಡಾಲರ್

* ವಾರನ್ ಬಫೆಟ್ – 71 ಬಿಲಿಯನ್ ಡಾಲರ್

* ಸ್ಟೀವ್ ಮರ್ – 70.5 ಬಿಲಿಯನ್ ಡಾಲರ್

* ಸೆರ್ಗೆ ಬಿನ್ – 66.0 ಬಿಲಿಯನ್ ಡಾಲರ್

* ಮುಕೇಶ್ ಅಂಬಾನಿ – 64.5 ಬಿಲಿಯನ್ ಡಾಲರ್

* ಫ್ರಾಂಕೋಯಿಸ್ ಬೆಟನ್​ಕೋರ್ಟ್ ಮೇಯರ್ಸ್ – 62 ಬಿಲಿಯನ್ ಡಾಲರ್

Published On: 23 June 2020, 10:04 AM English Summary: Mukesh Ambani Joins Club of World's 10 Richest People, Takes 9th Spot

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.