1. ಸುದ್ದಿಗಳು

ರೇಷನ್‌ ಪಡೆಯಲು ತ್ರಿವರ್ಣ ಧ್ವಜ ಖರೀದಿ ಕಡ್ಡಾಯ ಆರೋಪ-BJP ಸಂಸದ ವರುಣ ಗಾಂಧಿ ಆಕ್ರೋಶ

Maltesh
Maltesh
MP Varun Gandhi Talking About Buy National Flag To Get Ration

ಆಗಸ್ಟ್‌ 15 ರಂದು ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವದ ಶೀರ್ಷಿಕೆಯಲ್ಲಿ ಈ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಇದಕ್ಕಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಲಕ್ಷ ಲಕ್ಷ ಧ್ವಜಗಳನ್ನು ಸರ್ಕಾರ ಸಿದ್ಧಪಡಿಸಿದೆ.

ಹವಾಮಾನ ವರದಿ: ರಾಜ್ಯದ 8 ಜಿಲ್ಲೆಗಳಲ್ಲಿ ಶನಿವಾರದವರೆಗೆ ಭಾರೀ ಮಳೆ ಮುನ್ಸೂಚನೆ

ಹೀಗಿರುವಾಗ ಹರಿಯಾಣ ರಾಜ್ಯದಲ್ಲಿ ರಾಷ್ಟ್ರಧ್ವಜ ಖರೀದಿಸಿದರೆ ಮಾತ್ರ ಪಡಿತರ ಸಾಮಗ್ರಿ ನೀಡಲಾಗುವುದು ಎಂಬ ದೂರು ಕೇಳಿಬಂದಿದೆ. ಹೌದು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತಮ್ಮ ಟ್ವಿಟರ್ ಪೇಜ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿ ಕರ್ನಾಲ್ ಜಿಲ್ಲೆಯ ಹೆಮ್ತಾ ಗ್ರಾಮದ ಪಡಿತರ ಅಂಗಡಿಯೊಂದರ ಗ್ರಾಹಕರು 20 ರೂಪಾಯಿಗೆ ರಾಷ್ಟ್ರಧ್ವಜ ಖರೀದಿಸಿದರೆ ಮಾತ್ರ ಪಡಿತರ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಡವರ ಅನ್ನ ಕಸಿದುಕೊಂಡು ರಾಷ್ಟ್ರಧ್ವಜ ಮಾರಬೇಕಾ ಎಂದು ವರುಣ್ ಗಾಂಧಿ ಪ್ರಶ್ನಿಸಿದ್ದಾರೆ. ಆ ನಂತರ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸಲಾಗುತ್ತದೆ ಎಂದು  ಜಿಲ್ಲಾಡಳಿತಕ್ಕೆ ದೂರು ನೀಡಲಾಗಿತ್ತು. ಅದನ್ನು ಆಧರಿಸಿ ಅಂಗಡಿಯ ಪಡಿತರ ವಿತರಣಾ ಪರವಾನಗಿಯನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ.

ಈ ಕುರಿತು ಮಾತನಾಡಿದ ಪಡಿತರ ಸಾಮಗ್ರಿ ವಿತರಕರು, ಸರ್ಕಾರದ ಆದೇಶದಂತೆ ರಾಷ್ಟ್ರಧ್ವಜ ಮಾರಾಟ ಮಾಡಿದ್ದೇವೆ. ಆದರೆ ಹರಿಯಾಣ ಸರ್ಕಾರ ಇದನ್ನು ಅಲ್ಲಗಳೆದಿದ್ದು, ಜನರು ಬಯಸಿದಲ್ಲಿ ಮಾತ್ರ ರಾಷ್ಟ್ರಧ್ವಜವನ್ನು ಮಾರಾಟ ಮಾಡಬೇಕು ಎಂದು ವಿವರಿಸಿದೆ.

ಈ ವರ್ಷ ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ಸರ್ಕಾರದ ಭವ್ಯ ಯೋಜನೆಗಳ ನಡುವೆ ಬಿಜೆಪಿ ಸಂಸದರ ಹೇಳಿಕೆಗಳು ಬಂದಿವೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ 'ಹರ್ ಘರ್ ತಿರಂಗ' ಅಭಿಯಾನವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ DP ಗಳಲ್ಲಿ "ತಿರಂಗಾ" (ರಾಷ್ಟ್ರಧ್ವಜ) ವನ್ನು ಜೋಡಿಸಲು ತಿಳಿಸಿದ್ದರು. ಅದರಂತೆ ಎಲ್ಲ ದೇಶದ ನಾಗರಿಕರಲ್ಲೂ ಮನವಿ ಮಾಡಿದ್ದರು.

ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಗುರುತಿಸುತ್ತಿರುವ ಈ ಸಮಯದಲ್ಲಿ, ನಮ್ಮ ತ್ರಿವರ್ಣ ಧ್ವಜವನ್ನು ಆಚರಿಸುವ ಸಾಮೂಹಿಕ ಆಂದೋಲನವಾದ #HarGharTiranga ಗೆ ನಮ್ಮ ರಾಷ್ಟ್ರವು ಸಿದ್ಧವಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ DP ಅನ್ನು ಬದಲಾಯಿಸಿದ್ದೇನೆ ಮತ್ತು ಒತ್ತಾಯಿಸುತ್ತೇನೆ. ನೀವೆಲ್ಲರೂ ಅದೇ ರೀತಿ ಮಾಡಿ" ಎಂದು ಅವರು ಈ ತಿಂಗಳ ಆರಂಭದಲ್ಲಿ ಟ್ವೀಟ್ ಮಾಡಿದ್ದರು.

Published On: 11 August 2022, 03:06 PM English Summary: MP Varun Gandhi Talking About Buy National Flag To Get Ration

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.