1. ಸುದ್ದಿಗಳು

ಹೊಲದಲ್ಲಿ 6.47 ಕ್ಯಾರಟ್ ವಜ್ರ ಪತ್ತೆ- ಖುಲಾಯಿಸಿದ ರೈತನ ಅದೃಷ್ಟ

diamond

ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತನಿಗೆ ಎರಡು ವರ್ಷಗಳಲ್ಲಿ ಆರನೇ ಬಾರಿ ಅದೃಷ್ಟ ಖುಲಾಯಿಸಿದೆ. ಸರ್ಕಾರದಿಂದ ಲೀಸ್ ಮೇಲೆ ಪಡೆದ ಜಮೀನಿನಲ್ಲಿ ಗಣಿಗಾರಿಕೆ ವೇಳೆ ಉತ್ಕೃಷ್ಟ ದರ್ಜೆಯ 6.47 ಕ್ಯಾರೇಟ್ ತೂಗುವ ವಜ್ರ ದೊರೆತಿದೆ. ಹೌದು ಸರ್ಕಾರದಿಂದ ಲೀಸ್ ಗೆ ಪಡೆದಿದ್ದ ಭೂಮಿಯಲ್ಲಿ ಗಣಿಗಾರಿಕೆ ನಡೆಸುವಾಗ ರೈತನೋರ್ವನಿಗೆ ಬರೊಬ್ಬರಿ 6.47 ಕ್ಯಾರಟ್ ಗಾತ್ರದ ವಜ್ರ ಪತ್ತೆಯಾಗಿದೆ.

 ಇದೀಗ ಈ ವಜ್ರ ದೊರೆತಿರುವ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.  ರೈತ ಪ್ರಕಾಶ ಮಜುಂದಾರ್‌ ಅವರಿಗೆ ಜಿಲ್ಲೆಯ ಜಾರುಪುರ್‌ ಗ್ರಾಮದ ಗಣಿಯಲ್ಲಿ ಶುಕ್ರವಾರ ಈ ಅತ್ಯುತ್ತಮ ದರ್ಜೆಯ ವಜ್ರ ದೊರೆತಿದೆ ಎಂದು ಈ ಭಾಗದ ವಜ್ರ ಗಣಿಗಾರಿಕೆ ಉಸ್ತುವಾರಿ ಅಧಿಕಾರಿಯಾಗಿರುವ ನೂತನ್‌ ಜೈನ್ ತಿಳಿಸಿದ್ದಾರೆ.

ಅಲ್ಲದೆ ಮುಂಬರುವ ಹರಾಜಿನಲ್ಲಿ ಈ ವಜ್ರವನ್ನು ಮಾರಾಟಕ್ಕಿಡಲಾಗುವುದು. ಅಲ್ಲಿ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಅನ್ವಯ ಇದರ ಬೆಲೆ ನಿರ್ಧಾರವಾಗಲಿದೆ. ತೆರಿಗೆ ಮತ್ತು ಸರ್ಕಾರದ ರಾಜಧನ ಪ್ರಮಾಣವನ್ನು ಕಡಿತ ಮಾಡಿ ಬಾಕಿ ಹಣವನ್ನು ರೈತನಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಖಾಸಗಿ ಮಾರುಕಟ್ಟೆ  ಲೆಕ್ಕಾಚಾರದ ಪ್ರಕಾರ 6.47 ಕ್ಯಾರಟ್‌ ವಜ್ರಕ್ಕೆ ಹರಾಜಿನಲ್ಲಿ ಸುಮಾರು 30, ಲಕ್ಷ  ರೂ ಸಿಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಕಳೆದ ವರ್ಷ ತಮಗೆ ಗಣಿಗಾರಿಕೆಯಿಂದ 7.44 ಕ್ಯಾರೇಟ್ ವಜ್ರ ದೊರಕಿತ್ತು. ಇದರ ಜೊತೆಗೆ 2 ರಿಂದ 2.5 ಕ್ಯಾರಟ್ ತೂಕದ ವಜ್ರಗಳು ದೊರೆತಿವೆ ಎಂದು ರೈತ ಸಂಭ್ರಮದಿಂದ ಹೇಳಿದ್ದಾರೆ. ಇನ್ನು ರೈತ ಮಜುಂದಾರ್ ವಜದ್ರ ಸಿಕ್ಕಿರುವುದು ಇದೇ ಮೊದಲೇನಲ್ಲ.. ಕಳೆದ 2 ವರ್ಷಗಳಲ್ಲಿ 6 ಬಾರಿ ವಜ್ರ ದೊರೆತಿದೆ. ಸರ್ಕಾರದಿಂದ ಲೀಸ್‌ ಮೇಲೆ ಪಡೆದ ಜಮೀನಿನಲ್ಲಿ ಗಣಿಗಾರಿಕೆ ವೇಳೆ ಉತ್ಕೃಷ್ಟ ದರ್ಜೆಯ 6.47 ಕ್ಯಾರಟ್‌ ತೂಗುವ ವಜ್ರ ದೊರೆತಿದೆ.

ಇನ್ನು ವಜ್ರ ದೊರೆತ ಕುರಿತು ಸಂತಸ ಹಂಚಿಕೊಂಡಿರುವ ರೈತ ಮಜುಂದಾರ್, 'ಹರಾಜಿನಿಂದ ಬರುವ ಹಣದ ಪಾಲನ್ನು, ಗಣಿಗಾರಿಕೆಯಲ್ಲಿ ತೊಡಗಿದ ಇತರ ನಾಲ್ಕು ಮಂದಿ ಪಾಲುದಾರರ ಜೊತೆ ಹಂಚಿಕೊಳ್ಳುತ್ತೇನೆ. ನಾವು ಐದು ಮಂದಿ ಪಾಲುದಾರರಿದ್ದೇವೆ. 6.47 ಕ್ಯಾರಟ್‌ ತೂಗುವ ಈ ವಜ್ರವನ್ನು ಸರ್ಕಾರದ ವಜ್ರ ಖಜಾನೆಯಲ್ಲಿ ಭದ್ರವಾಗಿಡಲಾಗಿದೆ.  ಕಳೆದ ವರ್ಷ ತಮಗೆ ಗಣಿಯಿಂದ 7.44 ಕ್ಯಾರಟ್‌ ವಜ್ರ ದೊರೆತಿತ್ತು. ಇದರ ಜೊತೆಗೆ 2 ರಿಂದ 2.5 ಕ್ಯಾರಟ್‌ ತೂಕದ ವಜ್ರಗಳೂ ದೊರೆತಿವೆ ಎಂದು ಹೇಳಿದ್ದಾರೆ.

ಪನ್ನಾದಲ್ಲಿ ವಜ್ರದ ಸಂಪತ್ತು ಹೇರಳವಾಗಿದ್ದು, ಸರ್ಕಾರ ಸಣ್ಣ ಜಮೀನುಗಳನ್ನು ಭೋಗ್ಯದ ಮೇಲೆ ರೈತರಿಗೆ ನೀಡುತ್ತದೆ. ಅವರಿಗೆ ಗಣಿಗಾರಿಕೆ ವೇಳೆ ಸಿಗುವ ವಜ್ರವನ್ನು ಜಿಲ್ಲಾ ಗಣಿಗಾರಿಕೆ ಕಚೇರಿಯಲ್ಲಿ ಠೇವಣಿಯಾಗಿಡಲು ಅವಕಾಶವಿದೆ.

Published On: 28 August 2021, 09:00 PM English Summary: MP farmer’s luck brightens as he mines 647 carat diamond

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.