1. ಸುದ್ದಿಗಳು

#ಮಾನ್ಸೂನ್ 2020- ಕೃಷಿ ಜಾಗರಣದ ಹಲೋಆ್ಯಪ್ ಪ್ಲಾಟ್ ಫಾರ್ಮ್ ನೊಂದಿಗೆ ಸೇರಿ ಮಾನ್ಸೂನ್ ಹಾಗೂ ವ್ಯವಸಾಯಕ್ಕೆ ಸಂಬಂದಿಸಿದ ಸಂಪೂರ್ಣ ಮಾಹಿತಿ ಪಡೆಯಿರಿ

ದೇಶದಲ್ಲಿ ಒಂದೆಡೆ ಕೊರೋನಾ ತೀವ್ರ ಆತಂಕ ಸೃಷ್ಟಿಸಿದೆ. ಮತ್ತೊಂದೆಡೆ ಗಾಯದ ಮೇಲೆ ಬರೆಯೆಳೆದಂತೆ ಚಂಡಮಾರುತ, ಆರ್ಥಿಕ ಸಂಕಷ್ಟದಿಂದ ಭಾರತ  ತತ್ತರಿಸಿ ಹೋಗಿದೆ.  ಇವುಗಳ ಜೊತೆಯಲ್ಲಿ ಭಾರತದ ಉತ್ತರ ಭಾಗದ ಕೆಲವು ರಾಜ್ಯಗಳಲ್ಲಿ ಮಿಡತೆಗಳ ದಾಳಿಯಿಂದ ರೈತರು ಭೀಕರತೆಯನ್ನು ಎದುರಿಸುತ್ತಿದ್ದಾರೆ.

#Monsoon 2020ಇದರೊಂದಿಗೆ ಬದಲಾಗುತ್ತಿರುವ ವಾತಾವರಣದಿಂದಾಗಿ ದಿನದಿಂದ ದಿನಕ್ಕೆ  ಕೊರೋನಾ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಇಂತಹ ಕಠಿಣ ಸಮಯದಲ್ಲಿಯೂ ಸಹ ನಮ್ಮ ದೇಶದ ಬೆನ್ನಲಬು ಎನಿಸಿಕೊಂಡಿರುವ ರೈತರು ಹಗಲು ರಾತ್ರಿಯೆನ್ನದೆ ಎಡೆಬಿಡದೆ ಶ್ರಮವಹಿಸಿ ದೇಶಕ್ಕಾಗಿ ಆಹಾರ ಬೆಳೆಯುತ್ತಾರೆ.

ರೈತರ ಬದುಕಿಗೆ  ಮಾನ್ಸೂನ್ ಬಹಳ ಮಹತ್ವವಾದದ್ದು. ಮಾನ್ಸೂನ್ ಉತ್ತಮವಾಗಿದ್ದರೆ ಮಾತ್ರ ರೈತರು ನೆಮ್ಮದಿಯಾಗಿ ಬದುಕಲು ಸಾಧ್ಯ. ಉತ್ತಮ ಮಳಯಾದರೆ  ನದಿ, ಕೆರೆಕಟ್ಟೆ, ಜಲಾಶಯ, ಬಾವಿಗಳು ತುಂಬುತ್ತವೆ. ಅಂತರ್ಜಲಮಟ್ಟ ಹೆಚ್ಚಾಾಗುತ್ತದೆ.  ಮಾನ್ಸೂ ನ್ ಅತ್ಯಂತ ನಿರ್ಣಾಯಕ ಅವಧಿಯಾಗಿದೆ. ಇದು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಸಾಗುತ್ತದೆ.

ಕೃಷಿ ಜಾಗರಣ ಹಾಗೂ ಹಲೋ ಆ್ಯಪ್  ಸೇರಿ ಮಳೆಗಾಲ- 2020 ಅಭಿಯಾನವನ್ನು ಪ್ರಾರಂಭಿಸಿದ್ದು, ಈ ಅಭಿಯಾನದಡಿ ರೈತರ ಕೃಷಿ ಸಂಬಂಧಿತ ಚಟುವಟಿಕೆಗಳ ವೀಡಿಯೊಗಳು ಮತ್ತು ಫೋಟೋಗಳನ್ನು ಪೋಸ್ಟ್ ಮಾಡಲು ಪ್ರೋತ್ಸಾಹಿಸುತ್ತದೆ. ರೈತರಿಗೆ ಉಪಯೋಗವಾಗುವ ಸರ್ಕಾರದ ಯೋಜನೆಗಳು, ರೈತರ ಎದುರಿಸುವ ಸಮಸ್ಯೆಗಳನ್ನು ಸರ್ಕಾದ ಗಮನಕ್ಕೆ ತರುವುದು, ಕೃಷಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವುದು, ಪ್ರಗತಿಪರ ರೈತರ ಸಂದರ್ಶನದೊಂದಿಗೆ ದೇಶದ ಮೂಲೆ ಮೂಲೆಯಲ್ಲಿರವ ರೈತರಿಗೆ ಅವರು ಅನುಸರಿಸಿದ ಕೃಷಿ ಪದ್ದತಿ, ಕೃಷಿಯಲ್ಲಿ ಆಧುನಿಕ ಪದ್ಧತಿಯನ್ನು ಅನುಸರಿಸಿ ಕೃಷಿಯಲ್ಲಿ ತಂದ ಬದಲಾವಣೆ, ಕೃಷಿ ಪರಿಣತರ ಸಲಹೆ, ಕೃಷಿಗೆ ಬೆಂಬಲ ಮತ್ತು ಸಲಹೆಗಳನ್ನು ನೀಡುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

Published On: 08 June 2020, 03:16 PM English Summary: Monsoon 2020- Get complete information on monsoon and agriculture along with Krishi Jagran and helo app platform

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.