1. ಸುದ್ದಿಗಳು

MCD ಚುನಾವಣೆ: ಟಿಕೆಟ್ ಕೊಡಲಿಲ್ಲ ಎಂದು ವಿದ್ಯುತ್‌ ಕಂಬ ಏರಿದ ಪಾಲಿಕೆಯ ಮಾಜಿ ಸದಸ್ಯ!

Hitesh
Hitesh
MCD Election: Former member of the corporation climbed the electric pole for not giving the ticket!

ದೆಹಲಿ ಮಹಾನಗರ ಪಾಲಿಕೆ (MCD) ಚುನಾವಣೆಗೆ ಇನ್ನು ಕೆಲವೇ ದಿನಗಳಿರುವಂತೆ ಹಲವು ಹೈಡ್ರಾಮಗಳಿಗೆ ದೆಹಲಿ ಸಾಕ್ಷಿಯಾಗಿದೆ.

ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ!

ದೆಹಲಿ ಮಹಾನಗರ ಪಾಲಿಕೆ (MCD) ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನಿರಾಕರಿಸಲಾಗಿದೆ ಎಂದು ಆರೋಪಿಸಿ, ಆಮ್ ಆದ್ಮಿ ಪಕ್ಷದ (AAP) ದೆಹಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಟವರ್‌ ಏರಿದ ಘಟನೆ ಭಾನುವಾರ ನಡೆದಿದೆ.  

ಎಎಪಿ ಸದಸ್ಯ ಹಾಗೂ ಪಾಲಿಕೆಯ ಮಾಜಿ ಸದಸ್ಯ ಹಸೀಬ್ ಉಲ್ ಹಸನ್ ಅವರಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಯು ಟಿಕೆಟ್ ನಿರಾಕರಿಸಿದೆ.

ಪಿ.ಎಂ ಜನೌಷಧಿ ಯೋಜನೆ: ಕರ್ನಾಟಕ ದೇಶದಲ್ಲೇ ದ್ವಿತೀಯ!

ಇದರಿಂದ ಅಸಮಾಧಾನಗೊಂಡಿರುವ ಹಸೀಬ್, ದೆಹಲಿಯ ಶಾಸ್ತ್ರಿ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿಯ ವಿದ್ಯುತ್ ಟ್ರಾನ್ಸ್‌ಮಿಷನ್ ಟವರ್ ಮೇಲತ್ತಿ ಪ್ರತಿಭಟಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹಸೀಬ್ ಅವರನ್ನು ಮನವೊಲಿಸಿ ಟವರ್‌ ಮೇಲಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ!

Shah Rukh Khan: ಬಾಲಿವುಡ್‌ “ಬಾದ್‌ ಶಾ” ಶಾರುಕ್‌ಗೆ ದಂಡ! 

ಡಿಸೆಂಬರ್ 4ರಂದು ನಡೆಯಲಿರುವ ಎಂಸಿಡಿ ಚುನಾವಣೆಗೆ ಶನಿವಾರ ಅಭ್ಯರ್ಥಿಗಳ ಕೊನೆಯ ಪಟ್ಟಿಯನ್ನು ಎಎಪಿ ಬಿಡುಗಡೆ ಮಾಡಲಾಗಿದೆ.

ಆದರೆ, ಅಂತಿಮ ಸ್ಪರ್ಧಿಗಳ ಪಟ್ಟಿಯಲ್ಲಿ ಹಸೀಬ್‌ ಉಲ್‌ ಹಸನ್‌ ಅವರ ಹೆಸರು ಇರಲಿಲ್ಲ. ಹೀಗಾಗಿ, ಅವರು ಎಎಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ, ಎಷ್ಟಿದೆ ಮಾರುಕಟ್ಟೆಯಲ್ಲಿ ಚಿನ್ನದ ದರ ?  

AAP

ಎಎಪಿಯಿಂದ ಟಿಕೆಟ್‌ಗಾಗಿ ಹಣ: ಆರೋಪ

ಎಎಪಿಯು ಚುನಾವಣೆಯಲ್ಲಿ ಟಿಕೆಟ್‌ ನೀಡುವುದಕ್ಕೆ ಹಣ ಪಡೆಯುತ್ತಿದೆ ಎಂದು ದೆಹಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಹಸೀಬ್‌ ಅವರು ಆರೋಪಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಹಸೀಬ್‌ ಅವರು, ದೀಪು ಚೌಧರಿಗೆ 3 ಕೋಟಿ ರೂಪಾಯಿಗೆ ಟಿಕೆಟ್ ಮಾರಿಕೊಂಡಿದ್ದಾರೆ.

ನನ್ನ ಬಳಿಯೂ ಅಷ್ಟು ಹಣ ಕೇಳಿದ್ದರು. ಆದರೆ, ನನ್ನ ಬಳಿ ಅಷ್ಟೊಂದು ಪ್ರಮಾಣದಲ್ಲಿ ದುಡ್ಡು ಇರಲಿಲ್ಲ. ನಾನು ಉತ್ತಮ ಕೆಲಸ ಮಾಡಿದ್ದೇನೆ.

ಆದರೂ ನನಗೆ ಟಿಕೆಟ್‌ ಸಿಕ್ಕಿಲ್ಲ. ಇಲ್ಲಿ ನಾವು ಮಾಡಿದ ಕೆಲಸಕ್ಕೆ ಬೆಲೆಯೇ ಇಲ್ಲ.. ಕೇವಲ ಹಣಕ್ಕೆ ಮಾತ್ರ ಬೆಲೆ ಎಂದು ಅವರು ದೂರಿದ್ದಾರೆ.   

Published On: 13 November 2022, 04:15 PM English Summary: MCD Election: Former member of the corporation climbed the electric pole for not giving the ticket!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.