1. ಸುದ್ದಿಗಳು

“ಆಹಾರ ಸುರಕ್ಷತೆ ಮತ್ತು ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳುವ” ಕುರಿತು Flipkart ನಿಂದ 10000 ರೈತರಿಗೆ ತರಬೇತಿ…

Kalmesh T
Kalmesh T
“Maintaining food safety and quality of products

ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಆಹಾರ ಸುರಕ್ಷತೆ ಮತ್ತು ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆ ದೇಶದ 10,000 ಕ್ಕೂ ಅಧಿಕ ರೈತರಿಗೆ ತರಬೇತಿ ನೀಡಿದೆ.

ಇದನ್ನೂ ಓದಿರಿ: ನಬಾರ್ಡ್‌ನಲ್ಲಿ ನೇಮಕಾತಿ; ತಿಂಗಳಿಗೆ 4.5 ಲಕ್ಷ ಸಂಬಳ..! ಅರ್ಜಿ ಸಲ್ಲಿಕೆಗೆ ಜೂನ್‌ 30 ಕೊನೆ ದಿನ..

Monsoon: ಜೂನ್‌ 19ರ ಒಳಗೆ ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷೆ! ಹವಾಮಾನ ಇಲಾಖೆ ಸೂಚನೆಯಲ್ಲಿ ಯಾವ ಯಾವ ಜಿಲ್ಲೆಗಳಿವೆ ಗೊತ್ತೆ?

ರೈತರು ತಮ್ಮ ಬೆಳವಣಿಗೆಗೆ ಮತ್ತು ರಾಷ್ಟ್ರೀಯ ಮಾರುಕಟ್ಟೆ ಜಾಲವನ್ನು ಹೊಂದುವ ಬಗೆ ಹೇಗೆಂಬುದರ ಬಗ್ಗೆಯೂ ತರಬೇತಿ ನೀಡಿರುವ ಫ್ಲಿಪ್ ಕಾರ್ಟ್ ಈ ಮೂಲಕ ರೈತರಿಗೆ ಸಾಮರ್ಥ್ಯ ಬೆಳೆಸಿಕೊಳ್ಳುವ ರೀತಿಯನ್ನು ಹೇಳಿಕೊಟ್ಟಿದೆ.

ರೈತರಿಗೆ ಡಿಜಿಟಲ್ ವ್ಯವಹಾರದ ಬಗ್ಗೆ ಹೇಳಿಕೊಡುವ ನಿಟ್ಟಿನಲ್ಲಿ ಹಲವಾರು ಕೃಷಿ ಉತ್ಪನ್ನ ಉತ್ಪಾದಕ ಸಂಸ್ಥೆ(ಎಫ್ ಪಿಒಗಳು)ಗಳೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ.

ಎಫ್ ಪಿಒಗಳು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಪಾಲಿಸಲು ನೆರವಾಗಲೆಂದು ಎಫ್ ಪಿಒಗಳು, ಸಣ್ಣ ಮತ್ತು ಅತಿ ಸಣ್ಣ ರೈತರ ಉತ್ಪಾದನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ

ತರಬೇತಿ ಮತ್ತು ಶಿಕ್ಷಣವು ಗುಣಮಟ್ಟದ ಉತ್ಪನ್ನದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಕಚ್ಚಾ ವಸ್ತುಗಳ ಪೂರೈಕೆ, ಮರು ಪ್ಯಾಕೇಜಿಂಗ್ ಕೇಂದ್ರಗಳು, ಗುಣಮಟ್ಟದ ಉತ್ಪನ್ನಗಳ ಪರಿಶೀಲನೆ, ಖರೀದಿ ತಂತ್ರ, ಖರೀದಿ ಆರ್ಡರ್, ಪಾವತಿ ನಿಯಮಗಳು ಮತ್ತು ಷರತ್ತುಗಳು ಹಾಗೂ ಲಾಜಿಸ್ಟಿಕ್ ಗಳು ಒಳಗೊಂಡಿವೆ.
ಈ ಎಲ್ಲಾ ಅಂಶಗಳ ಬಗ್ಗೆ ರೈತರಿಗೆ ವರ್ಚುವಲ್ ಮತ್ತು ಆನ್ ಗ್ರೌಂಡ್ ತರಬೇತಿಯನ್ನು ನೀಡಲಾಗಿದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಕೇರಳ, ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರ ಪ್ರದೇಶಗಳ ಎಫ್ ಪಿಒಗಳು, ಸಣ್ಣ ಮತ್ತು ಅತಿ ಸಣ್ಣ ರೈತ ಸಮುದಾಯಗಳೊಂದಿಗೆ ಸಹಭಾಗಿತ್ವ ಮಾಡಿಕೊಳ್ಳುವ ಮೂಲಕ ಫ್ಲಿಪ್ ಕಾರ್ಟ್ ಈ ತರಬೇತಿಯನ್ನು ನೀಡುತ್ತಿದೆ.

7th Pay : ಸಂಬಳದ ಹೊರತಾಗಿಯೂ ನೌಕರರಿಗೆ ದೊರೆಯಲಿದೆ ಲಾಭ! ಏನಿದು ಗೊತ್ತೆ!

EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!

ಪಾಲುದಾರಿಕೆಗಳ ಮೂಲಕ ಫ್ಲಿಪ್ ಕಾರ್ಟ್ ಧಾನ್ಯಗಳು, ಮಿಲ್ಲೆಟ್ಸ್ ಮತ್ತು ಸಂಪೂರ್ಣ ಸಾಂಬಾರ ಪದಾರ್ಥಗಳನ್ನು ತನ್ನ ಪ್ಲಾಟ್ ಫಾರ್ಮ್ ಗೆ ತರುವ ಮೂಲಕ ರೈತ ಸಮುದಾಯದ ಸಾವಿರಾರು ಕುಟುಂಬಗಳ ಜೀವನೋಪಾಯ ಮಟ್ಟವನ್ನು ಸುಧಾರಣೆ ಮಾಡುತ್ತಿದೆ.

Published On: 18 June 2022, 12:29 PM English Summary: “Maintaining food safety and quality of products

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.