1. ಸುದ್ದಿಗಳು

LPG : ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ..ಹೊಸ ವರ್ಷಕ್ಕೆ ಸರ್ಕಾರದಿಂದ ಗಿಫ್ಟ್‌..?

Maltesh
Maltesh
LPG: There is a possibility of a huge reduction in the price of the cylinder.

ದುಬಾರಿ LPG ಸಿಲಿಂಡರ್‌ಗಳ ಭಾರವನ್ನು ಎದುರಿಸುತ್ತಿರುವ ಜನರು ಹೊಸ ವರ್ಷದಲ್ಲಿ ದೊಡ್ಡ ಪರಿಹಾರವನ್ನು ಪಡೆಯಬಹುದು. ಈ ವರ್ಷದ ಜುಲೈನಿಂದ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 30 ರಷ್ಟು ಕಡಿಮೆಯಾಗಿದೆ. 

ಅಂದಿನಿಂದ ಭಾರತದಲ್ಲಿ LPG ಸಿಲಿಂಡರ್ ಬೆಲೆ 1056 ರೂ. ಇಂತಹ ಸಂದರ್ಭದಲ್ಲಿ, ಹೊಸ ವರ್ಷದ ಆರಂಭದಲ್ಲಿ ಗ್ಯಾಸ್‌ ಸಿಲಿಂಡರ್‌  ಬೆಲೆಯಲ್ಲಿ ಸರ್ಕಾರವು ದೊಡ್ಡ ವಿನಾಯಿತಿಯನ್ನು ಘೋಷಿಸಬಹುದು ಎಂದು ಹೇಳಲಾಗುತ್ತಿದೆ. ಇದರಿಂದ ಹೊಸ ವರ್ಷದ ಶುರುವಿನಲ್ಲಿ ಜನರಿಗೆ ತುಂಬಾ ರೀಲ್ಯಾಕ್ಸ್‌ ಆಗಲಿದೆ

ಒಮಿಕ್ರೋನ್ ಅಬ್ಬರ..ಚೀನಾದಲ್ಲಿ ಒಂದೇ ದಿನದಲ್ಲಿ 3.7 ಕೋಟಿ ಜನರಿಗೆ ಸೋಂಕು ದೃಢ

ಹೌದು ಇತ್ತೀಚಿಗೆ  ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಕೇವಲ 500ರೂಪಾಯಿಗೆ ನೀಡುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಘೋಷಿಸಿದ್ದಾರೆ. 500ರೂಪಾಯಿ ಮೊತ್ತದಲ್ಲಿ ಒಟ್ಟು 12 ಸಿಲಿಂಡರ್‌ಗಳನ್ನು ಜನರಿಗೆ ನೀಡಲಾಗುವುದು.

ಇದೀಗ ಒಂದು ಸಿಲಿಂಡರ್‌ನ ದರ 1050 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಗ್ಯಾಸ್‌ ಸಿಲಿಂಡರ್ ಅನ್ನು ಕೇವಲ 500ಕ್ಕೆ ನೀಡಲಿದ್ದೇವೆ ಎಂದು ಗೇಹಲೋತ್‌ ಘೋಷಿಸಿದ್ದರು. ಇದು ಮುಂದಿನ ವರ್ಷದಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂತಹ ಘೋಷಣೆಯನ್ನು ಮಾಡಿದ್ದಾರೆ ಎಂದು ಚರ್ಚೆಗಳು ನಡೆಯುತ್ತಿವೆ. ಇತ್ತ ಅವರು ಘೋಷಣೆ ಮಾಡಿದ ನಂತರ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ.

ಅಕ್ಟೋಬರ್ 2022 ರಲ್ಲಿ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ $86 ಆಗಿತ್ತು. ಆ ಸಂದರ್ಭದಲ್ಲಿ, ದೇಶದಲ್ಲಿ  LPG ಸಿಲಿಂಡರ್ ರೂ.899 ಕ್ಕೆ ಸಿಗುತ್ತಿತ್ತು.. ಅಂದಿನಿಂದ ಇಲ್ಲಿಯವರೆಗೆ ಸರ್ಕಾರ ಈ ಬೆಲೆಯನ್ನು ಸುಮಾರು 150 ರೂಪಾಯಿಗಳಷ್ಟು ಹೆಚ್ಚಿಸಿದೆ.

Swiggy: ಸ್ವಿಗ್ಗಿಯಲ್ಲಿ ₹ 16 ಲಕ್ಷ ಮೌಲ್ಯದ ದಿನಸಿ ಆರ್ಡರ್ ಮಾಡಿದ ವ್ಯಕ್ತಿ..!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಈಗ ಪ್ರತಿ ಬ್ಯಾರೆಲ್‌ಗೆ 83 ಡಾಲರ್‌ಗೆ ಇಳಿದಿದೆ. ಅಂದರೆ, ಅಕ್ಟೋಬರ್ 2021 ರಿಂದಲೂ ತೈಲ ಬೆಲೆ ಕಡಿಮೆಯಾಗಿದೆ. ಅದರಂತೆ, ಹೊಸ ವರ್ಷದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ 150 ರೂ.ವರೆಗೆ ಕಡಿತವನ್ನು ಸರ್ಕಾರ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Published On: 23 December 2022, 10:09 AM English Summary: LPG: There is a possibility of a huge reduction in the price of the cylinder.

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.