1. ಸುದ್ದಿಗಳು

ಇಂದಿನಿಂದ ಎಲ್‌ಪಿಜಿ ಸಿಲಿಂಡರ್‌ ಹೊಮ್‌ ಡೆಲಿವರಿಗೆ ಒಟಿಪಿ ಕಡ್ಡಾಯ

ಇಂದಿನಿಂದ ಎಲ್.ಪಿ.ಜಿ ಗ್ರಾಹಕರು ಒಟಿಪಿ (one time password) ನೀಡಿದರೆ ಮಾತ್ರ ಸಿಲಿಂಡರ್ ಪಡೆಯಲು ಸಾಧ್ಯ. ಎಲ್ಪಿಜಿ ಸಿಲೆಂಡರ್ ಪಡೆಯಬೇಕೇದಾರೆ ಓಟಿಪಿ ನೀಡಲೇಬೇಕಾಗುತ್ತದೆ. ಅಡುಗೆ ಅನಿಲ ಸಿಲಿಂಡರ್‌ ಮನೆ ಬಾಗಿಲಿಗೆ ಸರಬರಾಜಾಗುವ ಸಂದರ್ಭ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ನೀಡಬೇಕಾದ ಹೊಸ ವ್ಯವಸ್ಥೆ ನವೆಂಬರ್ 1 ರಿಂದ ಜಾರಿಗೆ ಬರಲಿದೆ.

ಈಗ ನಿಮಗೆ ಸಿಲೆಂಡರ್ ಬೇಕಾದರೆ ಓಟಿಪಿ ನೀಡವುದು ಕಡ್ಡಾಯವಾಗಲಿದೆ. ಅಡುಗೆ ಅನಿಲ ಕಳ್ಳತನ ತಪ್ಪಿಸುವ ಮತ್ತು ಸರಿಯಾದ ಗ್ರಾಹಕನನ್ನು ಗುರುತಿಸುವ ಉದ್ದೇಶದಿಂದ ತೈಲ ಕಂಪೆನಿಗಳು “ಪೂರೈಕೆ ದೃಢೀಕರಣ ಕೋಡ್‌’ (ಡಿಎಸಿ) ಎಂಬ ಹೊಸ ವ್ಯವಸ್ಥೆ ಜಾರಿಗೆ ತಂದಿದೆ..

ಈ ಮೊದಲೇ ತೈಲ ಕಂಪನಿಗಳು ಎಲ್‌ಪಿಜಿ ಹೋಂ ಡೆಲಿವರಿ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತಿರುವುದಾಗಿ ತಿಳಿಸಿದ್ದವು. ಅದರಂತೆ, ನ.1ರಿಂದ ಹೊಸ ವ್ಯವಸ್ಥೆ ಜಾರಿಯಾಗುತ್ತಿದ್ದು, ಗ್ರಾಹಕರು ಸಿಲಿಂಡರ್‌ ಪಡೆಯಲು ಹೊಸ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ತೈಲ ಕಂಪನಿಗಳು ಮೊದಲು 100 ಸ್ಮಾರ್ಟ್ ಸಿಟಿಗಳಲ್ಲಿ ಈ ಹೊಸ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಿವೆ. ಇದನ್ನು ಪ್ರಾಯೋಗಿಕ ಯೋಜನೆಯಾಗಿ ಮಾಡಲಾಗುತ್ತದೆ. ಕ್ರಮೇಣ ಅದೇ ವ್ಯವಸ್ಥೆಯನ್ನು ದೇಶದ ಇತರ ಭಾಗಗಳಲ್ಲಿ ಜಾರಿಗೆ ತರಲಾಗುವುದು.

ಏನಿದು ಹೊಸ ವ್ಯವಸ್ಥೆ:

 ಸಿಲಿಂಡರ್ ಬುಕ್‌ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಕೋಡ್ ಅನ್ನು ರವಾನಿಸಲಾಗುತ್ತದೆ. ಸಿಲಿಂಡರ್ ವಿತರಣೆಯ ಸಮಯದಲ್ಲಿ ಈ ಕೋಡ್ ಅನ್ನು ಡೆಲಿವರಿ ಹುಡುಗನಿಗೆ ನೀಡಬೇಕಾಗುತ್ತದೆ. ಈ ಕೋಡ್ ಅನ್ನು ವಿತರಣೆ ಮಾಡುವ ಡೆಲಿವರಿ ಬಾಯ್ಗೆ ತೋರಿಸಿ ಸಿಲಿಂಡರ್ ಪಡೆಯಬೇಕು.

ಏನು ಮಾಡಬೇಕು?
ಸಿಲಿಂಡರ್‌ಗೆ ಬುಕಿಂಗ್‌ ಬಳಿಕ ಗ್ರಾಹಕನ ನೋಂದಾಯಿತ ಮೊಬೈಲ್‌ಗೆ ಒಟಿಪಿ ರವಾನಿಸಲಾಗುತ್ತದೆ. ಸಿಲಿಂಡರ್‌ ತರುವ ವ್ಯಕ್ತಿಗೆ ಈ ಒಟಿಪಿ ಸಂಖ್ಯೆ ನೀಡಬೇಕು. ವಾಣಿಜ್ಯ ಸಿಲಿಂಡರ್‌ಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.

ಮೊಬೈಲ್ ಸಂಖ್ಯೆ ನವೀಕರಿಸಬಹುದು:
ನೀವು ಪ್ರಸ್ತುತ ಬಳಸುತ್ತಿರುವ ಮೊಬೈಲ್‌ ಸಂಖ್ಯೆ ಹಾಗೂ ಗ್ಯಾಸ್‌ ಏಜೆನ್ಸಿಗೆ ನೀಡಿರುವ ಮೊಬೈಲ್‌ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ವಿತರಣೆಯ ಸಮಯದಲ್ಲಿ ನವೀಕರಿಸಲು ಸಾಧ್ಯವಿದೆ. ಇದಕ್ಕಾಗಿ ಡೆಲಿವರಿ ಹುಡುಗನಿಗೆ ಅಪ್ಲಿಕೇಶನ್ ಒದಗಿಸಲಾಗುವುದು. ವಿತರಣೆಯ ಸಮಯದಲ್ಲಿ ಆ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಡೆಲಿವರಿ ಬಾಯ್ ಬಳಿ ನವೀಕರಿಸಬಹುದು

Published On: 01 November 2020, 09:40 AM English Summary: LPG cylinder new rules for home delivery from today

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.