1. ಸುದ್ದಿಗಳು

weather ವಾರಾಂತ್ಯದಲ್ಲಿ ಹೇಗಿದೆ ನೋಡಿ ಹವಾಮಾನ, ಎಲ್ಲೆಲ್ಲಿ ಮಳೆ ?

Hitesh
Hitesh
Look at the weather in the weekend, where will it rain?

ರಾಜ್ಯದಲ್ಲಿ ವಾರಾಂತ್ಯದಲ್ಲಿ ಅಲ್ಲಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಶನಿವಾರ ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಚುರುಕಾಗಿತ್ತು. ಕರಾವಳಿಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು.

ಕರಾವಳಿಯ ಮತ್ತು ಉತ್ತರ ಒಳನಾಡಿನ ಹಲವು ಸ್ಥಳಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ

ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಮಳೆ

ಭಾರಿ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ): ಬಿಳಗಿ (ಬಾಗಲಕೋಟೆ ಜಿಲ್ಲೆ) 10; ಮಂಠಾಳ (ಬೀದರ್ ಜಿಲ್ಲೆ) 9;

ಖಜೂರಿ (ಕಲಬುರ್ಗಿ ಜಿಲ್ಲೆ) 8; ಕಲಬುರ್ಗಿ, ಸುತ್ತೂರು AWS (ಮೈಸೂರು ಜಿಲ್ಲೆ) ತಲಾ 7.

ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ: ಅಡಕಿ, ಚಿತ್ತಾಪುರ, ಸೇಡಂ, ಸುಲೇಪೇಟ

(ಎಲ್ಲಾ ಕಲಬುರ್ಗಿ ಜಿಲ್ಲೆ), ಬುಕ್ಕಪಟ್ಟಣ (ತುಮಕೂರು ಜಿಲ್ಲೆ), ಕೊಟ್ಟಿಗೆಹಾರ (ಚಿಕ್ಕಮಗಳೂರು ಜಿಲ್ಲೆ), ಹೊಸಕೋಟೆ

(ಬೆಂಗಳೂರು ಗ್ರಾಮಾಂತರ ಜಿಲ್ಲೆ) ತಲಾ 5; ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ), ಕಲಬುರ್ಗಿ

AWS, ಚಿಂಚೋಳಿ, ಗುಂಡಗುರ್ತಿ (ಎಲ್ಲಾ ಕಲಬುರ್ಗಿ ಜಿಲ್ಲೆ), ಕೋಲಾರ ತಲಾ 4; ಕದ್ರಾ (ಉತ್ತರ ಕನ್ನಡ ಜಿಲ್ಲೆ)

ರಬಕವಿ (ಬಾಗಲಕೋಟೆ ಜಿಲ್ಲೆ) ಹುಮನಾಬಾದ್ (ಬೀದರ್ ಜಿಲ್ಲೆ), ಮಹಾಗೋವಾ, ಕಮಲಾಪುರ (ಎರಡೂ ಕಲಬುರ್ಗಿ ಜಿಲ್ಲೆ)

ಜಾಲಹಳ್ಳಿ, ಮುದಗಲ್ (ಎರಡೂ ರಾಯಚೂರು ಜಿಲ್ಲೆ), ಚಿಕ್ಕಬಳ್ಳಾಪುರ, ಸಿ ಆರ್ ಪಟ್ನಾ (ಹಾಸನ) ತಲಾ 3 ಸೆಂ.ಮೀ ಮಳೆಯಾಗಿದೆ.

ಮಂಕಿ, ಗೋಕರ್ಣ (ಎರಡೂ ಉತ್ತರ ಕನ್ನಡ ಜಿಲ್ಲೆ), ಗಟ್ಟೂರು (ರಾಯಚೂರು ಜಿಲ್ಲೆ), ಶಹಾಪುರ, ಹುಣಸಗಿ, ನಾರಾಯಣಪುರ

ಎಚ್‌ಎಂಎಸ್ (ಎಲ್ಲ ಯಾದಗಿರಿ ಜಿಲ್ಲೆ), ಆಲಮಟ್ಟಿ ಎಚ್‌ಎಂಎಸ್, ತಾಳಿಕೋಟೆ (ಎರಡೂ ವಿಜಯಪುರ ಜಿಲ್ಲೆ)

ಆಳಂದ (ಕಲಬುರ್ಗಿ ಜಿಲ್ಲೆ), ಸೇಡಬಾಳ(ಬೆಳಗಾವಿ ಜಿಲ್ಲೆ), ಭಾಲ್ಕಿ (ಬೀದರ್ ಜಿಲ್ಲೆ), ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ)

ಕಳಸ, ಯಗಟಿ (ಎರಡೂ ಚಿಕ್ಕಮಗಳೂರು ಜಿಲ್ಲೆ), ಮಾಲೂರು (ಕೋಲಾರ),

ಚಾಮರಾಜನಗರ, ಮಂಡ್ಯ, (ಚಿಕ್ಕಮಗಳೂರು ಜಿಲ್ಲೆ ) ತಲಾ 2; ಪುತ್ತೂರು Hms (ದಕ್ಷಿಣ ಕನ್ನಡ ಜಿಲ್ಲೆ ), ಹೊನ್ನಾವರ

ಕುಮಟಾ, ಕಾರವಾರ, ಹಳಿಯಾಳ (ಎಲ್ಲಾ ಉತ್ತರ ಕನ್ನಡ dt), ಕಕ್ಕೇರಿ, ಶೋರಾಪುರ, ಕೆಂಬಾವಿ (ಎಲ್ಲಾ ಯಾದಗಿರಿ ಜಿಲ್ಲೆ )

ವಿಜಯಪುರ, ನೆಲೋಗಿ (ಕಲಬುರ್ಗಿ dt), ಯೆಡಾಡ (ಬೆಳಗಾವಿ ಜಿಲ್ಲೆ ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ ಮದುಗಿರಿ

ಚಿಕ.ನಹಳ್ಳಿ AWSಎರಡೂ ತುಮಕೂರು ಜಿಲ್ಲೆ ರಾಯಲ್ಪಾಡು (ಕೋಲಾರ ಜಿಲ್ಲೆ), ಟಿ ನರಸೀಪುರ (ಮೈಸೂರು ಜಿಲ್ಲೆ)

ಸೋಮವಾರಪೇಟೆ, ಹಾರಂಗಿ (ಎರಡೂ ಕೊಡಗು ಜಿಲ್ಲೆ), ಚಿಂತಾಮಣಿ (ಚಿಕಬಳ್ಳಾಪುರ ಜಿಲ್ಲೆ), ಮೈಸೂರು

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬೆಂಗಳೂರು ನಗರ ಜಿಲ್ಲೆ) ತಲಾ 1 ಸೆಂ.ಮೀ ಮಳೆಯಾಗಿರುವುದು ವರದಿಯಾಗಿದೆ.  

ಮುಂದಿನ 24 ಘಂಟೆಗಳು: ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ

ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು: ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ

; ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ

ಭಾರೀ ಮಳೆ ಮುನ್ನೆಚ್ಚರಿಕೆ:

ಮುಂದಿನ 24 ಘಂಟೆಗಳು: ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರ್ಗಿ, ಯಾದಗಿರಿ

ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಗುಡುಗು/ಬಿರುಗಾಳಿಯ ಮುನೆಚರಿಕೆ:

ಮುಂದಿನ 24 ಘಂಟೆಗಳು: ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ: ಇಲ್ಲ

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.

25 ನೇ ಸೆಪ್ಟೆಂಬರ್ 2023 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ.

ಮಳೆ/ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ.

ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆ ಇದೆ

ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ. 

ಚಿತ್ರಕೃಪೆ: @pexels 

Published On: 23 September 2023, 05:34 PM English Summary: Look at the weather in the weekend, where will it rain?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.