1. ಸುದ್ದಿಗಳು

ರೈತರಿಗೆ ಗುಡ್ ನ್ಯೂಸ್- ತಾಂತ್ರಿಕ ಕಾರಣಗಳಿಂದ ಸಾಲಮನ್ನಾ ಆಗದೆ ಇರುವ 57 ಸಾವಿರ ರೈತರ ಸಾಲಮನ್ನಾ

ತಾಂತ್ರಿಕ ಕಾರಣಗಳಿಂದ ಸಾಲಮನ್ನಾ ಆಗದೆ ಬಾಕಿ ಉಳಿದಿರುವ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಸುಮಾರು 57 ಸಾವಿರ ರೈತರಿಗೆ ಸಾಲಮನ್ನಾದ ಭಾಗ್ಯ ಸಿಕ್ಕಿರಲಿಲ್ಲ. ಈಗ ಸರ್ಕಾರ 57 ಸಾವಿರ ರೈತರ ಸಾಲಮನ್ನಾ ಮಾಡಿದೆ.

ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಸರಕಾರ ಘೋಷಿಸಿದ್ದ ಸಾಲ ಮನ್ನಾ ಅರ್ಹತೆಗಾಗಿ ಕಾದು ಕುಳಿತಿರುವ 57 ಸಾವಿರ ರೈತರಿಗೆ ಕೊನೆಗೂ ಈಗ “ಮನ್ನಾ ಭಾಗ್ಯ’ ದೊರೆತಿದೆ. 2 ವರ್ಷಗಳಲ್ಲಿ 3 ಬಾರಿ ದಾಖಲಾತಿ ಪರಿಶೀಲನೆಯ ಅನಂತರ ಅವರು ಸಾಲ ಮನ್ನಾಕ್ಕೆ ಅರ್ಹರಾಗಿದ್ದಾರೆ. ಸಹಕಾರ ಸಂಘಗಳಿಂದ ಪಡೆದಿದ್ದ ಸಾಲ ಮನ್ನಾ ಆಗಲಿದೆ.

ಜನವರಿ ವೇಳೆಗೆ ಅಂತಿಮ ಪಟ್ಟಿ ಸಿದ್ಧಪಡಿಸಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಹಕಾರ ಇಲಾಖೆ ಸಿದ್ಧತೆ ನಡೆಸಿದೆ. ಇನ್ನೂ 60 ಸಾವಿರ ರೈತರು ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದು ದಾಖಲೆ ಪರಿಶೀಲನೆ ನಡೆಯುತ್ತಿದೆ. 40 ಸಾವಿರ ರೈತರ ಸಾಲ ಮನ್ನಾ ಆಗಬಹುದು. ಉಳಿದವರು ಮನ್ನಾ ವ್ಯಾಪ್ತಿಗೆ ಬರುವುಜು ಅನುಮಾನ ಎನ್ನಲಾಗುತ್ತಿದೆ.

ಸಹಕಾರ ಸಂಘಗಳಿಂದ ಒಂದು ಲಕ್ಷ ರೂಪಾಯಿಯವರೆಗೆ ಸಾಲ ಪಡೆದ ರೈತರಿಗೆ ಸಾಲಮನ್ನಾ ಯೋಜನೆ ಘೋಷಿಸಲಾಗಿತ್ತು.  17.06  ಲಕ್ಷ ರೈತರನ್ನು ಗುರುತಿಸಿ ಅದಕ್ಕೆ 7987.47 ಕೋಟಿ ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆ ಪೈಕಿ ಇದುವರೆಗೆ  16.49 ಲಕ್ಷ ರೈತರಿಗೆ ಸಾಲ ಮನ್ನಾ ನೆರವು ದೊರೆತಿದ್ದು, 76,962.32 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದು ಸರಕಾರಿ ನೌಕರರಾಗಿರುವವರಿಗೆ ಹಾಗೂ ಆದಾಯ ತೆರಿಗೆ ಪಾವತಿಸುವವರಿಗೆ ಸಾಲ ಮನ್ನಾ ಅನ್ವಯವಾಗುವುದಿಲ್ಲ. . ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅನ್ವಯ ಎಂದು ಷರತ್ತು ವಿಧಿಸಿದ್ದರಿಂದ 42 ಸಾವಿರ ಅರ್ಜಿಗಳು ತಿರಸ್ಕೃತಗೊಂಡಿದ್ದವು. 10 ಸಾವಿರದಷ್ಟು ರೈತರು 3 ಲಕ್ಷ ರೂ. ವರೆಗೆ ಸಾಲ ಪಡೆದು 1 ಲಕ್ಷ ರೂ. ಸಾಲ ಮನ್ನಾ ಬಿಟ್ಟು ಉಳಿದ ಮೊತ್ತ ಪಾವತಿ ಮಾಡದಿದ್ದ ಕಾರಣಕ್ಕೆ ಸಾಲಮನ್ನಾ ನೆರವು ಪಡೆಯಲು ಸಾಧ್ಯವಾಗಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ನಿಮ್ಮ ಬೆಳೆ ಸಾಲಮನ್ನಾ ಆಗಿದೆಯೋ? ಇಲ್ಲವೋ ಎಂಬುದನ್ನು ನೋಡಲು ಇಲ್ಲಿದೆ ಮಾಹಿತಿ...

57 ಸಾವಿರ ರೈತರಿಗೆ  ಸಾಲಮನ್ನಾ ಯೋಜನೆ ಲಾಭ ಸಿಕ್ಕಿರಲಿಲ್ಲ. ಮೂರು ಹಂತಗಳಲ್ಲಿ ದಾಖಲಾತಿ ಪರಿಶೀಲನೆ ನಡೆಸಿದ ಅನಂತರ ಅವರೆಲ್ಲರೂ ಸಾಲ ಮನ್ನಾಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ ತಿಳಿಸಿದ್ದಾರೆ.

Published On: 17 December 2020, 11:26 AM English Summary: loan waiver for 57 thousands farmers, crop loan

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.