ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಧೃಢರಾಗಲು ವಿಕಲಚೇತನರ ಇಲಾಖೆಯಿಂದ 2021-22ನೇ ಸಾಲಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಸಾಧಿಕ್ ಹುಸೇನ್ ಖಾನ್ ತಿಳಿಸಿದ್ದಾರೆ.
ಆಧಾರ ಯೋಜನೆ, ವಿವಾಹ ಪ್ರೊತ್ಸಾಹಧನ, ಅಂಧ ವಿಧ್ಯಾರ್ಥಿಗಳಿಗೆ ಬ್ರೈಲ್ ಕಿಟ್, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಹೊಲಿಗೆ ಯಂತ್ರ, ಯಂತ್ರ ಚಾಲಿತ ತ್ರಿಚಕ್ರ ಪೇಟ್ರೊಲ್ ವಾಹನ (ಶೇ. 75 ರಷ್ಟು ಮೇಲ್ಪಟ್ಟ ದೈಹಿಕ ವಿಕಲಚೇತನರಿಗೆ), ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್, ಸಾಧನ ಸಲಕರಣೆ, ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹ ಧನ/ ಶುಲ್ಕ ಮರುಪಾವತಿ ಹಾಗೂ ಶಿಶು ಪಾಲನೆ ಭತ್ಯೆ ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಫಲಾನುಭವಿಗಳು ನಿಗದಿತ ಅರ್ಜಿ ನಮೂನೆಗಳನ್ನು ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಅಥವಾ ಇಲಾಖೆಯ www.dedsc.gov.in ವೆಬ್‌ಸೈಟ್‌ದಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ 2021ರ ಆಗಸ್ಟ್ 30 ರೊಳಗಾಗಿ ಸಲ್ಲಿಸಬೇಕು ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಯಾವುದೆ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ/ ವಿಕಲಚೇತನರ ಸಹಾಯವಾಣಿ ಸಂಖ್ಯೆ 08472-235222 ಗೆ ಸಂಪರ್ಕಿಸಬೇಕು. ಇದಲ್ಲದೇ ಆಯಾ ತಾಲೂಕು ನೋಡಲ್ ಅಧಿಕಾರಿಗಳು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ತಾಲೂಕು ಕಚೇರಿ ಕಲಬುರಗಿ, ಆಳಂದ, ಅಫಜಲಪೂರ, ಚಿತ್ತಾಪೂರ, ಚಿಂಚೋಳಿ, ಜೇವರ್ಗಿ, ಸೇಡಂ ತಾಲೂಕುಗಳಲ್ಲಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಮ್.ಆರ್.ಡಬ್ಲೂö್ಯ) ತಾಲೂಕು ಪಂಚಾಯತ್ ಕಚೇರಿ ಕಲಬುರಗಿ ಮೊಬೈಲ್ ಸಂಖ್ಯೆ-9972079714, ಅಫಜಲಪೂರ ಮೊಬೈಲ್ ಸಂಖ್ಯೆ 9448808141, ಆಳಂದ-ಮೊಬೈಲ್ ಸಂಖ್ಯೆ 9483054495, ಜೇವರ್ಗಿ-ಮೊಬೈಲ್ ಸಂಖ್ಯೆ 9741875881, ಚಿತ್ತಾಪೂರ ಮೊಬೈಲ್ ಸಂಖ್ಯೆ 9845204328, ಚಿಂಚೋಳಿ-ಮೊಬೈಲ್ ಸಂಖ್ಯೆ 9880671171 ಹಾಗೂ ಸೇಡಂ ಮೊಬೈಲ್ ಸಂಖ್ಯೆ 9902417925 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಸ್ವಯಂ ಉದ್ಯೋಗಕ್ಕಾಗಿ ಸಾಲ ನೀಡಲು ಅರ್ಜಿ ಆಹ್ವಾನ
2021-22ನೇ ಸಾಲಿಗೆ ಜಿಲ್ಲಾ ವಿಕಲಚೇತನರ ಹೀಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಸ್ವಯಂ ಉದ್ಯೋಗಕ್ಕಾಗಿ ಆಧಾರ (ಸಾಲ) ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ಅರ್ಜಿಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಛೇರಿ ಮೈಲೂರ, ಬೀದರ ಕಛೇರಿಯಿಂದ ಪಡೆದುಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್.28 ರೊಳಗಾಗಿ ಈ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ.
ದಾಖಲಾತಿಗಳು: ನಿಗದಿತ ಅರ್ಜಿ ನಮೂನೆ, ವಿಕಲಚೇತನರ ಗುರುತಿನ ಚೀಟಿ ಹೊಂದಿರಬೇಕು. ಇತ್ತೀಚಿನ ಭಾವಚಿತ್ರ, 18-55 ವರ್ಷಗಳೊಗಿನ ನಿರುದ್ಯೋಗಿಯಾಗಿರಬೇಕು. ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಬಿಪಿಎಲ್ ರೇಶನ್ ಕಾರ್ಡ್ ಹೊಂದಿರಬೇಕು, ತಹಶೀಲ್ದಾರರ ಕಾರ್ಯಲಯದಿಂದ ಜಾತಿ ಪ್ರಮಾಣ ಪತ್ರ ಮತ್ತು ವಾಸಸ್ಥಳ ಪ್ರಮಾಣ ಪತ್ರ ಪಡೆದು ಯೋಜನಾ ವರದಿ ( Project Report ) ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂ.ಸಂ. 08482-234647 ಹಾಗೂ ವಿಕಲಚೇತನರ ಸಹಾಯವಾಣಿ ಸಂಖ್ಯೆ 08482-234900 ಸಂಪರ್ಕಿಸಬಹುದು.
Share your comments