ಮನೆಯ ಮೇಲ್ಚಾವಣಿಯ ಮೇಲೆ ಕೃಷಿ, ಮೇಲ್ಚಾವಣಿಯ ಮೇಲೆ ಸಾವಯವ ಕೃಷಿ ಹಾಗೂ ಕಿಚನ್ ಗಾರ್ಡ್ ಸೇರಿದಂತೆ ವಿವಿಧ ಸರಳ ಹಂತದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ (The Living Greens Organics) ಸಂಸ್ಥೆಯು ಕೃಷಿ ಜಾಗರಣದೊಂದಿಗೆ ಸೋಮವಾರ ಒಡಂಬಡಿಕೆ ಮಾಡಿಕೊಂಡಿತು.
ಕೃಷಿ ಜಾಗರಣ ಸಂಸ್ಥೆಯ ಸಂಸ್ಥಾಪಕ ಮತ್ತು ಸಂಪಾದಕರಾದ ಎಂ.ಸಿ ಡೊಮಿನಿಕ್ ಹಾಗೂ ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯ ಸಿಇಒ
ಹಾಗೂ ಸಂಸ್ಥಾಪಕ ಪ್ರತೀಕ್ ತಿವಾರಿ ಅವರು ಒಡಂಬಡಿಕೆಗೆ ಸಹಿ ಹಾಕಿದರು.
ನಂತರ ಮಾತನಾಡಿದ ಕೃಷಿ ಜಾಗರಣ ಸಂಸ್ಥೆಯ ಸಂಸ್ಥಾಪಕ ಮತ್ತು ಸಂಪಾದಕರಾದ ಎಂ.ಸಿ ಡೊಮಿನಿಕ್ ಅವರು, ಕೃಷಿ ಜಾಗರಣ ಸಂಸ್ಥೆಯು
ಕೃಷಿಗೆ ಸಂಬಂಧಿಸಿದ ಹಾಗೂ ಕೃಷಿಗೆ ಪೂರಕವಾದ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡಿದೆ.
ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯು ಕಿಚನ್ ಗಾರ್ಡನಿಂಗ್‌ನಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಹೇಳಿದರು.
ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯ ಸಿಇಒ ಹಾಗೂ ಸಂಸ್ಥಾಪಕ ಪ್ರತೀಕ್ ತಿವಾರಿ ಅವರು ಮಾತನಾಡಿ, ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯು
ಮನೆಯ ಮೇಲ್ಚಾವಣಿ (ಟೆರಸ್)ಮೇಲೆ ಕೃಷಿ, ಸಾವಯವ ಕೃಷಿ ಹಾಗೂ ಚಾವಣಿಯ ಮೇಲೆ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದೆ.
ಅಲ್ಲದೇ ಈ ಎಲ್ಲ ಮಾದರಿಯ ಕೃಷಿಗಳಿಗೆ ಸಂಬಂಧಿಸಿದಂತೆ ಸಾವಯವ ಕೃಷಿ ಕಿಟ್‌ಅನ್ನೂ ನಾವು ನೀಡುತ್ತಿದ್ದೇವೆ.
ಅಲ್ಲದೇ ಮನೆ ಹಾಗೂ ಕಾರ್ಖಾನೆಯ ಒಳಾಂಗಣ ಮತ್ತು ಹೊರಾಂಗಣ ಪ್ರದೇಶಗಳನ್ನು ಹಸಿರು ಹೊದಿಕೆ ಯನ್ನು ಹೆಚ್ಚಿಸಲು ಸಂಸ್ಥೆ ಕಾರ್ಯನಿರತವಾಗಿದೆ.
ಅಂದರೆ, ನಿರ್ದಿಷ್ಟ ಬಯಲು ಪ್ರದೇಶದಲ್ಲಿ ತರಕಾರಿ ಅಥವಾ ಸಸಿಗಳನ್ನು ಬೆಳೆಯಲು ವ್ಯವಸ್ಥೆ ಹಾಗೂ ಸಸಿಗಳನ್ನು ಪೂರೈಸಲಾಗುತ್ತಿದೆ.
ಇಷ್ಟೇ ಅಲ್ಲದೇ ಬೆಳೆಗಳ ಕಾಳಜಿ ಹಾಗೂ ಅದನ್ನು ಬೆಳೆಯಲು ಪೂರ್ಣ ಮಾಹಿತಿಯನ್ನೂ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತದ ಹಲವು ಪ್ರಮುಖ ನಗರಗಳಲ್ಲಿ ಬಿಸಿಲಿನ ಝಳದ ಪ್ರಮಾಣ ತೀವ್ರವಾಗುತ್ತಿದೆ.
ಇದರಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ ಅಲ್ಲದೇ, ಉತ್ತಮ ಹಾಗೂ ಆರೋಗ್ಯಯುತವಾದ ತರಕಾರಿಗಳು ಸಿಗುವುದು ಸಹ ಕಷ್ಟವಾಗಿದೆ.
ಈ ಎರಡೂ ಸಮಸ್ಯೆಗಳಿಗೂ ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆ ಪರಿಹಾರ ನೀಡುತ್ತಿದೆ.
ಮನೆಯ ಮೇಲ್ಚಾವಣಿಯ ಮೇಲೆ ಹಾಗೂ ಖಾಲಿ ಜಾಗದ ಮೇಲೆ ನೀವೆ ಕೃಷಿಯನ್ನು ಮಾಡಬಹುದು.
ಆರೋಗ್ಯಯುತ ಹಾಗೂ ಸಾವಯುವವಾದ ತರಕಾರಿಗಳನ್ನು ಬೆಳೆಯುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಷ್ಟೇ ಅಲ್ಲದೇ
ನಿಮ್ಮ ಮನೆಯ ತಾಪಮಾನವನ್ನೂ ಇಳಿಸಿಕೊಳ್ಳಲು ಇದು ಅತ್ಯುತ್ತಮವಾದ ಮಾರ್ಗವಾಗಿದೆ ಎಂದು ಹೇಳಿದರು.
ಸರ್ಕಾರಗಳು ಸಹ ನಮ್ಮೊಂದಿಗೆ ಕೈಜೋಡಿಸಿದೆ. ಸ್ಮಾರ್ಟ್‌ಸಿಟಿ ಯೋಜನೆಗೆ ಪೂರಕವಾಗಿ ನಾವು ನಮ್ಮ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ.
ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯು ಮನೆಯ ಮೇಲ್ಚಾವಣಿಯ ಮೇಲಷ್ಟೇ ಅಲ್ಲ ಇದೀಗ ಕಾರ್ಖಾನೆಗಳ ಮೇಲ್ಚಾವಣೆಯ ಮೇಲಿನ
ಖಾಲಿ ಪ್ರದೇಶದಲ್ಲಿಯೂ ತರಕಾರಿ ಹಾಗೂ ಸಾವಯವ ಕೃಷಿಯನ್ನು ಪೂರಕವಾದ ಸಾಮಾಗ್ರಿಗಳು, ತಿಳಿವಳಿಕೆ ಹಾಗೂ ಕೀಟನಾಶಕಗಳನ್ನೂ ನೀಡುತ್ತಿದೆ ಎಂದು ವಿವರಿಸಿದರು.
ಕೃಷಿ ಜಾಗರಣದೊಂದಿಗೆ ಕೆಲಸ ಮಾಡುತ್ತಿರುವುದು ಸಂತೋಷವನ್ನು ಉಂಟು ಮಾಡಿದೆ ಎಂದು ಹೇಳಿದರು.
ಒಂದು ಬಾರಿಯ ಹೂಡಿಕೆ: ಮನೆಯ ಮೇಲ್ಚಾವಣಿಯ ಮೇಲೆ ಹಾಗೂ ಕಿಚನ್ ಗಾರ್ಡನ್‌ಗೆ ಸಂಬಂಧಿಸಿದಂತೆ ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯು ಟೆರಸ್ ಕೃಷಿಗೆ ಸಂಬಂಧಿಸಿದಂತೆ ಹಲವು ಸಾಮಾಗ್ರಿಗಳನ್ನು ಪರಿಚಯಿಸಿದ್ದು,
ಇದು ಒಂದು ಬಾರಿ ನೀವು ಹೂಡಿಕೆ ಮಾಡಿದರೆ, ನಿರಂತರವಾಗಿ ಉತ್ತಮ ಹಾಗೂ ಆರೋಗ್ಯಯುತವಾದ ತರಕಾರಿಗಳನ್ನು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆಯೇ ಬೆಳೆಯಬಹುದಾಗಿದೆ.
ಮೂರು ಮಾದರಿ; ಹಲವು ವಿಧಾನ!
ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯು ಮನೆಯ ಮೇಲ್ಚಾವಣಿ (ಟೆರಸ್)ಮೇಲೆ ಕೃಷಿಯಲ್ಲಿ ಹಲವು ಮಾದರಿಯನ್ನು ಹೊಂದಿದೆ.
ಅದರಲ್ಲಿ ಸಾವಯವ ಕೃಷಿ ಹಾಗೂ ಚಾವಣಿಯ ಮೇಲೆ ಸಾವಯವ ಕೃಷಿಯಲ್ಲಿ ಪ್ರಮುಖವಾಗಿದೆ.
ಅಲ್ಲದೇ ಸಾವಯವ ಕೃಷಿ ಕಿಟ್ ನೀಡುವುದು ಹಾಗೂ ಮೇಲ್ವಿಚಾರಣೆ ಮಾಡುವುದು ಹಾಗೂ ಮಾಹಿತಿ ನೀಡುವುದು ಸಹ ವಿಶೇಷವಾಗಿದೆ.
ಇನ್ನು ಈ ಸಂಸ್ಥೆಯ ಮತ್ತೊಂದು ಪ್ರಮುಖ ಅಂಶವೆಂದರೆ, ಮನೆ ಹಾಗೂ ಕಾರ್ಖಾನೆಯ ಒಳಾಂಗಣ ಮತ್ತು ಹೊರಾಂಗಣ
ಪ್ರದೇಶಗಳನ್ನು ಹಸಿರು ಹೊದಿಕೆ ಯನ್ನು ಹೆಚ್ಚಿಸಲು ಸಂಸ್ಥೆ ಕಾರ್ಯನಿರತವಾಗಿದೆ.
2 ಸಾವಿರಕ್ಕೂ ಹೆಚ್ಚು ಗ್ರಾಹಕರ ವಿಶ್ವಾಸ: ಈ ಸಂಸ್ಥೆಯ ಮೇಲೆ ವಿಶ್ವಾಸವಿರಿಸಿ, ಭಾರತದ ಹಲವು ಪ್ರಮುಖ ನಗರಗಳಲ್ಲಿ ಇರುವ 2 ಸಾವಿರಕ್ಕೂ
ಹೆಚ್ಚು ಗ್ರಾಹಕರು ಟೆರಸ್ ಗಾರ್ಡನಿಂಗ್‌ನಲ್ಲಿ ತೊಡಗಿದ್ದಾರೆ. ಅಲ್ಲದೇ ಇದು ಇನ್ನೂ ಹಲವರು ಇದರಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯನ್ನೂ ನೀಡಿದೆ ಎನ್ನುತ್ತಾರೆ ಪ್ರತೀಕ್ ತಿವಾರಿ ಅವರು.
ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯು ಕೃಷಿ ಜಾಗರಣ ಸಂಸ್ಥೆಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದು, ಟೆರಸ್ ಗಾರ್ಡನಿಂಗ್‌ನ ಬಗ್ಗೆ ನಿರಂತರ ಮಾಹಿತಿ ನೀಡಲಿದೆ.
ಮನೆಯಂಗಳದಲ್ಲಿ ಕೈತೋಟದ ಮಾಹಿತಿ ನಿಮಗೆ ಕೃಷಿ ಜಾಗರಣದಲ್ಲಿ ಸಿಗಲಿದೆ.
ಇನ್ನು ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯ ಹೆಚ್ಚಿನ ಮಾಹಿತಿಗೆ: https://thelivinggreens.com/ ಲಿಂಕ್‌ಗೂ ಭೇಟಿ ನೀಡಬಹುದು.
ಈ ಸಂದರ್ಭದಲ್ಲಿ ಕೃಷಿ ಜಾಗರಣದ ನಿರ್ದೇಶಕರಾದ ಶೈನಿ ಡೊಮಿನಿಕ್ ಹಾಗೂ ದಿ.ಲಿವಿಂಗ್ ಗ್ರೀನ್ಸ್ ಆರ್ಗಾನಿಕ್ಸ್ ಸಂಸ್ಥೆಯ ಹಲವು ಪ್ರಮುಖರು ಇದ್ದರು.
Share your comments