1. ಸುದ್ದಿಗಳು

ಆರೋಗ್ಯ ರಕ್ಷಕ್ ಪಾಲಿಸಿ ಬಗ್ಗೆ ನಿಮಗೆ ಗೊತ್ತಾ.... ಇಲ್ಲಿದೆ ಸಂಪೂರ್ಣ ಮಾಹಿತಿ

ಲೈಫ್ ಇನ್ಸೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಲ್ಐಸಿ)2021 ರ ಜುಲೈ 19 ರಂದು ಆರೋಗ್ಯ ರಕ್ಷಕ್ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಇದು ವೈಯಕ್ತಿಕವಾದ ಆರೋಗ್ಯ ವಿಮೆ ಯೋಜನೆಯಾಗಿದೆ. ಈ ಯೋಜನೆಯು ಕೆಲವು ನಿರ್ಧಿಷ್ಟ ಆರೋಗ್ಯ ಸಮಸ್ಯೆಗಳಿಗೆ ಸ್ಥಿರ ಲಾಭದ ಆರೋಗ್ಯದ ವಿಮೆ ರಕ್ಷಣೆ ನೀಡಲಿದೆ. ಇದೊಂದು ವೈಯಕ್ತಿಕ ವಿಮಾ ಸೌಲಭ್ಯವಾಗಿದ್ದು, ಗ್ರಾಹಕರು ತಮ್ಮ ಸಂಗಾತಿ, ಮಕ್ಕಳು ಹಾಗೂ ಅಪ್ಪ, ಅಮ್ಮನ ಹೆಸರನ್ನು ವ್ಯಾಪ್ತಿಗೆ ತರಬಹುದು.

ಎಲ್​ಐಸಿಯ ಪ್ರಕಾರ, ಆರೋಗ್ಯ ರಕ್ಷಕ್ ಪಾಲಿಸಿಯು ಕೆಲವು ನಿರ್ದಿಷ್ಟ ಆರೋಗ್ಯ ಅಪಾಯಗಳ ವಿರುದ್ಧ ನಿರ್ದಿಷ್ಟ ಲಾಭದ ಆರೋಗ್ಯ ವಿಮಾ ರಕ್ಷಣೆ ಒದಗಿಸುತ್ತದೆ ಮತ್ತು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸಕಾಲಿಕ ಬೆಂಬಲ ನೀಡುತ್ತದೆ. ವಿಮೆ ಮಾಡಿದವರಿಗೆ ಮತ್ತು ಅವರ ಕುಟುಂಬಕ್ಕೆ ಕಷ್ಟದ ಸಮಯದಲ್ಲಿ ಆರ್ಥಿಕವಾಗಿ ಸ್ವತಂತ್ರವಾಗಿರಲು ಸಹಾಯ ಮಾಡುತ್ತದೆ. ಪಾವತಿ ಮರುಪಾವತಿಯ ವಿಧಾನದ ದೃಷ್ಟಿಯಿಂದ ಆರೋಗ್ಯ ರಕ್ಷಕ್ ಪಾಲಿಸಿಯು ಸಾಮಾನ್ಯ ಸಮಗ್ರ ಆರೋಗ್ಯ ವಿಮೆಗಿಂತ ಭಿನ್ನವಾಗಿದೆ. ಸಾಮಾನ್ಯವಾಗಿ ಸಮಗ್ರ ಆರೋಗ್ಯ ಪಾಲಿಸಿಗಳು ವಿಮೆ ಮಾಡಿದ ಮೊತ್ತದ ಮಿತಿಯವರೆಗೆ ವೈದ್ಯಕೀಯ ಚಿಕಿತ್ಸೆಯಲ್ಲಿನ ನಿಜವಾದ ವೆಚ್ಚವನ್ನು ಮರುಪಾವತಿಸುತ್ತವೆ.

 ಪಾಲಿಸಿಯು 18 ರಿಂದ 65 ವರ್ಷದೊಳಗಿನ ಪ್ರಧಾನ ವಿಮೆ / ಸಂಗಾತಿ / ಪೋಷಕರಿಗೆ ಮತ್ತು 91 ದಿನದಿಂದ 20 ವರ್ಷದ ಮಕ್ಕಳಿಗೆ ಲಭ್ಯವಿದೆ. ಪ್ರಧಾನ ವಿಮೆ / ಸಂಗಾತಿ / ಪೋಷಕರಿಗೆ ಲಭ್ಯವಿರುವ ಕವರ್ ಅವಧಿ 80 ವರ್ಷಗಳವರೆಗೆ ಇರುತ್ತದೆ. ಆದರೆ ಇದು 25 ವರ್ಷಗಳವರೆಗೆ ಮಕ್ಕಳಿಗೆ ಮಾತ್ರ ಲಭ್ಯವಿದೆ.

ಯೋಜನೆಯ ಪ್ರಯೋಜನಗಳು

ಆಯ್ಕೆ ಮಾಡಲು ಹೊಂದಿಕೊಳ್ಳುವ ಲಾಭದ ಮಿತಿ, ಆಸ್ಪತ್ರೆ ದಾಖಲು, ಶಸ್ತ್ರಚಿಕಿತ್ಸೆ ಇತ್ಯಾದಿ ಸಂದರ್ಭಗಳಲ್ಲಿ ಆರ್ಥಇಕ ಭದ್ರತೆ ನೀಡಲಾಗುವುದು. ವೈದ್ಯಕೀಯ  ವೆಚ್ಚ ಸ್ಥಿರವಾದ ಪೂರ್ಣ ಲಾಭ ದೊರೆಯಲಿದೆ. ನಗದುರಹಿತ ಇಲ್ಲದೆ ನಂತರದಲ್ಲಿ ಕ್ಲೇಮ್ ಮಾಡಿಕೊಳ್ಳಲು ಅವಕಾಶವಿದೆ. ಒಂದಕ್ಕಿಂತ ಹೆಚ್ಚು ಸದಸ್ಯರನ್ನು ಪಾಲಿಸಿ ವ್ಯಾಪ್ತಿಗೆ ಒಳಪಡಿಸಿದ ಸಂದರ್ಭದಲ್ಲಿ ಪಾಲಿಸಿದಾರ ಸಾವನ್ನಪ್ಪಿದಗ್ದರೂ ಇತರೆ ಸದಸ್ಯರು ಪಾಲಿಸಿ ವ್ಯಾಪ್ತಿಗೆ ಒಳಪಡಿಸಿದ ಸಂದರ್ಭದಲ್ಲಿ ಪಾಲಿಸಿದಾರ ಸಾವನ್ನಪ್ಪಿದ್ದರೂ ಇತರೆ ಸದಸ್ಯರನ್ನು ಜೀವಾತಾವಧಿಗೆ ಸೌಲಭ್ಯ ಪಡೆಯಬಹುದು.

ಮೊದಲ ಹಾಗೂ ಎಱಡನೇ ಹಂತದ ಚಿಕಿತ್ಸೆಗೆ ಒಳಗಾದವರಿಗೆ ಒಂದು ವರ್ಷದ ಅವಧಿಯಲ್ಲಿ  ಪ್ರಿಮಿಯಂ ಮನ್ನ ಸಹ ಆಗಲಿದೆ. ಆರೋಗ್ಯ ತಪಾಸಣೆ ಸೌಲಭ್ಯಇದೆ. ವಿಮೆ ಮಾಡಿದವರು (ಅಂದರೆ, ಪಾಲಿಸಿಯ ಆರಂಭದಲ್ಲಿ ಪಾಲಿಸಿ ಹೊಂದಿರುವವರು) ದುರದೃಷ್ಟವಶಾತ್ ಸತ್ತರೆ, ಇತರ ವಿಮಾದಾರರ ಪ್ರೀಮಿಯಂಗಳನ್ನು ಮನ್ನಾ ಮಾಡಬಹುದು. ಆ್ಯಂಬ್ಯುಲೆನ್ಸ್ ಸೌಲಭ್ಯ, ಆರೋಗ್ಯ ತಪಾಸಣೆ ಸೌಲಭ್ಯ ಲಭ್ಯವಿದೆ.

ಪಾಲಿಸಿಯ ಕುರಿತು ಹೆಚ್ಚಿನ ಮಾಹಿತಿಗಾಗಿ www.licindia.in ಗೆ ಸಂಪರ್ಕಿಸಬಹುದು.

Published On: 21 July 2021, 06:26 PM English Summary: LIC launches arogya rakshak health insurance plan

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.