1. ಸುದ್ದಿಗಳು

ಭೂಸ್ವಾಧೀನ ಹಣ ಬಾಕಿ: ನೀರಾವರಿ ಇಲಾಖೆ ಭೂಸ್ವಾಧೀನ ಅಧಿಕಾರಿಯ ವಾಹನ ಜಫ್ತಿ

Maltesh
Maltesh
Land acquisition dues: Irrigation Department land acquisition officer's vehicle impounded

ಧಾರವಾಡ ತಾಲೂಕ ಹೂಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಎಡದಂಡೆ ಕಾಲುವೆ ನಂ. 02 ನೇದ್ದರ ನಿರ್ಮಾಣದ ಕುರಿತಂತೆ ಧಾರವಾಡ ತಾಲೂಕ ಹೂಲಿಕೇರಿ ಗ್ರಾಮದ ರಿಸನಂ. 108/2 ಕ್ಷೇತ್ರ : 00ಎ-13 ಗುಂಟೆ ಜಮೀನನ್ನು ಭೂ ಮಾಲಿಕರಾದ ವೀರಣ್ಣ ತಂದೆ ಶೀದ್ಲಿಂಗಪ್ಪ ನಾಗಶೆಟ್ಟಿ ಸಾ|| ಹೂಲಿಕೇರಿ ತಾ|| ಅಳ್ನಾವರ ಇವರ ಹೆಸರಿನಲ್ಲಿ ಸದರಿ ಜಮೀನಿಗೆ ರೂ. 14,184/-ಗಳನ್ನು ನಿಗದಿಪಡಿಸಿ ಐತೀರ್ಪು ಘೋಷಣೆ ಮಾಡಿ ಭೂ-ಸ್ವಾಧೀನ ಪಡಿಸಿಕೊಂಡಿದ್ದು ಇರುತ್ತದೆ.

ಹಾವೇರಿ ಜಿಲ್ಲೆಯ ರೈತರ ಕನಸು ನನಸಾಗಿದೆ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸದರಿ ಜಮೀನಿನ ಭೂ ಮಾಲಿಕರು ಹೆಚ್ಚುವರಿ ಪರಿಹಾರ ಕೋರಿ ಭೂ ಸ್ವಾಧೀನ ಕಾಯ್ದೆ 1894 ರ ಕಲಂ 18 (1) ರಡಿ ಈ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಗೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದಲ್ಲಿ ದಾಖಲಾದ ಎಲ್.ಎ.ಸಿ ನಂ. 26/2013 ನೇದ್ದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಿವಾಣಿ ನ್ಯಾಯಾಲಯ ಧಾರವಾಡ ರವರು ಸದರಿ ಜಮೀನಿಗೆ ಪ್ರತಿ ಗುಂಟೆಗೆ ರೂ: 31,500/-ಗಳನ್ನು ನಿಗಧಿಪಡಿಸಿ ಆದೇಶಿಸಿದ್ದು ಇರುತ್ತದೆ.

ಮಾನ್ಯ ನ್ಯಾಯಾಲಯದ ಆದೇಶದನ್ವಯ ಸದರಿ ಪ್ರಕರಣಗಳಲ್ಲಿ ಒಟ್ಟು ರೂ: 20,42,792/- ಗಳನ್ನು ಮಾನ್ಯ ನ್ಯಾಯಾಲಯಕ್ಕೆ ಭರಣಾ ಮಾಡಬೇಕಾಗಿದ್ದು, ಈ ಕುರಿತಂತೆ ಭೂ ಕೋರಿಕೆ ಸಂಸ್ಥೆಯವರಾದ ಕಾರ್ಯನಿರ್ವಾಹಕ ಇಂಜನೀಯರರು, ಸಣ್ಣ ನೀರಾವರಿ ಇಲಾಖೆ ಧಾರವಾಡ ಇವರು.

ರೂ: 17,85,308/-ಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಣವನ್ನು ಈಗಾಗಲೇ ಭರಣಾ ಮಾಡಿದ್ದು ಬಾಕಿ ಮೊತ್ತ ರೂ: 2,57,484/-ಗಳನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮಾನ್ಯ ನ್ಯಾಯಾಲಯಕ್ಕೆ ಹಣವನ್ನು ಭರಣಾ ಮಾಡದ ಕಾರಣ ಸರ್ಕಾರದ ಹಂತದಲ್ಲಿ ಭೂಸ್ವಾಧೀನ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿಗಳ ವಾಹನ ಜಪ್ತಿಯಾಗಿರುತ್ತದೆ ಎಂದು ಎ.ಸಿ. ಅವರು ತಿಳಿಸಿದ್ದಾರೆ.

ಹಳ್ಳಿಯ ಎಲ್ಲ ಮನೆಗಳು ಆರ್.ಸಿ.ಸಿ ಆಗಬೇಕು- ಸಿಎಂ ಬೊಮ್ಮಾಯಿ

ಈಗಾಗಲೇ ದಿನಾಂಕ: 03-03-2023 (ಶುಕ್ರವಾರ) ರಂದು ಸಣ್ಣ ನೀರಾವರಿ ಇಲಾಖೆಗೆ ಸರ್ಕಾರದಿಂದ ರೈತರಿಗೆ ನೀಡಬೇಕಾಗಿರುವ ಬಾಕಿ ಮೊತ್ತ ಬಿಡುಗಡೆಯಾಗಿದ್ದು, ಸೋಮವಾರ ದಿನಾಂಕ: 06-03-2023 ರಂದು ನ್ಯಾಯಾಲಯಕ್ಕೆ ಜಮೆ ಮಾಡುವುದಾಗಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Published On: 12 March 2023, 03:03 PM English Summary: Land acquisition dues: Irrigation Department land acquisition officer's vehicle impounded

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.