1. ಸುದ್ದಿಗಳು

ಕಟ್ಟಡ ಕಾರ್ಮಿಕರ ರಿಯಾಯಿತಿ ಬಸ್‌ ಪಾಸ್‌.. ರಾಜ್ಯಾದ್ಯಂತ ವಿಸ್ತರಣೆ

Maltesh
Maltesh
Labour Bus Pass

ರಾಜ್ಯದ ನೋಂದಾಯಿತ  ಕಟ್ಟಡ ಕಾರ್ಮಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ)  ನೀಡುತ್ತಿದ್ದ ರೀಯಾಯಿತಿ ದರದ ಬಸ್ ಪಾಸ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೌದು ಬಜೆಟ್‌ನಲ್ಲಿ ತಿಳಿಸಿದಂತೆ  ರಾಜ್ಯಾದ್ಯಂತ ಬಸ್‌ ಪಾಸ್‌ ಯೋಜನೆ ವಿಸ್ತರಿಸಲು ಆರ್ಥಿಕ ಇಲಾಖೆಯು ಏ.16 ರಂದು ಗ್ರೀನ್ ಸಿಗ್ನಲ್ ನೀಡಿದೆ.  ಅಷ್ಟೇ ಅಲ್ಲದೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಯೋಜನೆ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.

ಇದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಕಟ್ಟಡ ಕಾರ್ಮಿಕರು ಪ್ರಯಾಣಿಸಲು ರಿಯಾಯಿತಿ ದರದ ಬಸ್‌ ಪಾಸು ನೀಡಬಹುದು. ಆದರೆ ರಾಜ್ಯ ಸರ್ಕಾರದಿಂದ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಇಟ್ಟಿಲ್ಲ. ಹೀಗಾಗಿ ಕಾರ್ಮಿಕ ಕಲ್ಯಾಣ ಮಂಡಳಿಯ ಅನುದಾನವನ್ನೇ ಬಳಸಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಷರತ್ತು ಬದ್ಧ ಒಪ್ಪಿಗೆ ನೀಡಲಾಗಿದೆ.

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ, ಕಾರ್ಮಿಕರ ಮಕ್ಕಳಿಗೆ ಕಲಿಕೆ ಭಾಗ್ಯ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಲು ಸರ್ಕಾರದ ವೆಬ್ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳ ಬೇಕು.. ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿ ನೇರ ವರ್ಗಾವಣೆ ಮೂಲಕ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ.

ನೋಂದಾಯಿತ ನಿರ್ಮಾಣ ಕಾರ್ಮಿಕನ ಮಗ ಅಥವಾ ಮಗಳ ಶಿಕ್ಷಣದ ನೆರವು.

ಮಂಡಳಿಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿ ನೋಂದಾಯಿತ ಫಲಾನುಭವಿಯಿಂದ ಶೈಕ್ಷಣಿಕ ಸಹಾಯ ಧನದ ಅರ್ಜಿಯನ್ನು ಸ್ವೀಕರಿಸಿ, ಅವಲಂಬಿತ ಅರ್ಹ ಎರಡು ಮಕ್ಕಳಿಗೆ ಪ್ರತಿ ವರ್ಷ ಸಹಾಯ ಧನವನ್ನು ಮಂಜೂರು ಮಾಡಬೇಕಾಗುತ್ತದೆ. ‘ಕಲಿಕಾ ಭಾಗ್ಯ¨’ ಯೋಜನೆಯಡಿಯಲ್ಲಿ ವಾರ್ಷಿಕ ಶೈಕ್ಷಣಿಕ ಸಹಾಯಧನ ಮತ್ತು ಪ್ರತಿಭಾ ಸಹಾಯಧನವನ್ನು ನೀಡುವುದು ( ಸರ್ಕಾರದ ಅಧಿಸೂಚನೆ ದಿನಾಂಕ 14-12-2019 ರಂತೆ ಶೈಕ್ಷಣಿಕ ಸಹಾಯಧನ ದರಗಳು ಸರ್ಕಾರದ ಪ್ರಕಟನೆ ಅನುಗುಣವಾಗಿರುತ್ತದೆ) .

  • 1ನೇ ತರಗತಿ ಉತ್ತೀರ್ಣರಾದವರಿಗೆ 2000/-
  • 2ನೇ ತರಗತಿ ಉತ್ತೀರ್ಣರಾದವರಿಗೆ 2000/-
  • 3ನೇ ತರಗತಿ ಉತ್ತೀರ್ಣರಾದವರಿಗೆ 2000/-
  • 4ನೇ ತರಗತಿ ಉತ್ತೀರ್ಣರಾದವರಿಗೆ 3000/-
  • 5ನೇ ತರಗತಿ ಉತ್ತೀರ್ಣರಾದವರಿಗೆ 3000/-
  • 6ನೇ ತರಗತಿ ಉತ್ತೀರ್ಣರಾದವರಿಗೆ 3000/-
  • 7ನೇ ತರಗತಿ ಉತ್ತೀರ್ಣರಾದವರಿಗೆ 4000/-
  • 8ನೇ ತರಗತಿ ಉತ್ತೀರ್ಣರಾದವರಿಗೆ 4000/-

#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!

ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್‌ ನಂಬರ್‌ ಅನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡಿ

  • 9ನೇ ತರಗತಿ ಉತ್ತೀರ್ಣರಾದವರಿಗೆ 6000/-
  • 10ನೇ ತರಗತಿ ಉತ್ತೀರ್ಣರಾದವರಿಗೆ 6000/-
  • ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-
  • ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-
  • ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-
  • ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-
  • ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-(On Merit Seat)
  • ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-(On Merit Seat)
  • ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ (ಎರಡು ವರ್ಷಗಳಿಗೆ)
  • ಪಿಹೆಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ.20000/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿ.ಹೆಚ್.ಡಿ ಪ್ರಭಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20,000/-

ಈ 4 ಸ್ಟೆಪ್ಸ್‌ಗಳಿಂದ E-mail ಐಡಿ ಹಾಗೂ ಮೊಬೈಲ್‌ ನಂಬರ್‌ ಅನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡಿ

ಮಹತ್ವದ ನ್ಯೂಸ್‌: ಕ್ರೆಡಿಟ್‌ ಕಾರ್ಡ್‌ಗಳಿಗೆ ಹೊಸ ನಿಯಮ ತಂದ RBI..ಭಾರೀ ಬದಲಾವಣೆ

Published On: 01 May 2022, 11:44 AM English Summary: Labour Bus Pass Discount BMTC And KSRTC

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.