ಕೊರೋನಾ ಸೋಂಕಿನ ಭೀತಿಯಿಂದಾಗಿ ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಹವಾ ನಿಯಂತ್ರಿತ (ಎಸಿ) ಬಸ್ ಸಂಚಾರವನ್ನುನಿಲ್ಲಿಸಿದ್ದ ಕೆ ಎಸ್ ಆರ್ ಟಿ ಸಿ ಸಂಸ್ಥೆ ಮೊದಲ ಹಂತವಾಗಿ ಜುಲೈ 25 ರಿಂದ 8 ಜಿಲ್ಲೆಗಳಿಗೆ ಸಂಚಾರ ಸೇವೆ ಪುನರಾರಂಭಿಸಲಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ಮೊದಲ ಹಂತದಲ್ಲಿ ಬೆಂಗಳೂರಿನಿಂದ ಎಂಟು ಜಿಲ್ಲೆಗಳಿಗೆ ಸಂಚಾರ ಕಾರ್ಯಾಚರಣೆ ಪ್ರಾರಂಭಿಸಲಿದೆ ಎಂದು ತಿಳಿಸಿದೆ.
ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ ಶಿವಮೊಗ್ಗ , ವಿರಾಜಪೇಟೆಗೆ ಬೆಂಗಳೂರಿನಿಂದ ಕೆ ಎಸ್ ಆರ್ ಟಿ ಸಿಯ ಎಸಿ ಬಸ್ ಸಂಚಾರ ಆರಂಭವಾಗಲಿದೆ.ಹವಾನಿಯಂತ್ರಿತ ಸಾರಿಗೆಗಳಲ್ಲಿ ಮಾರ್ಗಸೂಚಿಯನ್ವಯ ತಾಪಮಾನವನ್ನು 24 ರಿಂದ 25 ಸೆಲ್ಸಿಯಸ್ ನಲ್ಲಿ ನಿರ್ವಹಿಸಲಾಗುವುದು. ಮತ್ತು ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ರಾತ್ರಿ ಸಾರಿಗೆಗಳಲ್ಲಿ ಹೊದಿಕೆಗಳನ್ನು ನೀಡಲಾಗುವುದಿಲ್ಲ. ಆದ್ದರಿಂದ ಪ್ರಯಾಣಿಕರು ತಮ್ಮ ಹೊದಿಕೆಗಳನ್ನು ತಾವೇ ತರಬೇಕು ಎಂದು ಸೂಚಿಸಲಾಗಿದೆ.
Share your comments