1. ಸುದ್ದಿಗಳು

2565 ಸಿವಿಲ್ ಪಿಸಿ ಹುದ್ದೆಗಳ ಸಹಿಷ್ಣುತಾ ಪರೀಕ್ಷೆ ಮತ್ತು ದೈಹಿಕ ಅರ್ಹತಾ ಪರೀಕ್ಷೆ ಮುಂದೂಡಿಕೆ

ಕರ್ನಾಟಕ ಪೋಲಿಸ್ ಇಲಾಖೇಯು 2007 ಸಿವಿಲ್ ಪೊಲೀಸ್ ಕಾನ್ಸಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ ಸಹಿಷ್ಣುತಾ ಪರೀಕ್ಷೆ ಮತ್ತು ದೈಹಿಕ ಅರ್ಹತಾ ಪರೀಕ್ಷೆಯನ್ನು ಮುಂದೂಡಿದೆ. ಈ ಕುರಿತು ಬೆಂಗಳೂರು ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಫ್ಯಾಕ್ಸ್ ಸಂದೇಶದ ಮೂಲಕ ವಿವಿಧ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಿಗೆ ತಿಳಿಸಿದ್ದಾರೆ.

ಕರ್ನಾಟಕ ಪೊಲೀಸ್ ಇಲಾಖೇಯು 2007 ನಾನ್ ಹೈದರಾಬಾದ್ ಕರ್ನಾಟಕ ಮತ್ತು 558 ಹೈದರಾಬಾದ್ ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗೆ ಕಳೆದ ಮೇ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು. ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್(ಪುರುಷ ಮತ್ತು ಮಹಿಳಾ) (2007+558) ಹುದ್ದೆಗಳ ಭರ್ತಿಗಾಗಿ ದಿನಾಂಕ 20-09-2020 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು.

ಓಟ್ಟು 2565 ಸಿವಿಲ್ ಪಿಸಿ ಹುದ್ದೆಗಳಿಗೆ ನಿಯಮಾನುಸಾರ 1:5 ಅನುಪಾತದಂತೆ ನೀಡಲಾಗುವ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಪಿಎಸ್ಟಿ/ಇಟಿ ಪರೀಕ್ಷೆಯನ್ನು ನಡೆಸಲು ದಿನಾಂಕ ನಿಗದಿಗೊಳಿಸಲಾಗಿತ್ತು.ಆದರೆ ಆಡಳಿತಾತ್ಮಕ ಕಾರಣಗಳಿಂದ ಈ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ.

ಆದ್ದರಿಂದ ವಿವಿಧ ಘಟಕದಲ್ಲಿ ನಿಗದಿಪಡಿಸಲಾಗಿದ್ದ ದಿನಾಂಕಗಳಂದು ಪಿಎಸ್‍ಟಿ/ಇಟಿ ಪರೀಕ್ಷೆಯನ್ನು ನಡೆಸದಿರುವಂತೆ ಮತ್ತು ಮುಂದಿನ ಆದೇಶದವರೆಗೂ ಸದರಿ ಪರೀಕ್ಷೆಗಳನ್ನು ಮುಂದೂಡುವಂತೆ ಹಾಗೂ ಪರೀಕ್ಷೆ ಮುಂದೂಡಿದ ಕುರಿತ ವಿಷಯವನ್ನು ಅಭ್ಯರ್ಥಿಗಳಿಗೆ ಮೊಬೈಲ್ ಸಂದೇಶವನ್ನು ಕಳುಹಿಸಲು ಪೊಲೀಸ್ ಅಧೀಕ್ಷಕರುಗಳಿಗೆ ತಿಳಿಸಲಾಗಿದೆ.

ಪೊಲೀಸ್ ಇಲಾಖೆಯು ಮೊನ್ನೆಯಷ್ಟೆ ಸಹಿಷ್ಣುತಾ ಪರೀಕ್ಷೆ ಮತ್ತು ದೈಹಿಕ ಅರ್ಹತಾ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಪ್ರಕಟಿಸಲಾಗಿತ್ತು. . ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್(ಪುರುಷ ಮತ್ತು ಮಹಿಳಾ) (2007+558) ಹದ್ದೆಗಳ ಭರ್ತಿಗಾಗಿ ದಿನಾಂಕ 20-09-2020 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು.ಪ್ರಸ್ತುತ ಅಭ್ಯರ್ಥಿಗಳಿಗೆ ಇಟಿ, ಪಿಎಸ್‍ಟಿ ಪರೀಕ್ಷೆಯನ್ನು ನಡೆಸಲು ದಿನಾಂಕ ನಿಗದಿಗೊಳಿಸಿ, ಪರೀಕ್ಷೆ ಆರಂಭವಾಗಲು ಎರಡು ದಿನ ಬಾಕಿ ಇರುವ ವೇಳೆ ಮುಂದೂಡಿದೆ.

Published On: 10 November 2020, 06:03 PM English Summary: ksp extended civil police et pst exam

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.