1. ಸುದ್ದಿಗಳು

ನೂತನ ICAR ಮಹಾ ನಿರ್ದೇಶಕರನ್ನು ಭೇಟಿ ಮಾಡಿ ಶುಭ ಕೋರಿದ ಕೃಷಿ ಜಾಗರಣ ತಂಡ

Maltesh
Maltesh
Krishi jagran team met Dr Himanshu Pathak, DG- ICAR

ಇತ್ತೀಚಿಗೆ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ (DARE, Secretary) ಹಾಗೂ  ಭಾರತೀಯ ಕೃಷಿ ಸಂಶೋಧನಾ ಮಂಡಳಿಯ  (Indian Council of Agriculture Research) ಪ್ರಧಾನ ನಿರ್ದೇಶಕರಾಗಿ (DG) ನೇಮಕಗೊಂಡ ಹಿರಿಯ ವಿಜ್ಞಾನಿ ಹಿಮಾಂಶು ಪಾಠಕ್ ( Himanshu Pathak )  ಅವರನ್ನು ಕೃಷಿ ಜಾಗರಣ ತಂಡ ಇಂದು ಭೇಟಿ ಮಾಡಿ ಶುಭ ಹಾರೈಸಿತು.

Krishi jagran team met Dr Himanshu Pathak, DG- ICAR

ನವದೆಹಲಿಯ ಕೃಷಿ ಭವನದಲ್ಲಿ ಅವರನ್ನು ಭೇಟಿ ಮಾಡಿದ ಕೃಷಿ ಜಾಗರಣದ ಸಂಸ್ಥಾಪಕರು ಹಾಗೂ ಪ್ರಧಾನ ಸಂಪಾದಕರಾದ ಎಂ.ಸಿ.ಡೊಮಿನಿಕ್‌. ಸಂಸ್ಥೆಯ ನಿರ್ದೇಶಕಿ ಸೈನಿ ಡೊಮಿನಿಕ್‌, ಸೇರಿದಂತೆ ಕೃಷಿ ಜಾಗರಣದ ಸಿಒಒ ಡಾ.ಪಿ.ಕೆ.ಪಂತ್‌, ಹಾಗೂ ಕಾರ್ಪೋರೇಟ್‌ ವ್ಯವಹಾರಗಳ ಉಪಾಧ್ಯಕ್ಷ ಪಿ ಎಸ್‌ ಸೈನಿ, ಹಿರಿಯ ಕಾಂಟೆಂಟ್‌  ಮ್ಯಾನೇಜರ್‌ ಪಂಕಜ್‌ ಖನ್ನಾ ಸೇರಿದಂತೆ ಕೃಷಿ ಜಾಗರಣದ ತಂಡ ನೂತನವಾಗಿ ನೇಮಕಗೊಂಡ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕರಾಗಿ ಹಿರಿಯ ವಿಜ್ಞಾನಿ ಹಿಮಾಂಶು ಪಾಠಕ್ ನೇಮಕ

Krishi jagran team met Dr Himanshu Pathak, DG- ICAR

ಹಿಮಾಂಶು ಪಾಠಕ್ ಅವರ ಜೊತೆ ಕೆಲ ಹೊತ್ತು ಎಂ.ಸಿ.ಡೊಮಿನಿಕ್‌ ಸಹಿತ ಕೃಷಿ ಜಾಗರಣ ತಂಡ ಪ್ರಸ್ತುತ ವಿಚಾರಗಳ ಕುರಿತು ಮಾತುಕತೆ ನಡೆಸಲಾಯಿತು. ಈ ವೇಳೆ ಅವರು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಈಗಾಗಲೇ ರೂಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು.

ಆ ಮೂಲಕ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಜೊತೆಗೆ ಅವುಗಳನ್ನು ಶೀಘ್ರದಲ್ಲೆ ತಿಳಿಸಲಾಗುವುದು ಎಂದರು. ಜೊತೆಗೆ 25 ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೃಷಿ ಜಾಗರಣ ಮಾದ್ಯಮ ಸಂಸ್ಥೆಯ ಕಾರ್ಯವನ್ನು ಮೆಚ್ಚಿಸ ಅವರು ಈಡೀ ಕೃಷಿ ಜಾಗರಣ ಪರಿವಾರಕ್ಕೆ ಶುಭಕೋರಿದರು.

ಇನ್ನು ಈ ಭೇಟಿ ವೇಳೆ ಕೃಷಿ ಜಾಗರಣದ ಮಾರುಕಟ್ಟೆ ವಿಭಾಗದ ಜಿಎಂ ಮೇಘಾ ಶರ್ಮಾ, ಹಿರಿಯ ಪತ್ರಕರ್ತೆ ಜೋತಿ ಶರ್ಮಾ ಉಪಸ್ಥಿತರಿದ್ದರು.

Krishi jagran team met Dr Himanshu Pathak, DG- ICAR
Published On: 01 August 2022, 04:21 PM English Summary: Krishi jagran team met Dr Himanshu Pathak, DG- ICAR

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.