1. ಸುದ್ದಿಗಳು

ಸುವರ್ಣಾವಕಾಶ..ರೈತರೂ ಕೂಡ ಪತ್ರಕರ್ತರಾಗಲು ಕೃಷಿ ಜಾಗರಣ ನೀಡ್ತಿದೆ ಅದ್ಭುತ ಅವಕಾಶ!

Maltesh
Maltesh
Krishi Jagran Initiative Farmer the journalist

ಕೃಷಿ ಕುರಿತು ನಾವೆಲ್ಲ ಸಾಕಷ್ಟು ಮಾತಾಡಿ ಆಗಿದೆ. ಈಗ ಜಗತ್ತು ಅನ್ನದಾತ ರೈತನ ಮಾತು ಕೇಳುವಂತೆ ಮಾಡಲು ನಮ್ಮ ಕೃಷಿ ಜಾಗರಣ ತಂಡ ಮುಂದಾಗಿದೆ. ಹೌದು, ನೀವು ರೈತರಾಗಿದ್ದರೆ, ಕೃಷಿ ಕುರಿತಾದ ಆಸಕ್ತಿ ಇದ್ದರೆ ಸಾಕು. ನಾವು ನಿಮಗೆ ವೇದಿಕೆ ನೀಡುತ್ತೇವೆ. ನೀವು ಕೂಡ ನಿಮ್ಮ ಸುತ್ತಮುತ್ತಲಿನ ಕೃಷಿ ಚಟುವಟಿಕೆಗಳ ಮಾಹಿತಿ ನೀಡಬಹುದು.

ರೈತರನ್ನು ಪತ್ರಕರ್ತರನ್ನಾಗಿ ಮಾಡುವ ಆಲೋಚನೆಯಲ್ಲಿ ನಾವಿದ್ದೇವೆ. ಏನಿದು ಅಂತೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಹೊಸತನವನ್ನು ಪರಿಚಯಿಸಲು ಕೃಷಿ ಜಾಗರಣ ಯಾವಾಗಲೂ ಸಕ್ರಿಯವಾಗಿದೆ. ಈ ವರ್ಷ ಕೃಷಿ ಜಾಗರಣ ತನ್ನ 25ನೇ ವರ್ಷದ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ಆಚರಿಸಿ ನಿಮ್ಮ ಮುಂದಿದೆ.

ಗ್ರಾಮೀಣ ಜನತೆಯನ್ನು ಸಂಪರ್ಕಿಸಿ ಅವರೊಂದಿಗೆ ಒಡನಾಡಿ ಇತ್ತೀಚಿನ ಮಾಹಿತಿಯನ್ನು ರೈತ ಸಮುದಾಯಕ್ಕೆ ತಲುಪುವಂತೆ ಮಾಡಲು ಕೃಷಿ ಜಾಗರಣವು ಮುದ್ರಣದ ಮೂಲಕ ಮಾತ್ರವಲ್ಲದೆ ಡಿಜಿಟಲ್‌ ಮಾಧ್ಯಮದ ಮೂಲಕವು ದೇಶದ ತುಂಬೆಲ್ಲ ತನ್ನ ವ್ಯಾಪ್ತಿಯನ್ನು ಹರಡಿದೆ.

ವಿವಿಧ ವಿನೂತನ ಆಲೋಚನೆಗಳ ಮುಂದುವರಿಕೆಯಾಗಿ ಕೃಷಿ ಜಾಗರಣ ಈಗ ಹೊಸ ಉಪಕ್ರಮವನ್ನು ಪ್ರಾರಂಭಿಸುತ್ತಿದೆ. ರೈತರು ಪತ್ರಕರ್ತರಾಗುವ ವಿನೂತನ ದೂರದೃಷ್ಟಿಯೊಂದಿಗೆ ರೈತ ಪತ್ರಕರ್ತ ( Farmer The Journalist ) ಎಂಬ ಕಲ್ಪನೆಯನ್ನು ಹೊತ್ತಿದೆ.

ಏನಿದು "ರೈತ ಪತ್ರಕರ್ತ" (Farmer The Journalist)?

ಪತ್ರಿಕೋದ್ಯಮದಲ್ಲಿ ವೃತ್ತಿಯನ್ನು ಹುಡುಕುವ ಉದ್ದೇಶ ಹೊಂದಿರುವ ರೈತರ ಕೌಶಲ್ಯಗಳನ್ನು ಪ್ರದರ್ಶಿಸಲು ಇಲ್ಲಿದೆ ಅವಕಾಶ. "ಫಾರ್ಮರ್‌ ದಿ ಜರ್ನಲಿಸ್ಟ್‌" ಅಂದರೆ ರೈತ ಪತ್ರಕರ್ತ.

ಕೃಷಿ ಕುರಿತು ನಾವೆಲ್ಲ ಸಾಕಷ್ಟು ಮಾತಾಡಿ ಆಗಿದೆ. ಈಗ ಜಗತ್ತು ಅನ್ನದಾತ ರೈತನ ಮಾತು ಕೇಳುವಂತೆ ಮಾಡಲು ನಮ್ಮ ಕೃಷಿ ಜಾಗರಣ ತಂಡ ಮುಂದಾಗಿದೆ. 

ಹೌದು ನೀವು ರೈತರಾಗಿದ್ದು, ಕೃಷಿಯನ್ನು ಮಾಡುತ್ತಿದ್ದರೆ, ಕೃಷಿ ಕುರಿತಾದ ಆಸಕ್ತಿ ಇದ್ದರೆ ಸಾಕು. ನಾವು ನಿಮಗೆ ವೇದಿಕೆ ನೀಡುತ್ತೇವೆ. ನೀವು ಕೂಡ ನಿಮ್ಮ ಸುತ್ತಮುತ್ತಲಿನ ಕೃಷಿ ಚಟುವಟಿಕೆಗಳ ಮಾಹಿತಿ ನೀಡಬಹುದು.

* ಇತ್ತೀಚಿನ ಕೃಷಿಗೆ ಸಂಬಂಧಿಸಿದ ಬಗ್ಗೆ ಜಗತ್ತಿಗೆ ಅರಿವು ಮೂಡಿಸುವುದು

* ದೇಶದ ಮೂಲೆ ಮೂಲೆಯಲ್ಲಿರುವ ಕೃಷಿ ಮತ್ತು ರೈತ ಸಮುದಾಯದಿಂದ ಮಾಹಿತಿ ಪಡೆಯುವುದು

* ಕೃಷಿ ಕ್ಷೇತ್ರದಲ್ಲಿ ನಡೆಯುವ ಆಸಕ್ತದಾಯಕ ಚಟುವಟಿಕೆಗಳ ಆನ್ ಫೀಲ್ಡ್ ವೀಡಿಯೊಗಳು ಡಿಜಿಟಲ್‌ ವೇದಿಕೆಯಲ್ಲಿ ಪ್ರಸ್ತುತ ಪಡಿಸುವುದು.

Krishi Jagran Initiative Farmer the journalist

ನಮಗೆ ಬೇಕಾಗಿರುವುದು:

1. ಕೃಷಿಯ ಕುರಿತು ಇತ್ತೀಚಿನ ಮಾಹಿತಿಯನ್ನು ತೋರಿಸುವ ಉತ್ತಮ ಗುಣಮಟ್ಟದ ವೀಡಿಯೊ

2. ನೀವು ಹಂಚಿಕೊಳ್ಳುವ ವೀಡಿಯೊದ ಸಮಯವು  3-5 ನಿಮಿಷಗಳಾಗಿರಬೇಕು ಮತ್ತು ಅದನ್ನು ಪ್ರತ್ಯೇಕವಾಗಿ ಚಿತ್ರಿಕರಿಸಿರಬೇಕು.

3. ನೀವು ವೀಡಿಯೊವನ್ನು ನಮಗೆ ಹಂಚಿಕೊಂಡ ನಂತರ, ಅದನ್ನು ಕೃಷಿ ಜಾಗರಣ ಆ ವೀಡಿಯೊವನ್ನು ಬಳಸುವ ಏಕೈಕ ಅಧಿಕಾರವನ್ನು ಹೊಂದಿರುತ್ತದೆ.

ವಿಶೇಷ ಸೂಚನೆ:

ನಾವು ರೈತರಿಂದ ಯಾವ ರೀತಿಯ ವೀಡಿಯೊಗಳನ್ನು ಬಯಸುತ್ತೇವೆ ಎಂದರೆ - ಕೃಷಿ ಮಾಹಿತಿ, ಕೃಷಿ ಸುದ್ದಿ , ಯಶೋಗಾಥೆ, ಅವರು ಪತ್ರಕರ್ತರಾಗಿ ಇನ್ನೊಬ್ಬ ರೈತರಿಂದ ಸಂದರ್ಶನಗಳನ್ನು ತೆಗೆದುಕೊಳ್ಳಬಹುದು - FTJ ತಂಡದಿಂದ ಅನುಮೋದಿಸಿದ ನಂತರ ನಾವು ಪ್ರತಿ ವೀಡಿಯೊಗೆ 100Rs ನೀಡುತ್ತೇವೆ.

ವಿವರಗಳಲ್ಲಿ ನಮಗೆ ಏನು ಸಲ್ಲಿಸಬೇಕು .?

ಪೂರ್ಣ ಹೆಸರು- 

ರಾಜ್ಯ-

ಜಿಲ್ಲೆ-

ಇಮೇಲ್ ಐಡಿ-

ನಿಮ್ಮ ಸಂಪೂರ್ಣ ವಿಳಾಸ ಹಾಗೂ ಒಂದು ಫೋಟೋ-

"ಫಾರ್ಮರ್ ದಿ ಜರ್ನಲಿಸ್ಟ್‌" ರೈತರಿಗೆ ಏನು ಪ್ರಯೋಜನ ?

* ನೀವು ಸಹ ಕೃಷಿ ಪತ್ರಕರ್ತರಾಗಬಹುದು

* ನೀವು ಕಳುಹಿಸುವ ವಿಡಿಯೋಗಳಿಗೆ ಸೂಕ್ತ ಸಂಭಾವನೆ ಇದೆ

* ಸಾಮಾಜಿಕ ಮಾಧ್ಯಮದಲ್ಲಿ ನೀವು ನಿಮ್ಮ ಸ್ವಯಂ ಪ್ರಚಾರ ಮಾಡಬಹುದು

* ನೀವು "ರೈತ ಪತ್ರಕರ್ತರಾಗಿ ಆಯ್ಕೆಯಾದ ನಂತರ ನಿಮಗೆ ಕೃಷಿ ಜಾಗರಣದಿಂದ ಐಡಿ ಕಾರ್ಡ್‌, ಪ್ರಮಾಣಪತ್ರ ನೀಡಲಾಗುವುದು

ಸ್ವೀಕಾರವಾದ ವಿಡಿಯೋ-ಸುದ್ದಿಗಳ ಸಂಭಾವನೆ ವಿವರ

30 ವಿಡಿಯೋ/ 30 ವಿಶೇಷ ವರದಿ : 5000 ರೂಪಾಯಿ

20 ವಿಡಿಯೋ/ 20 ವಿಶೇಷ ವರದಿ : 2500 ರೂಪಾಯಿ

10 ವಿಡಿಯೋ/ 10 ವಿಶೇಷ ವರದಿ : 1000 ರೂಪಾಯಿ

ಗಮನಿಸಿ: ಈ ಮೇಲಿನ ಸಂಭಾವನೆಯೂ ನಿಮ್ಮ ವಿಡಿಯೋ-ಸುದ್ದಿಗಳು ಒಪ್ಪಿತವಾದವುಗಳಿಗೆ ಮಾತ್ರ.

Published On: 26 July 2022, 04:31 PM English Summary: Krishi Jagran Initiative Farmer the journalist

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.