1. ಸುದ್ದಿಗಳು

ರಾಜ್ಯದಲ್ಲಿ ಯೂರಿಯಾ ಕೊರತೆಯಾಗಲ್ಲ- ಕೃಷಿ ಸಚಿವ ಬಿ.ಸಿ. ಪಾಟೀಲ್

ಪ್ರಸಕ್ತ ವರ್ಷ ರಸಗೊಬ್ಬರದ (fertilizer) ಕೊರತೆಯಾಗುವುದಿಲ್ಲ. ಕೇಂದ್ರದಿಂದ 51600 ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿರುವ ಹಿನ್ನೆಲೆಯಲ್ಲಿ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅತೀಯಾದ ಬಳಕೆಯಿಂದಾಗಿ ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಯೂರಿಯಾ ಕೊರತೆಯಾಗಿರಬಹುದು. ಆದರೆ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ಯಾವುದೇ ಕಾರಣಕ್ಕೂ ಹೆಚ್ಚಿನ ಬೆಲೆ ರಸಗೊಬ್ಬರ ಮಾರಾಟವಾಗದಂತೆ ಪರಿವೀಕ್ಷಕರು ಕ್ರಮಕೈಗೊಳ್ಳುತ್ತಿದ್ದಾರೆ. ರಾಜ್ಯದ ಹಲವೆಡೆ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಚಿಲ್ಲರೆ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ 40ಕ್ಕೂ ಹೆಚ್ಚು  ಚಿಲ್ಲರೆ ಮಾರಾಟಗಾರರ ಪರವಾನಗಿ ರದ್ದುಪಡಿಸಲಾಗಿದೆ ಎಂದರು.

ಪ್ರಸಕ್ತ ಮುಂಗಾರುವಿ(Monsoon)ನಲ್ಲಿ  ಭರಪೂರ ಮಳೆಯಿಂದಾಗಿ  73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಆಗಸ್ಟ್ 19ರವರೆಗೆ 68.26 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಹೀಗಾಗಿ ಏಪ್ರೀಲ್ 1 ರಿಂದ ಆಗಸ್ಟ್ 20ರವರೆಗೆ 6.78 ಲಕ್ಷ ಟನ್ ಯೂರಿಯಾ ಗೊಬ್ಬರಕ್ಕೆ ಬೇಡಿಕೆಯಿತ್ತು. ಆದರೆ 4.88 ಲಕ್ಷ ಟನ್ ಪೂರೈಕೆಯಾಗಿದೆ. ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲಿ 1.77 ಲಕ್ಷ ಟನ್ ಪ್ರಮಾಣದ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಈವರೆಗೆ 1.14 ಲಕ್ಷ ಟನ್ ಮಾತ್ರ ಸರಬರಾಜು ಆಗಿದೆ, ಇನ್ನೂ 62,806 ಟನ್ ಪೂರೈಕೆಯಾಗಿಲ್ಲ. ಕೇಂದ್ರದಿಂದ 51600 ಟನ್ ಗೊಬ್ಬರ ಕರ್ನಾಟಕಕ್ಕೆ ಪೂರೈಸುವುದಾಗಿ ಕೇಂದ್ರ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ ಎಂದರು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.