News

 ಈ ಯೋಜನೆಯಲ್ಲಿ ಕುಲಕಸುಬುದಾರರಿಗೆ ಸಿಗಲಿದೆ ಶೇ.4 ಬಡ್ಡಿದರದಲ್ಲಿ ಸಾಲ

01 May, 2022 3:37 PM IST By: Maltesh
ಸಾಂದರ್ಭಿಕ ಚಿತ್ರ

ಶ್ರಮ ಶಕ್ತಿ ಯೋಜನೆ. ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕುಲಕಸುಬುದಾರರಿಗೆ ತರಬೇತಿ ನೀಡಿ, (2021-22 ನೇ ಸಾಲಿಗೆ ಮಾತ್ರ) ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ, ನಿಗಮದಿಂದ ಶೇ. 4 ರ ಬಡ್ಡಿದರದಲ್ಲಿ ರೂ. 50,000/-ದವರೆಗೆ ಸಾಲಸೌಲಭ್ಯವನ್ನು ಕಲ್ಪಿಸಲಾಗುತ್ತದೆ.

#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!

Income Tax ಇಲಾಖೆಯಿಂದ Good News: ಈಗ E-PAN ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು!

ಇದರಲ್ಲಿ, ಶೇ. 50ರಷ್ಟು ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ, ಉಳಿದ ಶೇ. 50ರಷ್ಟು ಹಣವನ್ನು ‘ಬ್ಯಾಕ್‌ಎಂಡ್ ಸಹಾಯಧನ’ವನ್ನಾಗಿ ಪರಿಗಣಿಸಲಾಗುತ್ತದೆ. ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲರಾದಲ್ಲಿ ಶೇ. 50ರಷ್ಟು ಬ್ಯಾಕ್‌ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.

ಅರ್ಹತೆಗಳು

  1. ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
  2. ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  3. ಅರ್ಜಿದಾರರ ವಯಸ್ಸು 18 ರಿಂದ 45 ವರ್ಷಗಳ ನಡುವೆ ಇರಬೇಕು.
  4. ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ. 4,50,000/- ಗಿಂತ ಕಡಿಮೆ ಇರಬೇಕು.
  5. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿರಬಾರದು.
  6. ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ/ಅವಳ ಕುಟುಂಬದ ಸದಸ್ಯರು ಸರ್ಕಾರದ / ನಿಗಮದ ಯಾವುದೇ ಇತರ ಯೋಜನೆಯಡಿಯಲ್ಲಿ(ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು.

ರೈತರಿಗೆ ಗುಡ್‌ ನ್ಯೂಸ್‌ : ಸರ್ಕಾರದಿಂದ ಪಶು ಅಂಬುಲೆನ್ಸ್ ಸೇವೆ ಆರಂಭ! ನಿಮ್ಮ ಮನೆ ಬಾಗಿಲಿಗೆ ಬರಲಿದೆ ಅಂಬುಲೆನ್ಸ್‌

  1. ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
  2. ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
  3. ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
  4. ಬ್ಯಾಂಕ್ ಪಾಸ್ ಬುಕ್ ಪ್ರತಿ
  5. ಸ್ವಯಂ ಘೋಷಣೆ ಪತ್ರ
  6. ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ

ಅರಿವು ವಿದ್ಯಾಭ್ಯಾಸ ಸಾಲ ಯೋಜನೆ

ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET ಮುಖಾಂತರ) ಎಂ.ಬಿ.ಬಿ.ಎಸ್/ ಬಿ.ಡಿ.ಎಸ್/ ಆಯುಷ್/ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್/ಬ್ಯಾಚುಲರ್ ಆಫ್ ಇಂಜಿನಿಯರಿಂಗ್/ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್ ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಾಲವನ್ನು ನೀಡಲಾಗುತ್ತದೆ.

ಈ Bankನಲ್ಲಿ ಫಿಕ್ಸ್ ಡಿಪಾಸಿಟ್ ಮಾಡಿ ಅತಿ ಹೆಚ್ಚು ಬಡ್ಡಿ ಪಡೆಯಿರಿ!

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

ಅರ್ಹತೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET ಮುಖಾಂತರ) ಎಂ.ಬಿ.ಬಿ.ಎಸ್ ಕೋರ್ಸ್ ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 2,00,000/- ವನ್ನು ನೀಡಲಾಗುತ್ತದೆ (ಹೊಸ ಮತ್ತು ನವೀಕರಣ ವಿದ್ಯಾರ್ಥಿಗಳಿಗೆ).

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET ಮುಖಾಂತರ) ಬಿ.ಡಿ.ಎಸ್ ಹಾಗೂ ಆಯುಷ್ ಪದವಿ ಕೋರ್ಸ್ ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 30,000/- ಗಳು (ಹೊಸ ಮತ್ತು ನವೀಕರಣ ವಿದ್ಯಾರ್ಥಿಗಳಿಗೆ).

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET ಮುಖಾಂತರ) ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್/ಬ್ಯಾಚುಲರ್ ಆಫ್ ಇಂಜಿನಿಯರಿಂಗ್/ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್ ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 30,000/- ಗಳು (ಹೊಸ ಮತ್ತು ನವೀಕರಣ ವಿದ್ಯಾರ್ಥಿಗಳಿಗೆ).

ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ. 8,00,000/- ಗಿಂತ ಕಡಿಮೆ ಇರಬೇಕು.. ವಿದ್ಯಾರ್ಥಿಯು ಪಡೆದ ಸಾಲವನ್ನು ಕೋರ್ಸ್ ಮುಗಿದ 1 ವರ್ಷದ ನಂತರ 48 ತಿಂಗಳ ಅವಧಿಯಲ್ಲಿ 2% ಬಡ್ಡಿದರದೊಂದಿಗೆ ಮರುಪಾವತಿ ಮಾಡಬೇಕು.

ಮೀನುಗಾರರ ಆದಾಯ ಹೆಚ್ಚಿಸಲು Pm ಮತ್ಸ್ಯ ಸಂಪದ ಯೋಜನೆ! ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಿರಿ!

ಕಡಿಮೆ ವೆಚ್ಚ ಹೆಚ್ಚು ಇಳುವರಿ; ಕ್ಯಾಸ್ಟರ್ ಬೆಳೆದು ಲಾಭ ಪಡೆಯಿರಿ!

ದಾಖಲೆಗಳು

ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ

ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ

ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)

CET ಪ್ರವೇಶ ಪತ್ರ

NEET ಪ್ರವೇಶ ಪತ್ರ

SSLC/10 ನೇ ತರಗತಿಯ ಅಂಕಪಟ್ಟಿ

ಡಿಪ್ಲೋಮ/ಪಿ.ಯು.ಸಿ ಅಂಕಪಟ್ಟಿ

ಇಂಡೆಮ್ನಿಟೀ (ನಷ್ಟ ಪರಿಹಾರ) ಬಾಂಡ್

ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ

ಪೋಷಕರ ಸ್ವಯಂ ಘೋಷಣೆ ಪತ್ರ

Papaya! (ಪಪ್ಪಾಯಿ) Dengue ನಿಂದ ಮುಕ್ತಿ!

ಮಜ್ಜಿಗೆಗಿಂತ ಮತ್ತೊಂದು ಮದ್ದು ಬೇಕೆ..? ಬೆರಗುಗೊಳಿಸುತ್ತೆ ಇದರ ಪ್ರಯೋಜನಗಳು