1. ಸುದ್ದಿಗಳು

ಕೋವಿಡ್ ಅಬ್ಬರದ ನಡುವೆಯೂ ರಾಜ್ಯದಲ್ಲಿ 13,487 ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ

ಕೊರೋನಾ ಎರಡನೇ ಎಲರೆಯ ಅಬ್ಬರದ ಮಧ್ಯೆಯೂ ರಾಜ್ಯಕ್ಕೆ 13,487.11 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಹರಿದುಬಂದಿದೆ. ಹೌದು, ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಯು ಬುಧವಾರ ರಾಜ್ಯದಲ್ಲಿ 9 ಹೊಸ ಯೋಜನೆಗಳಿಗೆ ಹಾಗೂ ಹೆಚ್ಚುವರಿ ಬಂಡವಾಳ ಹೂಡಿಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.  ಇದರಿಂದ ರಾಜ್ಯದಲ್ಲಿ 6256 ಜನರಿಗೆ ಉದ್ಯೋಗಾವಕಾಶ ಲಭ್ಯವಾಗುವ ಸಾದ್ಯತೆಗಳಿವೆ.

 ಒಂಬತ್ತು ಯೋಜನೆಗಳ ಪೈಕಿ ಬೆಂಗಳೂರು ನಗರದಲ್ಲಿ 4042 .45 ಕೋಟಿ ಮೊತ್ತದ ಯೋಜನೆ ಇದರಿಂದ 3ಸಾವಿರಕ್ಕೂ ಹೆಚ್ಚು ಉದ್ಯೋಗ ಲಭಿಸಲಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಮೂರು ಯೋಜನೆಗೆ 3425 ಕೋಟಿ ರೂಪಾಯಿ ಹೂಡಿಕೆ ನಿರೀಕ್ಷೆ ಹೊಂದಲಾಗಿದೆ ಇದರಿಂದ 1196 ಮಂದಿಗೆ ಉದ್ಯೋಗ, ಬಳ್ಳಾರಿ ಜಿಲ್ಲೆಯಲ್ಲಿ ಎರಡು ಯೋಜನೆಗಳಿಗೆ 1,204 ಕೋಟಿ ರೂಪಾಯಿ, ಯೋಜನೆಯಿಂದ 32 ಮಂದಿಗೆ ಉದ್ಯೋಗ ದೊರಕಲಿದೆ.

ಚಿತ್ರದುರ್ಗದಲ್ಲಿ 550 ಕೋಟಿ ಪ್ರಾಮುಖ್ಯದ ಒಂದು ಯೋಜನೆಗೆ ಅನುಮತಿ ನೀಡಲಾಗಿದೆ. ಚಾಮರಾಜನಗರದಲ್ಲಿ 731 ಕೋಟಿ ರೂಪಾಯಿ, ಚಿಕ್ಕಬಳ್ಳಾಪುರದಲ್ಲಿ ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆ ಹಾಗೂ ಮಂಗಳೂರಿನಲ್ಲಿ 2, 527 ಕೋಟಿ ರೂಪಾಯಿ ಮತ್ತು ಯೋಜನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆ ಅನುಮತಿ ನೀಡಿದೆ.

ಆಮ್ಲಜನಕ ಘಟಕ ,ಸಿಮೆಂಟ್, ಪೆಟ್ರೋಲಿಯಂ ಉತ್ಪನ್ನ, ರಾಸಾಯನಿಕ ಮತ್ತು ಇಂಜಿನಿಯರಿಂಗ್ ಉಪಕರಣ, ಸಾಫ್ಟ್ವೇರ್ ಟೌನ್ಶಿಪ್ ಸೌರಶಕ್ತಿ ಸೇರಿದಂತೆ ಒಟ್ಟು ಒಂಬತ್ತು ಯೋಜನೆಗಳಲ್ಲಿ ಬಂಡವಾಳ ಹೂಡಲು ಮುಖ್ಯಮಂತ್ರಿಗಳ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ

ಸಭೆಯಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ‍ಜಗದೀಶ್‌ ಶೆಟ್ಟರ್‌, ಕೃಷಿ ಇಲಾಖೆ ಸಚಿವರಾದ ಬಿ ಸಿ ಪಾಟೀಲ್, ಕಾರ್ಮಿಕ ಇಲಾಖೆ ಸಚಿವರಾದ ಶಿವರಾಂ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ ಕುಮಾರ್ ಖತ್ರಿ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರ ಎಂ ಡಿ ರೇವಣ್ಣ ಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು

Published On: 13 May 2021, 09:36 AM English Summary: Karnataka government has agreed to investment 13487 crore

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.