1. ಸುದ್ದಿಗಳು

ಸ್ಟ್ರಾಂಗ್‌ ರೂಮ್‌ ಕೀ ಕಳೆದುಕೊಂಡ ಅಧಿಕಾರಿಗಳು..ಬಾಗಿಲು ಒಡೆದು ಮತ ಏಣಿಕೆ ಆರಂಭ

Maltesh
Maltesh
Karnataka election The officials lost the key to the strong room

ರಾಜ್ಯ ವಿಧಾನಸಭೆಗೆ ಮೇ ೧೦ರಂದು ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ರಾಜ್ಯದ 34 ಕೇಂದ್ರಗಳಲ್ಲಿ ಬೆಳಗ್ಗೆ 8 ಆರಂಭವಾಗಿದೆ. ನೀರಿಕ್ಷೆಯಂತೆ ಇಂದೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.

ಇಂದು 8 ಗಂಟೆಗೆ ಆರಂಭವಾದ ಮತ ಏಣಿಕೆಯಲ್ಲಿ ಮೊದಲು  ಅಂಚೆ ಮತಪತ್ರ ಎಣಿಕೆ ಮಾಡಲಾಗುವುದು. ಅವುಗಳ ಏಣಿಕೆ ಮುಗಿದ ತಕ್ಷಣ EVM ಮತಯಂತ್ರಗಳ ಎಣಿಕೆ ಮಾಡಲಾಗುವುದು.  ಇಂದು ಸಂಜೆಯವರೆಗೆ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಫಲಿತಾಂಶ ಹೊರಬೀಳುತ್ತದೆ.

ಇತ್ತ ಮಂಗಳೂರಿನಲ್ಲಿ ಮತ ಏಣಿಕೆ ವೇಳೆ ಎಡವಟ್ಟೊಂಂದು ನಡೆದಿದೆ. ಹೌದು ಸ್ರ್ಟಾಂಗ್‌ ರೂಮ್‌ನ ಬೀಗದ ಕೈಯನ್ನು ಅಧಿಕಾರಿಗಳು ಮಿಸ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೀ ಸಿಗದ ಕಾರ ಮತ ಏಣಿಕೆಗಾಗಿ ಸ್ಟ್ರಾಂಗ್‌ ರೂಮ್‌ನ ಬಾಗಿಲನ್ನು ಒಡೆದು ಮತ ಏಣಿಕೆ ಕಾರ್ಯವನ್ನು ಆರಂಭಿಸುರುವುದಾಗಿ ಮಾಹಿತಿ ಇದೆ. ಈ ಸ್ಟ್ರಾಂಗ್‌ ರೂಮ್‌ನಲ್ಲಿ ಒಟ್ಟು 8 ಕ್ಷೇತ್ರಗಳ EVM  ಗಳನ್ನು ಇಡಲಾಗಿತ್ತು. ಸದ್ಯ ಬಾಗಿಲು ಒಡೆದು ಸುರಕ್ಷಿತವಾಗಿ ಮತ ಏಣಿಕೆಯ ಕಾರ್ಯವನ್ನು ಆರಂಭಿಸಲಾಗಿದೆ.

ಮತ ಎಣಿಕೆಯ ಹಂತ ಹಂತದ ವಿವರಗಳು ಜಾಲತಾಣ ceokarnataka.gov.in  ನಲ್ಲಿ ಲಭ್ಯವಾಗಲಿದೆ. ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಸೆಕ್ಷನ್ ೧೪೪ರ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ.  

Published On: 13 May 2023, 09:33 AM English Summary: Karnataka election The officials lost the key to the strong room

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.