ಕರ್ನಾಟಕ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟೇ ಇದ್ದು, ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಮೇ.10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ರಾಜ್ಯದ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಈ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಜಿದ್ದಿಗೆ ಬಿದ್ದು, ಗೆಲುವಿನ ಅಸ್ತ್ರವನ್ನು ಬಳಸುತ್ತಿವೆ.
ದೇಶದಲ್ಲೇ ಸಂಕಷ್ಟದ ಸ್ಥಿತಿಯಲ್ಲಿರುವ ಕಾಂಗ್ರೆಸ್‌ಗೆ ಕರ್ನಾಟಕದ ಚುನಾವಣೆ ಮಾಡು ಇಲ್ಲವೇ ಮಾಡಿ ಎನ್ನುವ ಸಂಕಷ್ಟಕ್ಕೆ ದೂಡಿದ್ದರೆ,
ಈಗಾಗಲೇ ಪಂಜಾಬ್ ಸೇರಿದಂತೆ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಸೋಲು ಅನುಭವಿಸಿರುವ ಬಿಜೆಪಿಗೆ ಕರ್ನಾಟಕವನ್ನು ಈ ಬಾರಿ ಬಹುಮತಗಳೊಂದಿಗೆ ಗೆಲ್ಲುವ ಸವಾಲು ಇದೆ.
ಈ ನಿಟ್ಟಿನಲ್ಲಿ ಹಲವು ಹೊಸ ತಂತ್ರಗಳನ್ನು ಬಳಸಲಾಗುತ್ತಿದೆ. ಇದೀಗ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಲಿಕಾರ್ಜುನ್ ಖರ್ಗೆ ಅವರು
ಕರ್ನಾಟಕ ವಿಧಾನಸಭೆ ಚುನಾವಣೆಗೆ ತೆಲಂಗಾಣದ ಕಾಂಗ್ರೆಸ್ ಪಕ್ಷದ ಐವರು ನಾಯಕರನ್ನು ವಿಧಾನಸಭೆ ಮಟ್ಟದ ವೀಕ್ಷಕರನ್ನಾಗಿ ನೇಮಿಸಿದ್ದಾರೆ.
ಎಐಸಿಸಿ ಕಾರ್ಯದರ್ಶಿ ಎಸ್.ಎ ಸಂಪತ್ ಕುಮಾರ್, ಶಾಸಕಿ ಡಿ ಅನಸೂಯ (ಸೀತಕ್ಕ), ಟಿಪಿಸಿಸಿ ಹಿರಿಯ ಉಪಾಧ್ಯಕ್ಷ ಮಲ್ಲು ರವಿ,
ಕಾಂಗ್ರೆಸ್ ಆದಿವಾಸಿ ಸೆಲ್ ರಾಷ್ಟ್ರೀಯ ಉಪಾಧ್ಯಕ್ಷ ಬೆಳ್ಳಯ್ಯ ನಾಯ್ಕ್ ಮತ್ತು ಟಿಪಿಸಿಸಿ ಉಪಾಧ್ಯಕ್ಷ ಒಬೈದುಲ್ಲಾ ಕೊತ್ವಾಲ್ ಐವರು ನಾಯಕರಾಗಿದ್ದಾರೆ.
ಕರ್ನಾಟಕದ ಚುನಾವಣೆಯ ಮೇಲ್ವಿಚಾರಣೆಗಾಗಿ ವಿವಿಧ ರಾಜ್ಯಗಳಿಂದ ನೇಮಕಗೊಂಡ 71 ವೀಕ್ಷಕರಲ್ಲಿ ಅವರು ಭಾಗವಾಗಿದ್ದಾರೆ.
ಎ ರೇವಂತ್ ರೆಡ್ಡಿ, ಎನ್ ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಮತ್ತು ಮಧು ಯಾಶ್ಕಿ ಗೌಡ್ ಅವರಂತಹ ತೆಲಂಗಾಣ ಕಾಂಗ್ರೆಸ್
ಉನ್ನತ ನಾಯಕರು ತೆಲುಗು ಮಾತನಾಡುವ ಜನರ ಗಣನೀಯ ಜನಸಂಖ್ಯೆಯನ್ನು ಹೊಂದಿರುವ
ಕರ್ನಾಟಕ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಚುನಾವಣಾ ಪ್ರಚಾರಕ್ಕಾಗಿ ರೇವಂತ್ ರೆಡ್ಡಿ ಅವರ ಕರ್ನಾಟಕ ರಾಜ್ಯ ಪ್ರವಾಸವು ಏಪ್ರಿಲ್ 20 ರಂದು ಪ್ರಾರಂಭವಾಗುವ ಸಾಧ್ಯತೆ ಇದೆ.
ಅಲ್ಲದೇ 10 ದಿನಗಳವರೆಗೆ ಮುಂದುವರಿಯುತ್ತದೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ
ಫಲಿತಾಂಶವು ಹಳೆಯ ಪಕ್ಷದ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತೆಲಂಗಾಣ ಕಾಂಗ್ರೆಸ್ ನಿರೀಕ್ಷಿಸುತ್ತಿದೆ.
ಮುಂದಿನ ವರ್ಷ ತೆಲಂಗಾಣದಲ್ಲಿ ಚುನಾವಣೆ
ಮುಂದಿನ ವರ್ಷ ತೆಲಂಗಾಣದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಕರ್ನಾಟಕ ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ತೆಲಂಗಾಣದ ಮೇಲೆ ಹೆಚ್ಚು ಪರಿಣಾಮ ಬೀರದಿದ್ದರೂ,
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣವಂತೂ ಸೃಷ್ಟಿ ಆಗಲಿದೆ.
ಹೀಗಾಗಿ, ಕಾಂಗ್ರೆಸ್‌ನ ಈ ಹೊಸ ಪ್ರಯೋಗ ಯಾವ ರೀತಿ ಕರ್ನಾಟಕದಲ್ಲಿ ಯಾವ ರೀತಿ ಕೆಲಸ ಮಾಡಲಿದೆ ಎನ್ನುವ ಕುತೂಹಲ ಸೃಷ್ಟಿ ಆಗಿದೆ.
Share your comments