1. ಸುದ್ದಿಗಳು

ಸ್ಯಾಂಡಲ್ ವುಡ್ ಕ್ಯೂಟ್ ಬ್ಯೂಟಿ ನಟಿ ಮಯೂರಿ ಸರಳ ವಿವಾಹ

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಖ್ಯಾತಿ ಪಡೆದು ಜನಮನ ಗೆದ್ದು, ಕೃಷ್ಣ ಲೀಲಾ ಸಿನಿಮಾ ಮೂಲಕ ಸ್ಯಾಂಡಲ್'ವುಡ್'ನಲ್ಲಿ ಸದ್ದು ಮಾಡಿದ್ದ ನಟಿ ಮಯೂರಿಯವರು ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಯೂರಿ ಅವರು ಬಾಲ್ಯದ ಗೆಳೆಯ ಅರುಣ್ ಅವರೊಂದಿಗೆ 10 ವರ್ಷದ ಪ್ರೀತಿಗೆ ಮದುವೆ ಎಂಬ ಮೂರು ಅಕ್ಷರದ ಹೆಸರಿಟ್ಟಿದ್ದಾರೆ.ಕುಟುಂಬಸ್ಥರ ಒಪ್ಪಿಗೆ ಪಡೆದು ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಜೆಪಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಮಯೂರಿಯವರ ವಿವಾಹ ಸರಳವಾಗಿ ನೆರವೇರಿತು. ಕೊರೋನಾ ಹಿನ್ನೆಲೆಯಲ್ಲಿ ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರನ್ನು ಮಾತ್ರ ಆಹ್ವಾನಿಸಲಾಗಿತ್ತು.

ಮಯೂರಿ ಅವನ್ನು ವರಿಸಿರುವ ಅರುಣ್ ಐಟಿ ಉದ್ಯೋಗಿಯಾಗಿದ್ದು, ಅಮೆರಿಕದಲ್ಲಿ ನೆಲೆಸಿದ್ದರು. ಸದ್ಯ ಈಗ ಅವರು ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಮಯೂರಿ ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿ ನoತರ ಕೃಷ್ಣ ಲೀಲಾ , ಇಷ್ಟಕಾಮ್ಯ , ನಟರಾಜ ಸರ್ವಿಸ್ , ಕರಿಯ -2 ರ್ಯಾಂಬೋ -2 , ಜಾನಿ ಜಾನಿ ಎಸ್ ಪಪ್ಪಾ , 8 ಎಂ.ಎಂ , ರುಸ್ತುಂ, ನನ್ನ ಪ್ರಕಾರ, ಹಾಗೂ ಮೌನಂ ಸೇರಿದಂತೆ ಹಲವಾರು ವಿಭಿನ್ನ ಪಾತ್ರಗಳಲ್ಲಿ ಮಿಂಚಿ ಸಿನಿಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ.

Published On: 13 June 2020, 11:07 AM English Summary: Kannada Actress Mayuri Kyatari Ties Wedding Knot With Boyfriend Arun

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.