1. ಸುದ್ದಿಗಳು

ಕೆ.ಕೆ.ಆರ್.ಡಿ.ಬಿಯಲ್ಲಿ ವಿವಿಧ ಹುದ್ದೆಗಳ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ, 40 ಸಾವಿರ ವೇತನ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ರಚಿಸಲಾದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕೋಶಗಳಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದ ಕಾರ್ಯನಿರ್ವಹಿಸಲು ಈ ಕೆಳಕಂಡ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕಲಬುರಗಿ, ಬೀದರ, ಯಾದಗಿರ, ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ತಾಂತ್ರಿಕ ಸಲಹೆಗಾರರು (ಪ್ರತಿ ಜಿಲ್ಲೆಗೆ ಒಬ್ಬರಂತೆ) 6 ಹುದ್ದೆಗಳಿಗೆ ಪಿಡಬ್ಲ್ಯೂಡಿ. ಪಿಆರ್‍ಇಡಿ., ಎಂಐ, ಆರ್‍ಡಬ್ಲ್ಯೂಎಸ್., ಕೆಯುಡಬ್ಲ್ಯೂಎಸ್‍ಡಿಬಿ ಹಾಗೂ ಕೆಆರ್‍ಐಡಿಎಲ್ (PWD, PRED, MI, RWS, KUWSDB    ಮತ್ತು  KRIDL) ಇಲಾಖೆಗಳ ನಿವೃತ್ತ ಅಧೀಕ್ಷಕ ಅಭಿಯಂತರರು ಅಥವಾ ಕನಿಷ್ಠ 05 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ ಗೌರವಧನ 40,000 ರೂ. ನೀಡಲಾಗುತ್ತದೆ.

ತಾಂತ್ರಿಕ ಅಧಿಕಾರಿ 6 ಹುದ್ದೆಗಳಿಗೆ ಪಿಡಬ್ಲ್ಯೂಡಿ. ಪಿಆರ್‍ಇಡಿ., ಎಂಐ, ಆರ್‍ಡಬ್ಲ್ಯೂಎಸ್., ಕೆಯುಡಬ್ಲ್ಯೂಎಸ್‍ಡಿಬಿ ಹಾಗೂ ಕೆಆರ್‍ಐಡಿಎಲ್ (PWD, PRED, MI, RWS, KUWSDB ಮತ್ತು KRIDL)ಇಲಾಖೆಗಳ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು ಅಥವಾ ಕನಿಷ್ಠ 05 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ ಗೌರವಧನ 30,000 ರೂ. ನೀಡಲಾಗುತ್ತದೆ. ಡಾಟಾ ಎಂಟ್ರಿ ಆಪರೇಟರ್ 6 ಹುದ್ದೆಗಳಿಗೆ ಯಾವುದೇ ಪದವಿ ಅಥವಾ ಕಂಪ್ಯೂಟರ್ ಕೋರ್ಸ್ ಸರ್ಟಿಪೀಕೇಟ್ ಹೊಂದಿರಬೇಕು. 

ಮಂಡಳಿಯ ಕಾರ್ಯದರ್ಶಿಗಳು ಅಧ್ಯಕ್ಷತೆಯಲ್ಲಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಿವೃತ್ತ ಅಧಿಕಾರಿ, ಸಿಬ್ಬಂದಿಗಳ ವಯೋಮಿತಿ 65 ವರ್ಷ ಮೀರಿರಬಾರದು. ನಿವೃತ್ತ ಅಧಿಕಾರಿ/ಸಿಬ್ಬಂದಿಗಳು ತಮ್ಮ ಪಿಂಚಣಿ ಪತ್ರದ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ಗರಿಷ್ಠ ಒಂದು ವರ್ಷದ ಅವಧಿಗೆ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಕನ್ನಡ  ಹಾಗೂ ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಮಾಡುವ ಜ್ಞಾನದ ಜೊತೆಗೆ 2 ವರ್ಷಗಳ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಜಿಲ್ಲೆಯ ಕೇಂದ್ರ ಸ್ಥಳದಲ್ಲಿ ವಾಸಿಸುತ್ತಿರುವುದು ಕಡ್ಡಾಯವಾಗಿರುತ್ತದೆ.

ಆಸಕ್ತಿಯುಳ್ಳ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲಾತಿಗಳನ್ನು ಲಗತ್ತಿಸಿ ಕಲಬುರಗಿ ಐವಾನ್ ಶಾಹಿಯಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯಾಲಯದಲ್ಲಿ (ರಜಾದಿನ ಹೊರತುಪಡಿಸಿ) 2020ರ ಡಿಸೆಂಬರ್ 29ರ ಸಂಜೆ 5.30 ರೊಳಗಾಗಿ ಕಚೇರಿ ಸಮಯದಲ್ಲಿ ಸಲ್ಲಿಸಬೇಕು.

ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯಾಲಯದಲ್ಲಿ  2020ರ ಡಿಸೆಂಬರ್ 31 ರಂದು ಬೆಳಿಗ್ಗೆ 11 ಗಂಟೆಗೆ ಸಂದರ್ಶನವನ್ನು ನಿಗದಿಪಡಿಸಲಾಗಿದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ಕಚೇರಿಯನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಲು ಕೋರಲಾಗಿದೆ.

Published On: 21 December 2020, 02:47 PM English Summary: Job opportunity in kkrdb

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.