1. ಸುದ್ದಿಗಳು

ಕಲಬುರಗಿಯಲ್ಲಿ ಜುಲೈ 8 ಹಾಗೂ 9 ರಂದು ಎರಡು ದಿನ ಉದ್ಯೋಗ ಮೇಳ ಆಯೋಜನೆ

Ramlinganna
Ramlinganna

ಮೆರಿಟ್ಯೂಡ್ ಸ್ಕೀಲ್ ಡೆವಲಪ್‌ಮೆಂಟ್ ಪ್ರೈವೆಟ್ ಲಿಮಿಟೆಡ್ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ  ಇದೇ ಜುಲೈ 8 ಹಾಗೂ 9 ರಂದು ಎರಡು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ಕೆಳಕಂಡ ಹುದ್ದೆಯ ನೇಮಕಾತಿಗಾಗಿ ಕಲಬುರಗಿ ಎಂ.ಎಸ್.ಕೆ. ಮಿಲ್ ರಸ್ತೆಯಲ್ಲಿರುವ ಬಸ್ ಡಿಪೋ ನಂ. 1 ಎದುರುಗಡೆಯಿರುವ  (ಪುರುಷ) ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್‌ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

ವಾಣಿಜ್ಯ ಸೇವಾ ಅಧಿಕಾರಿ (ಕ್ಷೇತ್ರ ಕಾರ್ಯ) ಹುದ್ದೆಗೆ ಅರ್ಹ ಪುರುಷ ಅಭ್ಯರ್ಥಿಗಳು ಮಾತ್ರ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ., ಐಟಿಐ, ಪಿಯುಸಿ ಹಾಗೂ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 32 ವರ್ಷದೊಳಗಿರಬೇಕು. ಮಾಸಿಕ 15,000 ರಿಂದ 18,000 ರೂಪಾಯಿ ವೇತನ ನೀಡಲಾಗುತ್ತದೆ.

ಅರ್ಹ ಪುರುಷ ಅಭ್ಯರ್ಥಿಗಳನ್ನು ಮೇಲ್ಕಂಡ ದಿನದಂದು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8660996093, 7483155345 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಕೊರೋನಾ ಸೋಂಕು ತಡೆಯುವುದಕ್ಕಾಗಿ ಹೇರಲಾದ ಲಾಕ್ಡೌನ್ ದಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ಮತ್ತು ಹೊಸದಾಗಿ ಉದ್ಯೋಗ ಮಾಡಲಿಚ್ಚಿಸುವವರಿಗೆ ಈ ಉದ್ಯೋಗ ಮೇಳ ಉಪಯೋಗವಾಗಲಿದೆ. ಕಲಬುರಗಿ ಜಿಲ್ಲೆಯಲ್ಲಿ ಲಾಕ್ಡೌನ್ ಗಿಂತ ಮುಂಚಿತವಾಗಿ ಈಗಾಗಲೇ ಹಲವು ಸಲ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಈಗ ಕೊರೋನಾ ಸೋಂಕು ಕಡಿಮೆಯಾಗಿದ್ದರಿಂದ ಉದ್ಯೋಗ ಕಳೆದುಕೊಂಡವರಿಗೆ ಹಾಗೂ ಪ್ರತಿಭಾವಂತವರಿಗೆ ಉದ್ಯೋಗ ನೀಡಲು ಈ ಮೇಳ ಆಯೋಜಿಸಲಾಗಿದೆ.

;

ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲಾತಿ ಹಾಗೂ ಇತ್ತೀಚೀನ ಭಾವಚಿತ್ರ ಮತ್ತು ಬಯೋಡಾಟಾ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಉದ್ಯೋಗ ಮೇಳ ಹಾಗೂ ಇನ್ನಿತರ ಮಾಹಿತಿ ಪಡೆಯಲು ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8660996093, 7483155345 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.