1. ಸುದ್ದಿಗಳು

ಜಿ20ಗೆ ಭಾರತದ ಅಧ್ಯಕ್ಷತೆ ಜಾಗತಿಕ ಆರ್ಥಿಕ ಶಕ್ತಿ: ಸುಂದರ್ ಪಿಚೈ

Hitesh
Hitesh
India's Presidency of G20 Global Economic Power: Sundar Pichai

ಭಾರತವು ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವುದು ಮುಕ್ತ, ಸಂಪರ್ಕಿತ, ಸುರಕ್ಷಿತ ಹಾಗೂ ಎಲ್ಲರಿಗೂ ಇಂಟರ್ನೆಟ್ ಸೇವೆ ಕಲ್ಪಿಸಿ,

ಜಾಗತಿಕ ಆರ್ಥಿಕತೆ ಸದೃಢಪಡಿಸುವ ನಿಟ್ಟಿನಲ್ಲಿ ಮಹತ್ವದ ಅವಕಾಶವಾಗಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.

ನನ್ನ ಬದುಕಿನ ಭಾಗವಾಗಿರುವ ಭಾರತವನ್ನು,  ನಾನು ಎಲ್ಲಿಗೆ ಹೋದರೂ ಕೊಂಡೊಯುತ್ತೇನೆ.

ನನ್ನ ಆಸಕ್ತಿಗಳನ್ನು ಅನ್ವೇಷಿಸಲು ಅವಕಾಶಗಳಿವೆ ಎಂದು ಖಚಿತಪಡಿಸಿಕೊಳ್ಳಲು ಬಹಳಷ್ಟು ತ್ಯಾಗ

ಮಾಡಿದ ಪೋಷಕರನ್ನು ಪಡೆಯಲು ಹಾಗೂ ಕಲಿಕೆಯನ್ನು ಪ್ರೋತ್ಸಾಹಿಸುವ ಕುಟುಂಬದಲ್ಲಿ ಬೆಳೆಯಲು ಅದೃಷ್ಟ ಮಾಡಿದ್ದೆ ಎಂದಿದ್ದಾರೆ.

ಕಬ್ಬನ್‌ ಪಾರ್ಕ್‌ನಲ್ಲಿ ಬರಲಿದೆ ಸುರಂಗ ಅಕ್ವೇರಿಯಂ! ಸುರಂಗ ಅಕ್ವೇರಿಯಂನ ವಿಶೇಷತೆಗಳೇನು ಗೊತ್ತೆ ?

ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ದೃಷ್ಟಿಯು ನಿಸ್ಸಂಶಯವಾಗಿ ವೇಗವರ್ಧಕವಾಗಿದೆ.

ಪರಿವರ್ತನಾಶೀಲವಾದ ಎರಡು ದಶಕಗಳಿಂದ ಸರ್ಕಾರಗಳು, ಉದ್ಯಮಗಳು ಮತ್ತು ಸಮುದಾಯಗಳ

ಪಾಲುದಾರಿಕೆಯೊಂದಿಗೆ ಭಾರತದಲ್ಲಿ ಹೂಡಿಕೆ ಮಾಡುವುದನ್ನು ಗೂಗಲ್‌ ಮುಂದುವರಿಸುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಇನ್ನು ಡಿಜಿಟಲ್ ಕೌಶಲ್ಯ ತರಬೇತಿಗೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದೇವೆ. ಮಹಿಳಾ ಉದ್ಯಮಶೀಲತೆ

ಕಾರ್ಯಕ್ರಮದ ಮೂಲಕ 10 ಲಕ್ಷ ಮಹಿಳೆಯರಿಗೆ ತರಬೇತಿ ನೀಡಿದ್ದೇವೆ ಎಂದು ಪಿಚೈ ಅವರು ಮಾಹಿತಿ ನೀಡಿದ್ದಾರೆ.

ಭಾರತದ ಡಿಜಿಟಲೀಕರಣಕ್ಕೆ 814,21 ಕೋಟಿ ರೂಪಾಯಿ ಮೊತ್ತದ ಬಂಡವಾಳ ಹೂಡಿಕೆ ಮಾಡುವುದಾಗಿ ಗೂಗಲ್ಇತ್ತೀಚೆಗೆ ಘೋಷಿಸಿತ್ತು.

ಭಾರತವು ಜಿ–20 ಗುಂಪಿನ ಅಧ್ಯಕ್ಷತೆಯನ್ನು  ಡಿಸೆಂಬರ್1ಕ್ಕೆ ವಹಿಸಿಕೊಂಡಿದೆ. 

ಅಧ್ಯಕ್ಷತೆ ಅವಧಿಯಲ್ಲಿ ದೇಶದ 50ಕ್ಕೂ ಹೆಚ್ಚು ನಗರಗಳ 32 ವಿವಿಧ ವಲಯಗಳಲ್ಲಿ 200 ಸಭೆಗಳನ್ನು ಆಯೋಜಿಸಲಾಗುತ್ತದೆ.

ಇನ್ನು ಕಳೆದ ನವೆಂಬರ್16ರಂದು ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ

ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷತೆಯನ್ನು ಹಸ್ತಾಂತರಿಸಿದ್ದರು.

ಚಿರತೆ ಹಾವಳಿ ತಡೆಗೆ ವಿಶೇಷ ತಂಡ ರಚನೆ, ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷ ಪರಿಹಾರ: ಸಿ.ಎಂ ಬೊಮ್ಮಾಯಿ

Published On: 04 December 2022, 02:27 PM English Summary: India's Presidency of G20 Global Economic Power: Sundar Pichai

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.